
ಗುಜರಾತ್(ಡಿ.03): ದೇಶದಲ್ಲಿ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೆ ಕಪ್ಪು ಹಣ ಹೊಂದಿರುವವರು ದಿನ ಕಳೆಯುತ್ತಿದ್ದಂತೆ ಕಂಗಾಲಾಗುತ್ತಿದ್ದಾರೆ. ಆದರೆ ಇವೆಲ್ಲದರ ನಡುವೆ ಗುಜರಾತ್ ಮೂಲದ ಮಹೇಶ್ ಶಾ ಎಂಬ ಉದ್ಯಮಿಯೊಬ್ಬರು ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆ(ಐಡಿಎಸ್)ಯಡಿ ತಮ್ಮ ಬಳಿ ದಾಖಲೆಗಳಿಲ್ಲದ 13 ಸಾವಿರ ಕೋಟಿ ರೂಪಾಯಿ ಕಪ್ಪು ಹಣವಿದೆ ಎಂದು ಘೋಷಿಸಿಕೊಂಡಿದ್ದಾರೆ.
ಈ ನಡುವೆ ಐಡಿಎಸ್ ಯೋಜನೆಯಡಿ ಕಪ್ಪುಹಣ ಘೋಷಿಸಿಕೊಂಡವರಿಗೆ ತೆರಿಗೆ ಹಣದ ಕಂತನ್ನು ಪಾವತಿಸಿದಾಕ್ಷಣ ಆದಾಯ ತೆರಿಗೆ ಇಲಾಖೆಯ ಕಾನೂನು ಕ್ರಮಗಳಿಂದ ರಕ್ಷಣೆ ಸಿಗುತ್ತದೆ ಎಂದು ತಿಳಿಸಿತ್ತು. ಅದರಂತೆ ಕಪ್ಪುಹಣವನ್ನು ಘೋಷಿಸಿಕೊಂಡಿದ್ದ ಅಹಮದಾಬಾದ್ ಉದ್ಯಮಿ ಸದ್ಯ ಆದಾಯ ತೆರಿಗೆಯ ಮೊದಲ ಕಂತಿನ 975 ಕೋಟಿ ರೂಪಾಯಿ ಹಣವನ್ನು ಪಾವತಿಸಲು ವಿಫಲನಾಗಿದ್ದಾನೆ.
ಆದರೆ ಅಚ್ಚರಿ ಎನ್ನುವಂತೆ ಶಾ ದೊಡ್ಡಮೊತ್ತದ ಕಪ್ಪು ಹಣ ಘೋಷಣೆಯ ಬಳಿಕ ತೆರಿಗೆ ಹಣ ವಿಫಲವಾಗಿದ್ದು ಏಕೆ ಎಂದು ಸತ್ಯಾಂಶ ತಿಳಿಯಲು ಮುಂದಾದಾಗ ತೆರಿಗೆ ಇಲಾಖೆಗೆ ಅಚ್ಚರಿ ಕಾದಿತ್ತು ಯಾಕೆಂದರೆ ಶಾ ಹಲವು ದೊಡ್ಡ ದೊಡ್ಡ ಕಾಳಧನಿಕರ ಪರವಾಗಿ 13 ಸಾವಿರ ಕೋಟಿ ಕಪ್ಪುಹಣವನ್ನು ಘೋಷಿಸಿಕೊಂಡಿರುವುದು ಬೆಳಕಿಗೆ ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.