ರಾಹುಲ್ ಪೌರತ್ವ ವಿವಾದ: ನೋಟಿಸ್ ಮಾಹಿತಿ ನೀಡಲು ಕೇಂದ್ರ ನಕಾರ!

By Web DeskFirst Published Jun 4, 2019, 5:19 PM IST
Highlights

ರಾಹುಲ್ ಗಾಂಧಿ ಬ್ರಿಟಿಷ್ ಪೌರತ್ವ ವಿವಾದ| ಕಾಂಗ್ರೆಸ್ ಅಧ್ಯಕ್ಷರಿಗೆ ಗೃಹ ಸಚಿವಾಲಯ ನೋಟಿಸ್| ನೋಟಿಸ್ ಕುರಿತು ಮಾಹಿತಿ ನೀಡಲು ಕೇಂದ್ರ ಗೃಹ ಸಚಿವಾಲಯ ನಿರಾಕರಣೆ| ರಾಹುಲ್ ಗಾಂಧಿಗೆ ನೀಡಿದ ನೋಟಿಸ್ ಪ್ರತಿ ನೀಡುವಂತೆ ಆರ್‌ಟಿಐ ಅರ್ಜಿ| ಪೌರತ್ವ ವಿವಾದ ಕುರಿತು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನೀಡಿದ್ದ ದೂರು| 

ನವದೆಹಲಿ(ಜೂ.04): ಬ್ರಿಟಿಷ್ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ನೋಟಿಸ್ ಬಗ್ಗೆ ಯಾವುದೇ ಮಾಹಿತಿ ನೀಡಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.

ರಾಹುಲ್ ಗಾಂಧಿಗೆ ನೀಡಿದ ನೋಟಿಸ್ ಪ್ರತಿ ನೀಡುವಂತೆ ಮತ್ತು ನೋಟಿಸ್‌ಗೆ ಅವರು ನೀಡಿದ ಉತ್ತರದ ವಿವರ ನೀಡುವಂತೆ ಕೋರಿ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ, ಯಾವುದೇ ಮಾಹಿತಿ ನೀಡಲು ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದೆ.

ನೋಟಿಸ್ ಕುರಿತು ಮಾಹಿತಿ ನೀಡುವುದರಿಂದ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ ಉತ್ತರಿಸಿದೆ.

ರಾಹುಲ್ ಗಾಂಧಿ ಅವರ ಬ್ರಿಟಿಷ್ ಪೌರತ್ವ ಕುರಿತು ಹಿರಿಯ ಬಿಜೆಪಿ ನಾಯಕ ಡಾ. ಸುಬ್ರಹ್ಮಣ್ಯಂ ಸ್ವಾಮಿ ಅವರ ದೂರಿನ ಮೇರೆಗೆ ಕೇಂದ್ರ ಗೃಹ ಸಚಿವಾಲಯ ಕಳೆದ ಏಪ್ರಿಲ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ ನೋಟಿಸ್ ಜಾರಿ ಮಾಡಿದ್ದು, 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿತ್ತು. 

ರಾಹುಲ್ ಗಾಂಧಿ ಅವರು ಬ್ರಿಟಿಷ್ ಪೌರತ್ವ ಪಡೆದುಕೊಂಡಿದ್ದು, ಭಾರತದಲ್ಲಿ ದ್ವಿಪೌರತ್ವಕ್ಕೆ ಅವಕಾಶವಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರ ಸ್ಪರ್ಧೆಯನ್ನು ಅನರ್ಹಗೊಳಿಸಬೇಕು ಎಂದು ಸುಬ್ರಹ್ಮಣ್ಯಂ ಸ್ವಾಮಿ ಆಗ್ರಹಿಸಿದ್ದರು. 
 

click me!