INX ಹಗರಣ: ದ.ಕ, ಶಿವಮೊಗ್ಗದ ಮಾಜಿ ಡಿಸಿ ಕೂಡಾ ಆರೋಪಿ!

By Web Desk  |  First Published Oct 20, 2019, 8:18 AM IST

ಚಿದು ಕೇಸಲ್ಲಿ ಕರ್ನಾಟಕ ಅಧಿಕಾರಿಯೂ ಆರೋಪಿ| ಅನೂಪ್‌ ಪೂಜಾರಿ ವಿರುದ್ಧ ಚಾರ್ಜ್ ಶೀಟ್ | ದ.ಕ, ಶಿವಮೊಗ್ಗ ಡೀಸಿಯಾಗಿದ್ದ ಅಧಿಕಾರಿ


ನವದೆಹಲಿ[ಅ.20]: ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಆರೋಪಿಯಾಗಿರುವ ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದ ಅನೂಪ್‌ ಕೆ. ಪೂಜಾರಿ ವಿರುದ್ಧವೂ ಆರೋಪ ಪಟ್ಟಿ ದಾಖಲಾಗಿದೆ.

ಕೊನೆಗೂ ತಿಹಾರ್ ಜೈಲಿನಿಂದ ಹೊರ ಬಂದ ಚಿದಂಬರಂ!

Tap to resize

Latest Videos

ಸಿಬಿಐ ಶುಕ್ರವಾರ ಚಿದು, ಕಾರ್ತಿ ಸೇರಿ 14 ಜನರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿದಾಖಲಿಸಿತ್ತು. ಇದರಲ್ಲಿ ಅಂದಿನ ವಿತ್ತ ಸಚಿವಾಲಯದ ಜಂಟಿ ಕಾರ್ಯದರ್ಶಿ ಹಾಗೂ ಅಧೀನ ಕಾರ್ಯದರ್ಶಿಯಾಗಿದ್ದ ಅನೂಪ್‌ ಪೂಜಾರಿ ಅವರ ಹೆಸರೂ ಇದೆ. ಕ್ರಿಮಿನಲ್‌ ಸಂಚು ಹಾಗೂ ವಂಚನೆ ಮತ್ತಿತರೆ ಆರೋಪಗಳನ್ನು ಹೊರಿಸಲಾಗಿದೆ.

ವಿತ್ತ ಸಚಿವಾಲಯಕ್ಕೆ ವರ್ಗವಾಗುವ ಮುನ್ನ ಪೂಜಾರಿ ಅವರು ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿ 1980ರಿಂದ ಸೇವೆ ಆರಂಭಿಸಿದ್ದರು. ವಿವಿಧ ಇಲಾಖೆಗಳ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರು ಹಾಗೂ ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಪೂಜಾರಿ ಅವರು ಒಡಿಶಾ ಮೂಲದವರಾಗಿದ್ದು, ಈಗ ನಿವೃತ್ತರಾಗಿದ್ದಾರೆ.

ಐಎನ್ ಎಕ್ಸ್ ಕೇಸ್: ಚಿದುಗೆ ಇ.ಡಿ ಬಂಧನ ಭೀತಿ ಶುರು

ಐಎನ್‌ಎಕ್ಸ್‌ ಮೀಡಿಯಾಗೆ ವಿದೇಶದಿಂದ ಅಕ್ರಮ ಬಂಡವಾಳ ಹರಿದುಬರಲು ಚಿದಂಬರಂ, ಅವರ ಪುತ್ರ ಕಾರ್ತಿ, ಪೂಜಾರಿ ಸೇರಿದಂತೆ 14 ಮಂದಿ ಸಹಕರಿಸಿದ್ದರು ಎಂದು ಸಿಬಿಐ ಆರೋಪಪಟ್ಟಿಸಲ್ಲಿಸಿದೆ.

ಜೈಲಿನಲ್ಲಿರುವ ಚಿದಂಬರಂಗೆ ಮೋದಿಯಿಂದ ಬರ್ಥಡೆ ವಿಶಸ್, ಅದೂ ತಮಿಳಿನಲ್ಲಿ!

ಚಿದು, ಪುತ್ರಗೆ 35 ಕೋಟಿ ರು. ಲಂಚ ನೀಡಿದ್ದೆ: ಇಂದ್ರಾಣಿ

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಆ ಸಂಸ್ಥೆಯ ಮಾಜಿ ಒಡತಿ ಇಂದ್ರಾಣಿ ಮುಖರ್ಜಿ ಅವರು ಚಿದಂಬರಂ ವಿರುದ್ಧ ಕೆಲವು ಲಂಚ ಆರೋಪಗಳನ್ನು ಮಾಡಿದ್ದು, ಅವುಗಳನ್ನು ಆರೋಪ ಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿದೆ. ‘ಐಎನ್‌ಎಕ್ಸ್‌ಗೆ ವಿದೇಶಿ ಬಂಡವಾಳ ಹರಿದುಬರಲು ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಸಹಕರಿಸಿದ್ದರು. ಅದಕ್ಕೆ ಪ್ರತಿಯಾಗಿ ಅವರಿಗೆ ನಾನು ಸಿಂಗಾಪುರ, ಮಾರಿಷಸ್‌, ಬರ್ಮುಡಾ, ಬ್ರಿಟನ್‌ ಹಾಗೂ ಸ್ವಿಜರ್ಲೆಂಡ್‌ನಿಂದ ಸುಮಾರು 35 ಕೋಟಿ ರು. ಲಂಚವನ್ನು ಚಿದು, ಕಾರ್ತಿಗೆ ನೀಡಿದ್ದೆ’ ಎಂದು ಇಂದ್ರಾಣಿ ನೀಡಿದ ಹೇಳಿಕೆಯನ್ನು ಚಾಜ್‌ರ್‍ಶೀಟ್‌ನಲ್ಲಿ ಸಿಬಿಐ ವಿವರಿಸಿದೆ.

click me!