ಚೀನಾ, ಪಾಕ್ ಗಡೀಲಿ 44 ರಸ್ತೆ ನಿರ್ಮಾಣ

By Web DeskFirst Published Jan 14, 2019, 12:12 PM IST
Highlights

ಪಾಕ್-ಚೀನಾ ಗಡಿಯಲ್ಲಿ ರಸ್ತೆ ನಿರ್ಮಾಣ | ಪಂಜಾಬ್ ಮತ್ತು ರಾಜಸ್ಥಾನದ 2100 ಕ್ಕೂ ಹೆಚ್ಚು ಕಿಲೋಮೀಟರ್ ಪ್ರಮುಖ ರಸ್ತೆಗಳನ್ನೂ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ನವದೆಹಲಿ (ಜ. 14): ಡೋಕ್ಲಾಂ ಪ್ರದೇಶದಲ್ಲಿ ಚೀನಾ ಕಿರಿಕ್ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಸೇನಾ ನಿಯೋಜನೆ ಮಾಡಬೇಕಾದ ಘಟನೆಯಿಂದ ಎಚ್ಚೆತ್ತುಕೊಂಡ ಕೇಂದ್ರ ಸರ್ಕಾರ, ಪಾಕ್ ಮತ್ತು ಚೀನಾ ಗಡಿಯಲ್ಲಿನ ವ್ಯೆಹಾತ್ಮಕವಾಗಿ ಅತ್ಯಂತ ಮಹತ್ವವಾದ ಪ್ರದೇಶಗಳಲ್ಲಿ 44 ಗಡಿ ರಸ್ತೆ ನಿರ್ಮಾಣಕ್ಕೆ ನಿರ್ಧರಿಸಿದೆ.

ಸೇನಾ ನಿಯೋಜನೆ ಸೇರಿ, ಬೇರಿನ್ನಾವುದೇ ಸಂಪರ್ಕಕ್ಕೆ ಅನುಕೂಲವಾಗುವ ಉದ್ದೇಶದಿಂದ ಚೀನಾ ಗಡಿ ಪ್ರದೇಶ ಹಾಗೂ ಪಾಕಿಸ್ತಾನದ ಗಡಿಗೆ ಹೊಂದಿರುವ ಪಂಜಾಬ್ ಮತ್ತು ರಾಜಸ್ಥಾನದ ೨,೧೦೦ಕ್ಕೂ ಹೆಚ್ಚು ಕಿಲೋಮೀಟರ್ ಪ್ರಮುಖ ರಸ್ತೆಗಳನ್ನೂ ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ 2018-19 ರ ಸಾಲಿನ ಕೇಂದ್ರೀಯ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯು) ವಾರ್ಷಿಕ ವರದಿಯಲ್ಲಿ ಈ ಮಾಹಿತಿ ಇದೆ. ಸಿಪಿಡಬ್ಲ್ಯು ವರದಿಯ ಪ್ರಕಾರ 21040 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುವುದು.

click me!