
ಬೆಂಗಳೂರು[ಜು.31]: ದಶಕಗಳ ಹಿಂದೆ ನರಹಂತಕ ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿದ್ದ ನಟ ಸರ್ವಭೌಮ ಡಾ.ರಾಜ್‌ಕುಮಾರ್ ಅವರ ಬಿಡುಗಡೆಯಲ್ಲೂ ಖ್ಯಾತ ಉದ್ಯಮಿ ವಿ.ಜಿ.ಸಿದ್ಧಾರ್ಥ್ ತೆರೆಮರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬ ಸಂಗತಿ ಹೊರಜಗತ್ತಿಗೆ ರಹಸ್ಯವಾಗಿಯೇ ಉಳಿದಿದೆ.
ಈ ಸ್ನೇಹದಿಂದಾಗಿಯೇ ಸಿದ್ಧಾಥ್‌ರ್ ಅವರ ನಾಪತ್ತೆ ವಿಚಾರ ತಿಳಿದು ತೀವ್ರ ವ್ಯಾಕುಲ ವ್ಯಕ್ತಪಡಿಸಿದ ರಾಜ್ ಪುತ್ರರಾದ ಪುನೀತ್ ರಾಜ್‌ಕುಮಾರ್ ಹಾಗೂ ರಾಘವೇಂದ್ರ ರಾಜ್‌ಕುಮಾರ್ ಅವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ನಿವಾಸಕ್ಕೆ ಧಾವಿಸಿ ಸ್ವಾಂತನ ಹೇಳಿದರು.
ನಾಪತ್ತೆಯಾದ ಕಾಫಿ ಡೇ ಒಡೆಯ ಮೃತದೇಹ ಪತ್ತೆ: ಸೋಮವಾರದಿಂದ ಏನೇನಾಯ್ತು?
ಮೊದಲಿನಿಂದಲೂ ರಾಜ್ ಕುಟುಂಬದ ಜೊತೆ ಅವರು ಗೆಳೆತನ ಹೊಂದಿದ್ದರು. ಸದಾಶಿವನಗರದ ಅಕ್ಕಪಕ್ಕದ ರಸ್ತೆಯಲ್ಲಿ ನೆಲೆಸಿದ್ದ ಆ ಎರಡು ಕುಟುಂಬಗಳ ನಡುವೆ ಆತ್ಮೀಯತೆ ಬೆಳದಿತ್ತು. 2000ರಲ್ಲಿ ಡಾ.ರಾಜ್ ಕುಮಾರ್ ಅವರು ಅಪಹರಣವಾದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ ಮಾವನ ಬೆನ್ನಿಗೆ ನಿಂತು ರಾಜ್ ಅಪಹರಣದ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಸಂಕಷ್ಟಮಯ ಪರಿಸ್ಥಿತಿ ನಿಭಾಯಿಸಿದ್ದರು.
ಅಂದು ರಾಜ್ ಕುಟುಂಬ ಮತ್ತು ಸರ್ಕಾರದ ನಡುವೆ ತೆರೆಮರೆಯಲ್ಲಿ ಸಂವಹನಕಾರರಾಗಿ ಅವರು ಕೆಲಸ ಮಾಡಿದ್ದರು. ಇದರ ಪರಿಣಾಮ ರಾಜ್ ಅವರನ್ನು ಬಹುಬೇಗನೇ ನರಹಂತಕನಿಂದ ಸುರಕ್ಷಿತವಾಗಿ ಬಿಡಿಸಿಕೊಂಡು ಬರಲು ಸಾಧ್ಯವಾಯಿತು. ಆದರೆ, ಸಿದ್ಧಾಥ್‌ರ್ ಅವರ ಪಾತ್ರ ನಿಗೂಢವಾಗಿಯೇ ಉಳಿದಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.