ಕಾಂಗ್ರೆಸ್‌ನ ಸಾಲ ಮನ್ನಾ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ?

Published : Dec 15, 2018, 07:35 AM IST
ಕಾಂಗ್ರೆಸ್‌ನ ಸಾಲ ಮನ್ನಾ  ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ?

ಸಾರಾಂಶ

ಕಾಂಗ್ರೆಸ್‌ಸ ರೈತ ಸಾಲ ಮನ್ನಾಕ್ಕೆ ಪ್ರತಿಯಾಗಿ, ಬಿಜೆಪಿ ಹೊಸ ತಂತ್ರ ರೂಪಿಸಲು ಸಿದ್ಧವಾಗಿದೆ. ದೇಶದ ಕಡು ಬಡವರಿಗೆ ಕೇಂದ್ರ ಸರಕಾರ ಪ್ರತಿ ತಿಂಗಳೂ ವೇತನ ನೀಡಲು ಮುಂದಾಗಿದೆ. ಬಡವರ ಒಲೈಕೆಗೆ ಸಾರ್ವತ್ರಿಕ ಕನಿಷ್ಠ ಯೋಜನೆ ಜಾರಿಗೆ ಮುಂದಾಗಿದೆ.

ನವದೆಹಲಿ: ಲೋಕಸಭೆ ಚುನಾವಣೆಗೆ ಕೇವಲ ನಾಲ್ಕೈದು ತಿಂಗಳುಗಳು ಬಾಕಿ ಇರುವಾಗ ತನ್ನ ಭದ್ರಕೋಟೆಯಂತಿದ್ದ ಹಿಂದಿ ಸೀಮೆಯ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಜನರನ್ನು ಅದರಲ್ಲೂ ವಿಶೇಷವಾಗಿ ಕಡುಬಡವರನ್ನು ಸೆಳೆಯಲು ಬಂಪರ್‌ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದೆ. ಫೆ.1ರಂದು ಮಂಡನೆಯಾಗಲಿರುವ ಮಧ್ಯಂತರ ಹಣಕಾಸು ಬಜೆಟ್‌ನಲ್ಲಿ ‘ಸಾರ್ವತ್ರಿಕ ಕನಿಷ್ಠ ಆದಾಯ’ ಯೋಜನೆ ಘೋಷಣೆ ಮಾಡಲು ಚಿಂತನೆ ನಡೆಸಿದೆ.

ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಬಿಜೆಪಿ ಪರಾಭವಗೊಂಡಿದ್ದಕ್ಕೆ ರೈತರ ಆಕ್ರೋಶವೂ ಕಾರಣ ಎಂಬುದನ್ನು ಮನಗಂಡಿರುವ ಸರ್ಕಾರ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಮಂಡಿಸುವ ಬಜೆಟ್‌ನಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಕಾರ್ಯಕ್ರಮಗಳನ್ನು ಪ್ರಕಟಿಸಲು ಗಂಭೀರ ಆಲೋಚನೆಯಲ್ಲಿ ಮುಳುಗಿದೆ ಎಂದು ಆಂಗ್ಲ ಟೀವಿ ವಾಹಿನಿಯೊಂದು ವರದಿ ಮಾಡಿದೆ.

ಫಲಾನುಭವಿಗಳ ನೈಜ ಆದಾಯವನ್ನು ವಿವಿಧ ಮೂಲಗಳಿಂದ ಖಚಿತಪಡಿಸಿಕೊಂಡು ಹಾಗೂ ಸರ್ಕಾರದಿಂದ ದೊರೆಯುವ ಸಬ್ಸಿಡಿಯನ್ನು ಲೆಕ್ಕ ಹಾಕಿ ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು ಜಾರಿಗೆ ತರುವುದಾಗಿ ರಾಜಸ್ಥಾನ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಭರವಸೆ ನೀಡಿತ್ತು. ಆದರೆ ಅದು ಹೆಚ್ಚು ಜನರ ಗಮನ ಸೆಳೆದಿರಲಿಲ್ಲ.

ಏನಿದು ಯೋಜನೆ?:

ಕಡುಬಡವರಿಗೆ ಮಾಸಿಕ ಇಂತಿಷ್ಟುಎಂದು ಸರ್ಕಾರದಿಂದಲೇ ಹಣ ನೀಡುವ ಮೂಲಕ ಅವರನ್ನು ಬಡತನ ರೇಖೆಯಿಂದ ಮೇಲಕ್ಕೆತ್ತುವುದು ಈ ಯೋಜನೆಯ ತಿರುಳು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹಲವಾರು ವರ್ಷಗಳಿಂದ ಈ ಯೋಜನೆ ಚರ್ಚೆಯಲ್ಲಿದೆ. ಕೆನಡಾ ಹಾಗೂ ಸ್ವಿಜರ್ಲೆಂಡ್‌ ಸರ್ಕಾರಗಳು ಪ್ರಾಯೋಗಿಕವಾಗಿ ಅನುಷ್ಠಾನ ನಡೆಸಿವೆ. ಭಾರತದಲ್ಲೂ ಈ ಯೋಜನೆ ಜಾರಿಗೆ ತರಬೇಕು ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಸಲಹೆ ಮಾಡಿದ್ದರು.

ಈ ಯೋಜನೆಯಿಂದ ಬಡವರು ಕೆಲಸ ಮಾಡುವುದನ್ನೇ ಬಿಟ್ಟುಬಿಡುವ ಸಂಭವವಿದೆ ಎಂಬ ವಾದವೂ ಇದೆ. ಆದರೆ ಬಡವರಿಗೆ ಸ್ವಲ್ಪ ಸಹಾಯ ಮಾಡಿದಾಕ್ಷಣ ಆ ರೀತಿ ಏನೂ ಆಗದು ಎಂದು ಸುಬ್ರಮಣಿಯನ್‌ ಈ ಹಿಂದೆಯೇ ತಿಳಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು