
ಅಂಕಾರಾ[ಜ.01]: ವಿವಾದಿತ ಪತ್ರಕರ್ತ ಖಶೋಗಿ ದೇಹವನ್ನು ಹಂತಕರು ತುಂಡು ತುಂಡಾಗಿ ಕತ್ತರಿಸಿ ಅದನ್ನು ಸೂಟ್‌ಕೇಸ್ ಮತ್ತು ಬ್ಯಾಗಿನಲ್ಲಿ ತುಂಬಿ ಸಾಗಿಸಿರುವ ಸಿಸಿಟೀವಿ ದೃಶ್ಯವನ್ನು ಟರ್ಕಿ ಟೀವಿ ಮಾಧ್ಯಮವೊಂದು ಪ್ರಸಾರ ಮಾಡಿದೆ.
ಎ- ಹಾಬರ್ ಟೀವಿಯಲ್ಲಿ ಭಾನುವಾರ ತೋರಿಸಲಾದ ದೃಶ್ಯಗಳಲ್ಲಿ ಮೂವರು ಹಂತಕರು 5 ಸೂಟ್‌ಕೇಸ್ ಮತ್ತು ಎರಡು ದೊಡ್ಡ ಬ್ಯಾಗುಗಳನ್ನು ಇಸ್ತಾಂಬುಲ್‌ನಲ್ಲಿರುವ ಸೌದಿ ಕೌನ್ಸಿಲ್ ಜನರಲ್‌ರ್ ಮನೆಗೆ ಸಾಗಿಸಿರುವುದು ಕಂಡು ಬಂದಿದೆ.
ಖಶೋಗಿ ಹತ್ಯೆ ನಡೆದ ಸೌದಿ ದೂತಾವಾಸ ಕಚೇರಿಯಿಂದ ಅನತಿದೂರಲ್ಲೇ ಈ ನಿವಾಸವಿದೆ. ವಾಷಿಂಗ್ಟನ್‌ಪೋಸ್ಟ್‌ನ ಪತ್ರಕರ್ತರಾಗಿದ್ದ ಖಶೋಗಿ ಅ.2ರಂದು ಸೌದಿ ದೂತಾವಾಸ ಕಚೇರಿಯನ್ನು ಪ್ರವೇಶಿಸಿದ ವೇಳೆ ಹತ್ಯೆಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ