ಸೆಂಟ್ರಲ್ ಟೀಂ ಎದುರೆ ಬಿಜೆಪಿ ಮುಖಂಡನಿಂದ ಸಂಸದ ಸಿಂಹಗೆ ತರಾಟೆ..!

By Web Desk  |  First Published Sep 13, 2018, 9:44 PM IST

ಕಂಡು ಕೇಳರಿಯದ ರೀತಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ನಲುಗಿದ್ದ ಕೊಡಗಿನಲ್ಲಿ ಸೆಂಟ್ರಲ್ ಟೀಂ ಇಂದು ಕೂಡ ರೌಂಡ್ಸ್ ಹಾಕಿದೆ.ತೀವ್ರ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡಕ್ಕೆ ಎಂಪಿ, ಎಂಎಲ್ಎಗಳು ಸೇರಿದಂತೆ ಡಿಸಿ ಮಾಹಿತಿ ನೀಡಿದರು. ಆದರೆ ಈ ವೇಳೆ ಸಂಸದ ಪ್ರತಾಪ್ ಸಿಂಹಗೆ ಬಿಜೆಪಿ ಮುಖಂಡರೊಬ್ಬರು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡರು. ಏನಪ್ಪಾ ಸುದ್ದಿ ಪೂರ್ಣ ಓದಿ..


ಮಡಿಕೇರಿ[ಸೆ.13] ನಿಮ್ಮಂಥವರಿಂದ ಪಕ್ಷ ಉದ್ದಾರ ಆಗಲ್ಲ.. ನಿಮ್ಮನ್ನ ಆಯ್ಕೆ ಮಾಡಿ ಕಳಿಸಿದ್ದೇ ನಮ್ಮ ದುರಂತ, ಜಿಲ್ಲೆಯ ದುರಂತ. ತಪ್ಪು ಮಾಹಿತಿ ನೀಡಿ ಜನರನ್ನ ಒಕ್ಕಲೆಬ್ಬಿಸಲು ಯತ್ನಿಸುತ್ತಿದ್ದೀರಾ..? ಬೆಂದ ಗಾಯಕ್ಕೆ ಪುನಃ ಉಪ್ಪಿನ ನೀರು ಹುಯ್ಯುತ್ತಿದ್ದೀರಾ..? ಪಕ್ಷದಲ್ಲಿ ನನ್ನ ವಿರುದ್ಧ ಏನ್ ಕ್ರಮ ತೆಗೆದುಕೊಳ್ತಿರೋ ತಗೊಳ್ಳಿ. ನಾನ್ ಫೇಸ್ ಮಾಡ್ತೀನಿ..

ಅಬ್ಬಬ್ಬಾ..!! ಇದೇನೋ ರಾಜಕೀಯ ಪ್ರಚಾರನೋ.. ಅಥವಾ ರಾಜಕೀಯ ಸಂಬಂಧಿತ ಗಲಾಟೆಯೋ ಅನ್ಕೋಬೇಡಿ.. ಇದು ಪ್ರಾಕೃತಿಕ ವಿಕೋಪಕ್ಕೆ ನಲುಗಿದ ಕೊಡಗು ಜಿಲ್ಲೆಯ ಪ್ರದೇಶಗಳಲ್ಲಿ ಕೇಂದ್ರ ಅಧ್ಯಯನ ತಂಡ ಪರಿಶೀಲನೆ ನಡೆಸೋ ವೇಳೆ ಕೇಳಿಬಂದ ಮಾತಿನ ಬಾಂಬ್.. ಹೀಗೆ ಸಂಸದ ಪ್ರತಾಪ್ ಸಿಂಹರನ್ನ ಮಾತಾನಾಡಲು ಬಿಡದಂತೆ ಮೌತ್ ಬಾಂಬ್ ಸಿಡಿಸಿದ್ದು ಬೇರ್ಯಾರು ಅಲ್ಲ. ಸ್ವತಃ ಕೊಡಗು ಜಿಲ್ಲೆ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ ದೇವಯ್ಯ.

Tap to resize

Latest Videos

ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿಯಲ್ಲಿ ಕೇಂದ್ರ ತಂಡ ಪರಿಶೀಲನೆ ನಡೆಸುವಾಗ ಈ ರೀತಿಯ ಮಾತಿನ ಬಾಣಗಳು ಪ್ರತಾಪ್ ಸಿಂಹರನ್ನ ತಿವಿಯುತ್ತಿದ್ದವು. ಕೇಂದ್ರ ತಂಡಕ್ಕೆ ಸಂಸದರು ತಪ್ಪು ಮಾಹಿತಿ ಕೊಡುತ್ತಿದ್ದಾರೆ, ಈ ಭಾಗದಲ್ಲಿ ಭೂ ಪರಿವರ್ತನೆ ಆಗಿದೆ, ಹೈ ಟೆನ್ಷನ್ ವೈರ್ ಬಂದಿದೆ ಅದು ಇದು ಅಂತ್ಹೇಳಿ ಸೆಂಟ್ರಲ್ ಟೀಂನ ದಿಕ್ಕು ತಪ್ಪಿಸುತ್ತಿದ್ದಾರೆ. ನಮ್ಮನ್ನ ಒಕ್ಕಲೆಬ್ಬಿಸುವ ಹುನ್ನಾರ ಅಡಗಿದೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನೂ ಈ ಮಧ್ಯೆ ಕೇಂದ್ರ ತಂಡ ಇಂದು ಹೆಬ್ಬೆಟ್ಟಗೇರಿ, ದೇವಸ್ತೂರು, ತಂತಿಪಾಲ, ಕಾಲೂರು ಸೇರಿದಂತೆ ಅನೇಕ ಗ್ರಾಮಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿತು.

ಮಹಾಮಳೆಯಿಂದ ತತ್ತರಿಸಿರುವ ಕೊಡಗು ಜಿಲ್ಲೆಯ ವಿವಿಧ ಪ್ರದೇಶಗಳಿಗೆ ನಿನ್ನೆಯಿಂದಲೂ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿತು. ಮನೆಹಾನಿ, ಬೆಳೆ ಹಾನಿ, ಕೊಚ್ಚಿಕೊಂಡು ಹೋಗಿರೋ ರಸ್ತೆಗಳನ್ನ ಕಂಡು ಬೆರಗಾಯಿತು. ಇವತ್ತು ಕೊಡಗಿನಿಂದ ಹಿಂದಿರುಗಿರೋ ಸೆಂಟ್ರಲ್ ಟೀಂ, ಕೇಂದ್ರ ಸರ್ಕಾರಕ್ಕೆ ಸದ್ಯದಲ್ಲೇ ವರದಿಯನ್ನ ಸಲ್ಲಿಸಲಿದೆ. ಕೊಡಗು ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿಗೂ ಅಧಿಕ ನಷ್ಟ ಸಂಭವಿಸಿದ್ದು, ಕೇಂದ್ರದ ಸಮೀಕ್ಷೆ ಕೊನೆಗೂ ಅಂತಿಮವಾದಂತಾಗಿದೆ.  ಇನ್ನೇನಿದ್ರೂ ಬದುಕನ್ನು ಕಳೆದುಕೊಂಡು ಕುಸಿದು ಹೋಗಿರೋ ಜನರ ಜೀವನವನ್ನ ಮತ್ತೆ ಕಟ್ಟಲು ಕೇಂದ್ರದಿಂದ ಎಷ್ಟು ಅನುದಾನ ಬರುತ್ತೆ ಅನ್ನುವುದರ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

 

click me!