
ಅಹಮದಾಬಾದ್(ಫೆ.21): ನಕಲಿ ಎನ್'ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಗುಜರಾತ್'ನ ಮಾಜಿ ಡಿಜಿಪಿ ಪಿಪಿ ಪಾಂಡೆ ಹಾಗೂ ಇತರ ಮೂವರನ್ನು ಸಿಬಿಐ ವಿಶೇಷ ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.
2004ರಲ್ಲಿ ಇಶ್ರಾತ್ ಜಹಾನ್ ನಕಲಿ ಎನ್'ಕೌಂಟರ್ ಆರೋಪದಲ್ಲಿ ಬಂಧಿಸಲಾಗಿತ್ತು. ಇವರ ವಿರುದ್ಧ ಅಪಹರಣ ಹಾಗೂ ಕೊಲೆಗೆ ಯಾವುದೇ ಸಾಕ್ಷಾಧಾರವಿರದ ಕಾರಣ ಬಂಧನಮುಕ್ತಗೊಳಿಸಲಾಗಿದೆ.
ವಿಚಾರಣೆ ನಡೆಸಿದ ವಿಶೇಷ ಸಿಬಿಐ ಕೋರ್ಟ್'ನ ನ್ಯಾಯಾಧೀಶ ಜೆಕೆ ಪಾಂಡ್ಯ, ವಿವಿಧ ತನಿಖಾ ಸಂಸ್ಥೆಗಳು ಹಲವು ಸಾಕ್ಷಧಾರಗಳನ್ನು ನೀಡಿದ್ದು ಯಾವುವು ದ್ವಂದ್ವದಿಂದ ಕೂಡಿದೆ. ಅಲ್ಲದೆ ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಾಧಾರಗಳಿಲ್ಲ'ಎಂದು ತಿಳಿಸಿದ್ದಾರೆ.
2004ರಲ್ಲಿ 19 ವರ್ಷದ ಕಾಲೇಜು ವಿದ್ಯಾರ್ಥಿನಿ ಹಾಗೂ ಈಕೆಯ ನಾಲ್ವರು ಸ್ನೇಹಿತೆಯರನ್ನು ನಕಲಿ ಎನ್ ಕೌಂಟರ್'ನಲ್ಲಿ ಪೊಲೀಸ್ ಅಧಿಕಾರಿಗಳು ಹತ್ಯೆ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.