ಶತ್ರುಗಳ ಬೇಟೆಗೆ ಭಾರತೀಯ ಸೇನೆ ತಯಾರಿ: ತುರ್ತು ಸೌಲಭ್ಯಕ್ಕಾಗಿ 40 ಸಾವಿರ ಕೋಟಿ ಮಂಜೂರು

By Suvarna Web DeskFirst Published Jul 14, 2017, 11:28 PM IST
Highlights

ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ಸೇರಿದಂತೆ ಪಾಕ್ ಮತ್ತು ಚೀನಾ ಭಾರತದ ವಿರುದ್ಧ ಕೆಂಡ ಕಾರ್ತಿವೆ. ಯಾವ್ದೇ ಕ್ಷಣದಲ್ಲಿ ಬೇಕಾದ್ರು ಕಾಶ್ಮೀರದ ಗಡಿ ನುಸುಳಿ ಬರೋಕೆ ಸಿದ್ಧವಾಗಿವೆ. ಹೀಗಾಗಿ ಉಗ್ರರ ಉದ್ಧಟತನಕ್ಕೆ ಬ್ರೇಕ್ ಹಾಕೋಕೆ ಭಾರತೀಯ ಸೇನೆ ಸಿದ್ಧವಾಗ್ತಿದೆ. ಸೇನೆಗೆ ಬೇಕಾದ ತುರ್ತು ಸೌಲಭ್ಯಗಳಿಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ 40 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ನವದೆಹಲಿ(ಜು.14): ಪಾಕಿಸ್ತಾನದ ಉಗ್ರಗಾಮಿಗಳ ಪುಂಡಾಟಕ್ಕೆ ಪ್ರತ್ಯುತ್ತರ ನೀಡೋದಿಕೆ ಭಾರತೀಯ ಸೇನೆ ಸಿದ್ಧವಾಗಿದೆ. ಯಾವುದೇ ಕ್ಷಣದಲ್ಲಿ ನೆರೆಯ ಪಾಕ್ ಅಥವಾ ಚೀನಾ ದೇಶ ದಾಳಿ ನಡೆಸಿದರೂ  ಪ್ರತಿದಾಳಿಗೆ ಸಿದ್ಧವಾಗಿರಿ ಅಂತ ಕೇಂದ್ರ ಸೂಚಿಸಿದೆ. ಯುದ್ಧದ ತುರ್ತು ಸೌಲಭ್ಯಗಳಿಗಾಗಿ ಬರೋಬ್ಬರಿ 40 ಸಾವಿರ ಕೋಟಿ ಹಣವನ್ನು ಮೋದಿ ಸರ್ಕಾರ ಮಂಜೂರು ಮಾಡಿದೆ.

ಲಷ್ಕರ್ ಇ ತೋಯ್ಬಾ ಉಗ್ರ ಸಂಘಟನೆ ಸೇರಿದಂತೆ ಪಾಕ್ ಮತ್ತು ಚೀನಾ ಭಾರತದ ವಿರುದ್ಧ ಕೆಂಡ ಕಾರ್ತಿವೆ. ಯಾವ್ದೇ ಕ್ಷಣದಲ್ಲಿ ಬೇಕಾದ್ರು ಕಾಶ್ಮೀರದ ಗಡಿ ನುಸುಳಿ ಬರೋಕೆ ಸಿದ್ಧವಾಗಿವೆ. ಹೀಗಾಗಿ ಉಗ್ರರ ಉದ್ಧಟತನಕ್ಕೆ ಬ್ರೇಕ್ ಹಾಕೋಕೆ ಭಾರತೀಯ ಸೇನೆ ಸಿದ್ಧವಾಗ್ತಿದೆ. ಸೇನೆಗೆ ಬೇಕಾದ ತುರ್ತು ಸೌಲಭ್ಯಗಳಿಗಾಗಿ ಕೇಂದ್ರ ಸರ್ಕಾರ ಬರೋಬ್ಬರಿ 40 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

ಜಮ್ಮು-ಕಾಶ್ಮೀರದ ಸದ್ಯದ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಉಪಟಳ. ಸಿಕ್ಕಿಂ ಗಡಿಯಲ್ಲಿ ಚೀನಾ ತಗಾದೆ.. ಹೀಗಾಗಿ ಯಾವುದೇ ಸಮಯದಲ್ಲಾದ್ರೂ ಯುದ್ಧ ನಡೆಯಬಹುದು. ಹೀಗಾಗಿ ಯುದ್ಧಕ್ಕೆ ಬೇಕಾದ 10 ವಿಧದ ಶಸ್ತ್ರಾಸ್ತ್ರಗಳನ್ನು ಕೊಳ್ಳುವುದಕ್ಕಾಗಿ ಕೇಂದ್ರ ಸರ್ಕಾರ ಹಣ ಮಂಜೂರು ಮಾಡಿದೆ. ಅಷ್ಟೇ ಅಲ್ಲದೇ 46 ಬಗೆಯ ಯುದ್ಧ ಸಾಮಾಗ್ರಿ ಹಾಗೂ ಶಸ್ತ್ರಾಸ್ತ್ರಾಗಳ ಕೆಲ ಬಿಡಿ ಭಾಗಗಳನ್ನು ಕೂಡ ಖರೀದಿಸುವಂತೆ ಸೇನೆಗೆ ಆದೇಶಿಸಿದೆ.

ರಕ್ಷಣಾ ಸಚಿವಾಲಯದ ಪ್ರಕಾರ ಕಾಶ್ಮೀರ ಗಡಿಯ ‘ಉರಿ’ ದಾಳಿ ನಂತ್ರ ಸೇನೆಗೆ ಸುಮಾರು 12 ಸಾವಿರ ಕೋಟಿ ಮೌಲ್ಯದ ಶಸ್ತ್ರಾಸ್ತ್ರಗಳ ಅವಶ್ಯಕತೆ ಇತ್ತು. ಆ ಕ್ಷಣದಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಸೇನಾ ಪ್ರಮುಖರನ್ನ ಬಹುವಾಗಿ ಕಾಡಿತ್ತು. ಹೀಗಾಗಿ ಇನ್ಮುಂದೆ ಸೇನೆಗೆ ಯುದ್ಧ ಸಂದರ್ಭದಲ್ಲಿ ಯಾವುದೇ ಶಸ್ತ್ರಾಸ್ತ್ರಗಳ ಲೋಪವಿರಬಾರದು ಅಂತ ರಕ್ಷಣಾ ಸಚಿವಾಲಯ ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ ಕೇಂದ್ರದ ಮೋದಿ ಸರ್ಕಾರ 40 ಸಾವಿರ ಕೋಟಿ ಹಣವನ್ನ ತುರ್ತಾಗಿ ಮಂಜೂರು ಮಾಡಿದೆ. ಒಟ್ನಲ್ಲಿ ಕಾಲ್ಕೆರೆದು ಜಗಳಕ್ಕೆ ನಿಂತಿರೋ ಅತ್ತ ಪಾಕಿಸ್ತಾನ ಇತ್ತ ಚೀನಾಗೆ ತಕ್ಕ ಪಾಠ ಕಲಿಸೋದಿಕೆ ಭಾರತದ ಮೂರೂ ದಂಡನಾಯಕರ ಸಮ್ಮುಖದಲ್ಲಿ ನಮ್ಮ ಸೈನಿಕರು ಸಕಲ ರೀತೀಯಲ್ಲಿ ಸಜ್ಜಾಗ್ತಿದ್ದಾರೆ.

click me!