ಸಿಬಿಐನಿಂದ ಮಕ್ಕಳ ವಾಟ್ಸ್'ಅಪ್ ಪೋರ್ನ್ ವಿಡಿಯೋಗಳ ಸೂತ್ರಧಾರ ಅರೆಸ್ಟ್ : ಸದಸ್ಯರು ವಿಶ್ವದ ಹಲವು ದೇಶಗಳಲ್ಲಿದ್ದಾರೆ

By Suvarna Web deskFirst Published Feb 22, 2018, 8:00 PM IST
Highlights

ತಂಡದ 119 ಸದಸ್ಯರ ಮೇಲೆ ಮಾಹಿತಿ ತಂತ್ರಜ್ಞಾನದ 67-ಬಿ ಸೆಕ್ಷನ್'ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಂಡದ ಸದಸ್ಯರು ಭಾರತ ಮಾತ್ರವಲ್ಲದೆ ಅಮೆರಿಕಾ, ಪಾಕಿಸ್ತಾನ ಚೀನಾ ಹಾಗೂ ಬ್ರೆಜಿಲ್ ಹಲವು ದೇಶದಲ್ಲಿದ್ದಾರೆ. 

ನವದೆಹಲಿ(ಫೆ.22): ವಾಟ್ಸ್'ಅಪ್ ಗ್ರೂಪಿನ ಮೂಲಕ ಮಕ್ಕಳ ಪೋರ್ನ್ ವಿಡಿಯೋಗಳನ್ನು ಅಪ್'ಲೋಡ್ ಮಾಡಿ ಎಲ್ಲಡೆ ಪಸರಿಸುತ್ತಿದ್ದ ಗ್ರೂಪ್ ಅಡ್ಮಿನ್'ನನ್ನು ಸಿಬಿಐ ಬಂಧಿಸಿ ಗ್ರೂಪಿನ ಸದಸ್ಯರ ಮೇಲೆ ಪ್ರಕರಣ ದಾಖಲಿಸಿದೆ.

ತಂಡದ 119 ಸದಸ್ಯರ ಮೇಲೆ ಮಾಹಿತಿ ತಂತ್ರಜ್ಞಾನದ 67-ಬಿ ಸೆಕ್ಷನ್'ನಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಂಡದ ಸದಸ್ಯರು ಭಾರತ ಮಾತ್ರವಲ್ಲದೆ ಅಮೆರಿಕಾ, ಪಾಕಿಸ್ತಾನ ಚೀನಾ ಹಾಗೂ ಬ್ರೆಜಿಲ್ ಹಲವು ದೇಶದಲ್ಲಿದ್ದಾರೆ. 

'ಕಿಡ್ಸ್ಎಕ್ಸ್ಎಕ್ಸ್ಎಕ್ಸ್ ಹೆಸರಿನಲ್ಲಿ ತಂಡವನ್ನು ರಚಿಸಲಾಗಿದ್ದು ಇದಕ್ಕೆ ಐವರು ತಂಡದ ಸದಸ್ಯರಿದ್ದಾರೆ. ಮುಖ್ಯ ಅಡ್ಮಿನ್ ನಿಕಿಲ್ ವರ್ಮಾನನ್ನು ಬಂಧಿಸಿ ಕಂಪ್ಯೂಟರ್'ಗಳು, ಹಾರ್ಡ್ ಡಿಸ್ಕ್'ಗಳು, ಫೋನ್'ಗಳು ಹಾಗೂ ಮಕ್ಕಳ ಪೋರ್ನೊ ಸಂಬಂಧಿತ ವಿಡಿಯೋಗಳನ್ನು ವಶಪಡಿಸಿಕೊಂಡಿದೆ. ತನಿಖಾ ದಳವು ತಂಡದ ತರ ಸದಸ್ಯರನ್ನು ದೆಹಲಿ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಪತ್ತೆ ಮಾಡುತ್ತಿದೆ. ಈ ಸಂಬಂಧ ತಂಡದ ಸದಸ್ಯರಿರುವ ವಿಶ್ವದ ಇತರ ದೇಶಗಳಿಗೂ ಪತ್ರ ಬರೆದಿದೆ.

click me!