ರೆಡಿ ಫ್ಲಾಟ್ ಮಾರದಿದ್ದರೆ ತೆರಿಗೆ?

By Suvarna Web DeskFirst Published Nov 29, 2017, 7:46 AM IST
Highlights
  • ಹೆಚ್ಚಿನ ಬೆಲೆ ಬರಲೆಂದು ಕಾಯುವ ಬಿಲ್ಡರ್‌ಗಳಿಗೆ ಕೇಂದ್ರದಿಂದ ಶಾಕ್
  • ಶೇ.8-10ರಷ್ಟು ತೆರಿಗೆ ವಿಧಿಸಲು ಚಿಂತನೆ.ಉಳಿದಿವೆ 10 ಲಕ್ಷ ಫ್ಲ್ಯಾಟ್

ನವದೆಹಲಿ: ಭವಿಷ್ಯದ ದಿನಗಳಲ್ಲಿ ಹೆಚ್ಚಿನ ಬೆಲೆ ಸಿಗಬಹುದು ಎಂಬ ಕಾರಣಕ್ಕೆ ನಿರ್ಮಾಣ ಕಾಮಗಾರಿ ಮುಗಿದಿದ್ದರೂ ಫ್ಲ್ಯಾಟ್‌ಗಳನ್ನು ಮಾರಾಟ ಮಾಡದೆ ಕಾಳಸಂತೆ ದಂಧೆ ನಡೆಸುವ ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ತೆರಿಗೆ ವಿಧಿಸುವ ಮೂಲಕ ಶಾಕ್ ನೀಡಲು ಕೇಂದ್ರ ಸರ್ಕಾರ ಚಿಂತಿಸಿದೆ. ಹೊಸ ವರ್ಷದಿಂದಲೇ ಈ ತೆರಿಗೆ ಜಾರಿಗೆ ಬರಬಹುದು ಹೇಳಲಾಗಿದೆ.

 ಮಾರಾಟವಾಗದ ರಿಯಲ್ ಎಸ್ಟೇಟ್ ಆಸ್ತಿಗಳಿಗೆ ತೆರಿಗೆ ವಿಧಿಸುವ ಸಂಬಂಧ ಆಂತರಿಕ ಮಾರ್ಗಸೂಚಿಯೊಂದನ್ನು ಸಿದ್ಧಪಡಿಸಲಾಗಿದ್ದು, ದೇಶಾದ್ಯಂತ ಇರುವ ಆದಾಯ ತೆರಿಗೆ ಅಧಿಕಾರಿಗಳಿಗೆ ಈಗಾಗಲೇ ರವಾನಿಸಲಾಗಿದೆ.

ಮಾರಾಟವಾಗದೇ ಉಳಿದಿರುವ ಫ್ಲ್ಯಾಟ್‌ಗಳಿಗೆ ಶೇ.8ರಿಂದ ಶೇ.10 ರಷ್ಟು ತೆರಿಗೆ ವಿಧಿಸಬಹುದಾಗಿದೆ ಎಂದು ಪತ್ರಿಕೆ ತಿಳಿಸಿದೆ. ದೇಶದ 8 ನಗರಗಳಲ್ಲಿ 10 ಲಕ್ಷದಷ್ಟು ಫ್ಲ್ಯಾಟ್‌ಗಳು ಮಾರಾಟವಾಗದೇ ಉಳಿದಿವೆ ಎಂದು ಹೇಳಲಾಗಿದೆ. ಸರ್ಕಾರ ಇದಕ್ಕೆ ತೆರಿಗೆ ವಿಧಿಸಿದರೆ ಬಿಲ್ಡರ್‌ಗಳು ತಮ್ಮಲ್ಲಿರುವ ಫ್ಲ್ಯಾಟ್‌ಗಳನ್ನು ಬೇಗ ಖಾಲಿ ಮಾಡಲು ದರ ಇಳಿಸುವ ಸಾಧ್ಯತೆಯೂ ಇದೆ.

(ಸಾಂದರ್ಭಿಕ ಚಿತ್ರ)

 

click me!