50 ಲಕ್ಷದೊಂದಿಗೆ ಬೆಂಗಳೂರಿನಿಂದ ಪಾಕಿಸ್ತಾನಕ್ಕೆ ಪರಾರಿಯಾದ ಕ್ಯಾಶಿಯರ್

Published : Feb 08, 2017, 06:17 PM ISTUpdated : Apr 11, 2018, 12:49 PM IST
50 ಲಕ್ಷದೊಂದಿಗೆ ಬೆಂಗಳೂರಿನಿಂದ ಪಾಕಿಸ್ತಾನಕ್ಕೆ ಪರಾರಿಯಾದ ಕ್ಯಾಶಿಯರ್

ಸಾರಾಂಶ

ಯುನೈಟೆಡ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿದ್ದ ಇಬ್ರಾಹಿಂ  51 ಲಕ್ಷ ಹಣ ದೋಚಿದ್ದಾನೆ.

ಬೆಂಗಳೂರು(ಫೆ.08): ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಲಕ್ಷಾಂತರ ರುಪಾಯಿ ದೋಚಿದ ಕ್ಯಾಶಿಯರ್‌ವೊಬ್ಬ ಪಾಕಿಸ್ತಾನಕ್ಕೆ ಪರಾರಿಯಾಗಿದ್ದು, ಈ ಸಂಬಂಧ ಕ್ಯಾಶಿಯರ್ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈನ ಕೋನ್‌ಗಾಂವ್‌ನ ನಿವಾಸಿ ಮೊಹಮ್ಮದ್ ರ್ಇಾನ್ (30) ಬಂಧಿತ ಆರೋಪಿ. ಈತನ ತಂದೆ   ಫಾರೂಕ್ ಇಬ್ರಾಹಿಂ ಪರಾರಿಯಾಗಿದ್ದಾನೆ. ಯುನೈಟೆಡ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿದ್ದ ಇಬ್ರಾಹಿಂ  51 ಲಕ್ಷ ಹಣ ದೋಚಿದ್ದಾನೆ. ಈ ಹಣದ ಪೈಕಿ  30 ಲಕ್ಷವನ್ನು ಮುಂಬೈನಲ್ಲಿರುವ ತನ್ನ ಪುತ್ರ ಮೊಹಮ್ಮದ್ ಇರ್ಫಾನ್'ಗೆ ಕೊಟ್ಟು ಪಾಕಿಸ್ತಾನಕ್ಕೆ ಓಡಿ ಹೋಗಿದ್ದಾನೆ. ಇದೀಗ ಈತನ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬ್ಯಾಟರಾಯನಪುರದ ಯುನೈಟೆಡ್ ಡಿಸ್ಟ್ರಿಬ್ಯೂಟರ್ಸ್ ಕಂಪನಿಯಲ್ಲಿ ಕ್ಯಾಶಿಯರ್ ಆಗಿದ್ದ  ಫಾರೂಕ್ ಇಬ್ರಾಹಿಂಗೆ ಮೂವರು ಮಕ್ಕಳಿದ್ದು, ಗುಜರಾತ್, ಮುಂಬೈ ಹಾಗೂ ಕರಾಚಿಯಲ್ಲಿ ನೆಲೆಸಿದ್ದಾರೆ. ಇಬ್ರಾಹಿಂ ಕಂಪನಿಯಲ್ಲಿ ಸಂಗ್ರಹವಾದ ಲಕ್ಷಾಂತರ ರುಪಾಯಿ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡುತ್ತಿದ್ದ. ಅದೇ ರೀತಿ ಜ.29 ಮತ್ತು 30ರಂದು ಕಂಪನಿಯಲ್ಲಿ ಸಂಗ್ರಹವಾಗಿದ್ದ  51 ಲಕ್ಷವನ್ನು ಹಣವನ್ನು ಖಾತೆಗೆ ಜಮಾ ಮಾಡದೆ ಮುಂಬೈಗೆ ಹೋಗಿದ್ದಾನೆ. ಬಳಿಕ ತನ್ನ ಮೂವರು ಮಕ್ಕಳ ಪೈಕಿ ಮುಂಬೈನ ಕೋನ್‌ಗಾಂವ್‌ನಲ್ಲಿ ನೆಲೆಸಿರುವ ಪುತ್ರ ಮೊಹಮ್ಮದ್ ಇರ್ಫಾನ್'ಗೆ  30 ಲಕ್ಷ ನೀಡಿ ಪರಾರಿಯಾಗಿದ್ದಾನೆ. ಇನ್ನುಳಿದ ಹಣದೊಂದಿಗೆ ಕರಾಚಿಯಲ್ಲಿರುವ ತನ್ನ ಮತ್ತೊಬ್ಬ ಮಗನನ್ನು ಕಾಣಲು ಮಂಬೈನಿಂದ ತೆರಳಿದ್ದಾನೆ. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ರ್ಇಾನ್‌ನನ್ನು ಬಂಸಿದ್ದು,  30 ಲಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.

ಲುಕ್‌ಔಟ್ ನೋಟಿಸ್

ಆರೋಪಿ ಪಾರೂಕ್ ಇಬ್ರಾಹಿಂ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದು, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳ ಭದ್ರತಾ ಅಕಾರಿಗಳಿಗೆ ಮಾಹಿತಿ ನೀಡಲಾಗಿದೆ. ರಾಯಭಾರಿ ಕಚೇರಿ ಅಕಾರಿಗಳನ್ನು ಸಂಪರ್ಕಿಸಿ ಪಾಕಿಸ್ತಾನದ ಕರಾಚಿಯಲ್ಲೂ ಲುಕ್‌ಔಟ್ ನೋಟಿಸ್ ಪ್ರಕಟಿಸುವಂತೆ ಮನವಿ ಮಾಡಲಾಗಿದೆ. ಜತೆಗೆ ಗುಜರಾತ್‌ನಲ್ಲಿರುವ ಮತ್ತೊಬ್ಬ ಪುತ್ರನ ಚಲನವಲನಗಳ ಬಗ್ಗೆಯೂ ನಿಗಾವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bhabana Menon: 'ಮಲಯಾಳಂ ಚಿತ್ರರಂಗದ ಹೆಮ್ಮೆ' ಎಂದ ಸಚಿವರು; ನಟಿ ಭಾವನಾಗೆ ಪ್ರಶಂಸೆ ಸುರಿಮಳೆ!'
ಆದಾಯ ಕಡಿಮೆ ಆಗಿದ್ದೋ, ಖರ್ಚು ಜಾಸ್ತಿಯಾಗಿದ್ದೋ! ಯೋಚಿಸಬೇಕಾದ ಕೆಲವು ಆರ್ಥಿಕ ಸಂಗತಿಗಳು