
ಟಾಟಾ ಸನ್ಸ್ ಸಮೂಹಕ್ಕೆ ನೂತನ ಸಾರಥಿಯಾಗಿ ಚಂದ್ರಶೇಖ | ತೆರವಾಗಿದ್ದ ಸಿಇಓ ಸ್ಥಾನಕ್ಕೆ 3 ತಿಂಗಳೊಳಗೆ ನೇಮಕ | ಎಲ್ಲರ ಸಹಕಾರ ಕೋರಿದ ಚಂದ್ರಶೇಖರನ್ | ಇವರ ನೇಮಕವನ್ನು ಶ್ಲಾಘಿಸಿದ ನಾರಾಯಣ ಮೂರ್ತಿ
ನವದೆಹಲಿ (ಜ.12): ಟಾಟಾ ಸನ್ಸ್ ಸಮೂಹದ ನೂತನ ಸಿಇಓ ಆಗಿ ನೇಮಕಗೊಂಡ ಎನ್. ಚಂದ್ರಶೇಖರನ್, ಜನರ ಹೃದಯಯಲ್ಲಿ ಚಿರಸ್ಥಾಯಿಯಾಗುವಂತೆ ಸಂಸ್ಥೆಯನ್ನು ಬೆಳೆಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ ಎಂದಿದ್ದಾರೆ.
ನಮ್ಮ ಸಂಸ್ಥೆ ಎಲ್ಲರನ್ನು ತಲುಪುವಂತೆ ಮಾಡಲು ಸಿಬ್ಬಂದಿಗಳ ಸಹಕಾರ ನನಗೆ ಅಗತ್ಯ. ಟಾಟಾ ಸಮೂಹ ಕಟ್ಟಿಕೊಂಡಿರುವ ನೀತಿ, ತತ್ವ ಮತ್ತು ಮೌಲ್ಯಗಳನ್ನು ಅಭಿವೃದ್ಧಿಪಡಿಸುವುದು ನನ್ನ ಕರ್ತವ್ಯ ಎಂದಿದ್ದಾರೆ.
ಇವರ ನೇಮಕದ ಕುರಿತು ಪ್ರತಿಕ್ರಿಯಿಸಿದ ಇನ್ಫೋಸೊಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ, ಇದೊಂದು ಒಳ್ಳೆಯ ಆಯ್ಕೆ. ಚಂದ್ರಶೇಖರನ್ ಯಾವಾಗಲೂ ಜನರ ಜೊತೆ ಬೆರೆಯುತ್ತಾ ಕಲಿಯುತ್ತಾರೆ. ಸದಾ ವಿದ್ಯಾರ್ಥಿಯಾಗಿರುತ್ತಾರೆ. ಜನರ ಜೊತೆ ಮುಕ್ತವಾಗಿ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಇಡೀ ಟಾಟಾ ಉದ್ಯಮವು ಇವರ ನೇಮಕವನ್ನು ಸಂಭ್ರಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಶ್ಲಾಘಿಸಿದ್ದಾರೆ.
ಯಾರೀ ಚಂದ್ರಶೇಖರ್? ಏನಿವರ ವಿಶೇಷತೆ?
ನಟರಾಜನ್ ಚಂದ್ರಶೇಖರನ್ 1963 ರಲ್ಲಿ ಜನಿಸಿದರು. ಪತ್ನಿ ಲಲಿತಾ ಮತ್ತು ಮಗ ಪ್ರಣವ್. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. 2009 ರಿಂದ ಟಿಎಸ್ ಟಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಇವರು, ಸಂಸ್ಥೆಯ ಮುಕುಟ ಪ್ರಾಯವಾಗಿದ್ದರು. ತಮ್ಮ 46 ನೇ ವಯಸ್ಸಿನಲ್ಲಿ ಟಾಟಾ ಸಮೂಹಕ್ಕೆ ಸಿಇಒ ಆಗಿ ನೇಮಕಗೊಂಡ ಿವರು ಕಿರಿಯ ವಯಸ್ಸಿಗೆ ಸಿಇಒ ಹುದ್ದೆ ಅಲಂಕರಿಸಿದ ಹೆಮ್ಮೆ ಇವರದು.
ಕೊಯಮತ್ತೂರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದು, ತಿರುಚಿಯ ರೀಜನಲ್ ಎಂಜಿನೀಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದಾರೆ. ಇವರಿಗೆ ಗೌರವ ಡಾಕ್ಟರೇಟ್ ಸಹ ನೀಡಲಾಗಿದೆ. ಭಾರತೀಯ ಸರ್ಕಾರದ ಹಲವು ಕಾರ್ಯಪಡೆಗಳ ಸದಸ್ಯರೂ ಆಗಿದ್ದಾರೆ.
ಇವರು ಟಿಸಿಎಸ್ ಸಿಇಒ ಆಗಿದ್ದ ಸಮಯದಲ್ಲಿ ಕಂಪನಿಯ ನಿವ್ವಳ ಮಾರಾಟ (ನೆಟ್ ಸೇಲ್) ಮೂರು ಪಟ್ಟು ಹೆಚ್ಚಿಸಿದ್ದರು. 2010 ವಿತ್ತೀಯ ವರ್ಷದಲ್ಲಿ 30,029 ಕೋಟಿಗಳಷ್ಟಿದ್ದ ನಿವ್ವಳ ಮಾರಾಟ 2016 ವಿತ್ತೀಯ ವರ್ಷದಲ್ಲಿ 1.09 ಲಕ್ಷ ಕೋಟಿಗಳಿಗೆ ಹೆಚ್ಚಾಗಿತ್ತು.
ಫೋಟೋಗ್ರಫಿ ಇವರಿಗೆ ಅಚ್ಚುಮೆಚ್ಚು. ಬಹುದೂರ ಓಡುವುದರಲ್ಲಿ ಯಾವಾಗಲೂ ಮುಂದು. ಆ್ಯಂಸ್ಟರ್ ಡ್ಯಾಂ, ಬೋಸ್ಟೋನ್, ಬರ್ಲಿನ್, ನ್ಯೂಯಾರ್ಕ್, ಟೋಕಿಯೋ ಸೇರಿದಂತೆ ಕೆಲವು ನಗರಗಳಲ್ಲಿ ಮ್ಯಾರಾಥಾನ್ ಸ್ಪರ್ಧೆಯಲ್ಲಿಯೂ ಸಹ ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.