ಹಂಚಿ ಮಿಠಾಯಿ: 100 ರೂ. ನಾಣ್ಯದ ಮೇಲೆ ವಾಜಪೇಯಿ!

Published : Dec 13, 2018, 10:19 PM ISTUpdated : Dec 13, 2018, 10:53 PM IST
ಹಂಚಿ ಮಿಠಾಯಿ: 100 ರೂ. ನಾಣ್ಯದ ಮೇಲೆ ವಾಜಪೇಯಿ!

ಸಾರಾಂಶ

100 ರೂ. ಕಾಯಿನ್ ಮೇಲೆ ಅಟಲ್ ಬಿಹಾರಿ ವಾಜಪೇಯಿ| ಸಮಸ್ತ ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ| ಡಿ.25 ರಂದು ವಾಜಪೇಯಿ ಜನ್ಮಜಯಂತಿಯಂದು ಬಿಡುಗಡೆ| ನಾಣ್ಯದ ಹಿಂಬದಿಯಲ್ಲಿ ವಾಜಪೇಯಿ ಚಿತ್ರ ಮುದ್ರಿತ  

ನವದೆಹಲಿ(ಡಿ.13): ಸಮಸ್ತ ಭಾರತೀಯರಿಗೆ ಅತ್ಯಂತ ಖುಷಿಯ ವಿಚಾರವೊಂದನ್ನು ಕೇಂದ್ರ ಸರ್ಕಾರ ನೀಡಿದೆ. ಅದೇನಪ್ಪ ಅಂತಹ ಖುಷಿ ವಿಚಾರ ಅಂತೀರಾ. ಕೇಂದ್ರ ಸರ್ಕಾರ ಶೀಘ್ರದಲ್ಲೇ ಹೊಸ 100 ರೂ. ನಾಣ್ಯಗಳನ್ನು ಟಂಕಿಸಲಿದ್ದು, ಇದರಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಚಿತ್ರ ಮುದ್ರಿಸಲಾಗುತ್ತದೆ.

ಹೌದು, ಇದೇ ಡಿಸೆಂಬರ್ 25 ರಂದು ಮಾಜಿ ಪ್ರಧಾನಿ, ಅಜಾತಶತ್ರು  ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ 94ನೇ ಜನ್ಮ ಜಯಂತಿ ಇದ್ದು, ಈ ಹಿನ್ನೆಲೆಯಲ್ಲಿ ಹೊಸ 100 ರೂ. ನಾಣ್ಯಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಈ ನಾಣ್ಯಗಳ ಹಿಂಬದಿಯಲ್ಲಿ ವಾಜಪೇಯಿ ಅವರ ಚಿತ್ರ ಮುದ್ರಿತವಾಗಿರಲಿದ್ದು, ದೇವನಾಗರಿ ಲಿಪಿ ಮತ್ತು ಇಂಗ್ಲೀಷ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಎಂದು ಬರೆಯಲಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ