ಜಯಚಂದ್ರ ಬಂಧನಕ್ಕೆ ಸಿಬಿಐ ಪ್ಲಾನ್!: ಬಿಡುಗಡೆಯಾಗ್ತಿದ್ದಂತೆ ಬಂಧಿಸಲು ಸಿಬಿಐ ಸಜ್ಜು!

By Suvarna Web DeskFirst Published Dec 16, 2016, 2:22 AM IST
Highlights

ಜಾರಿ ನಿರ್ದೇಶನಾಲಯ ಬಂಧನದಿಂದ ಮುಕ್ತರಾಗಿ ಮಧ್ಯಂತರ ಜಾಮೀನು ಲಭ್ಯವಾಗಿದ್ದರು ಜಯಚಂದ್ರಗೆ ಬಿಡುಗಡೆಯ ಭಾಗ್ಯವಿಲ್ಲ. ಸಿಬಿಐ ಬಂಧನದಿಂದ ತಪ್ಪಿಸಿಕೊಳ್ಳುವ ತಂತ್ರದ ಭಾಗವಾಗಿ ಷರತ್ತು ಪೂರೈಸದೇ ಒಂದು ದಿನದ ಮಟ್ಟಿಗೆ ನ್ಯಾಯಾಂಗ ವಶದಲ್ಲಿರುವ ಜಯಚಂದ್ರ ಸಿಬಿಐ ಬಂಧನದಿಂದ ತಪ್ಪಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.

ಬೆಂಗಳೂರು(ಡಿ.16): ಬ್ಲಾಕ್​ ಅಂಡ್​ ವೈಟ್​ ದಂಧೆಯಲ್ಲಿ ಭಾಗಿಯಾಗಿದ್ದ ಜಯಚಂದ್ರ ಬಂಧನಕ್ಕೆ ಸಿಬಿಐ ಬಲೆ ಬೀಸಿದೆ. ಬಂಧನದಿಂದ ತಪ್ಪಿಸಿಕೊಳ್ಳಲು ಜಯಚಂದ್ರ ಪರ ವಕೀಲರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ನಿನ್ನೆ ಕೋರ್ಟ್​ನಲ್ಲಿ ಸಿಬಿಐ ಬಂಧನದಿಂದ ತಪ್ಪಿಸಿಕೊಂಡ ಜಯಚಂದ್ರ ಇಂದು ಸೇಫ್​ ಆಗ್ತಾರಾ? ಇಲ್ಲಿದೆ ವಿವರ.

ಜಾರಿ ನಿರ್ದೇಶನಾಲಯ ಬಂಧನದಿಂದ ಮುಕ್ತರಾಗಿ ಮಧ್ಯಂತರ ಜಾಮೀನು ಲಭ್ಯವಾಗಿದ್ದರು ಜಯಚಂದ್ರಗೆ ಬಿಡುಗಡೆಯ ಭಾಗ್ಯವಿಲ್ಲ. ಸಿಬಿಐ ಬಂಧನದಿಂದ ತಪ್ಪಿಸಿಕೊಳ್ಳುವ ತಂತ್ರದ ಭಾಗವಾಗಿ ಷರತ್ತು ಪೂರೈಸದೇ ಒಂದು ದಿನದ ಮಟ್ಟಿಗೆ ನ್ಯಾಯಾಂಗ ವಶದಲ್ಲಿರುವ ಜಯಚಂದ್ರ ಸಿಬಿಐ ಬಂಧನದಿಂದ ತಪ್ಪಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.

ಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಜಯಚಂದ್ರನಿಗೆ ಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ಜಾಮೀನಿನ ಮೇಲೆ ಬಿಡುಗಡೆಯಾಗ್ತಿದ್ದಂತೆ ಜಯಚಂದ್ರ ಬಂಧಿಸಲು ಸಿಬಿಐ ಅಧಿಕಾರಿಗಳು ನಿನ್ನೆ ಸಿದ್ದತೆ ನಡೆಸಿದ್ರು, ಆದರೆ ಅದು ಫಲಿಸಲಿಲ್ಲ. ಇಂದು ಸಿಬಿಐ ಅಧಿಕಾರಿಗಳು ಜಯಚಂದ್ರ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೋರ್ಟ್​ಗೆ ಹಾಜರಾದರೆ ಅಲ್ಲಿಯೇ ಜಯಚಂದ್ರನನ್ನು ವಶಕ್ಕೆ ಪಡೆಯಲಿದ್ದಾರೆ. ಜಾಮೀನಿನ ಷರತ್ತುಗಳನ್ನು ಜಯಚಂದ್ರ ಪರ ವಕೀಲರೇ ಪೂರೈಸಿದರೆ ಪರಪ್ಪನ ಅಗ್ರಹಾರದ ಬಳಿಯೇ ಸಿಬಿಐ ಜಯಚಂದ್ರ ಬಂಧನಕ್ಕೆ ಮುಂದಾಗಬಹುದು.

ಸಿಬಿಐ ಬಂಧನ ತಪ್ಪಿಸಿಕೊಳ್ಳಲು ತಂತ್ರ!: ಜಯಚಂದ್ರ ವಕೀಲರಿಂದ ಹೈಕೋರ್ಟ್​ಗೆ ಅರ್ಜಿ?

ಇಂದು ಸಿಬಿಐ ಬಂಧನದಿಂದ ತಪ್ಪಿಸಿಕೊಳ್ಳಲು ತಂತ್ರ ರೂಪಿಸಿರುವ ಜಯಚಂದ್ರ ಪರ ವಕೀಲರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಇದೇ ಪ್ರಕರಣದಲ್ಲಿ ಗುತ್ತಿಗೆದಾರ ಇಬ್ರಾಹಿಂ ಷರೀಫ್'​ನನ್ನು ಬಂಧಿಸದಂತೆ ಹೈಕೋರ್ಟ್​ ತಡೆ ನೀಡಿದೆ. ಇದೇ ರೀತಿ ಜಯಚಂದ್ರನನ್ನು ಬಂಧಿಸದಂತೆ ತಡೆ ತರಲು ತಂತ್ರ ರೂಪಿಸಲಾಗುತ್ತಿದೆ.

ಇತ್ತ ಎಸಿಬಿ ಕೂಡ ಜಯಚಂದ್ರ ಬಂಧನಕ್ಕೆ ಬಲೆ ಬೀಸಿದೆ, ಆದರೆ ಅದಕ್ಕೂ ಮೊದಲೇ ಸಿಬಿಐ ಅಧಿಕಾರಿಗಳು ಆತನನ್ನು ಬಂಧಿಸಲು ಸಿದ್ದತೆ ನಡೆಸಿದ್ದಾರೆ. ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸದೇ ಹೋದ್ರೆ ಅಥವಾ ಹೈಕೋರ್ಟ್​'ನಲ್ಲಿ ಅರ್ಜಿ ತುರ್ತಾಗಿ ವಿಚಾರಣೆಗೆ ಬಾರದೇ ಹೋದ್ರೆ ಜಯಚಂದ್ರ ಸಿಬಿಐ ಬಲೆಗೆ ಬೀಳುವುದು ಖಚಿತ.

 

click me!