'ಬುಲೆಟ್ ಟ್ರೇನ್ ಪ್ರಾಜೆಕ್ಟ್ ಡಿಮಾನಿಟೈಸೇಶನ್'ನಂತೆ ಎಲ್ಲವನ್ನು ಸಾಯಿಸಿ ಬಿಡುತ್ತೆ': ಚಿದಂಬರಂ

By Suvarna Web DeskFirst Published Sep 30, 2017, 5:42 PM IST
Highlights

ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಬುಲೆಟ್ ಟ್ರೇನ್ ಪ್ರಾಜೆಕ್ಟ್ ಡಿಮಾನಿಟೈಸೇಶನ್’ನಂತೆ ಎಲ್ಲವನ್ನು ಸಾಯಿಸುತ್ತದೆ.  ಹಣವನ್ನು ಇದರ ಬದಲು ರೈಲ್ವೇ ಭದ್ರತಾ ಅಭಿವೃದ್ದಿಗೆ ವ್ಯಯಿಸಬಹುದು ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

ನವದೆಹಲಿ (ಸೆ.30): ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಬುಲೆಟ್ ಟ್ರೇನ್ ಪ್ರಾಜೆಕ್ಟ್ ಡಿಮಾನಿಟೈಸೇಶನ್’ನಂತೆ ಎಲ್ಲವನ್ನು ಸಾಯಿಸುತ್ತದೆ.  ಹಣವನ್ನು ಇದರ ಬದಲು ರೈಲ್ವೇ ಭದ್ರತಾ ಅಭಿವೃದ್ದಿಗೆ ವ್ಯಯಿಸಬಹುದು ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ.

ನಿನ್ನೆ ಮುಂಬೈನ ಎಲ್ಫಿನ್'ಸ್ಟೋನ್ ರೈಲ್ವೆ ಸ್ಟೇಷನ್ (ಪ್ರಭಾದೇವಿ ಸ್ಟೇಷನ್) ಬಳಿ ಕಾಲ್ತುಳಿತದಿಂದಾಗಿ 22 ಮಂದಿ ಸಾವನ್ನಪ್ಪಿರುವ ಹಿನ್ನಲೆಯಲ್ಲಿ ಚಿದಂಬರಂ ಈ ರೀತಿ ಹೇಳಿದ್ದಾರೆ. ಮುಂಬೈ ಹಾಗೂ ಅಹ್ಮದಾಬಾದ್’ನನ್ನು ಸೇರಿಸುವ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಬುಲೆಟ್ ಟ್ರೇನ್ ಡಿಮಾನಿಟೈಸೇಶನ್’ನಂತೆ ಎಲ್ಲವನ್ನು ಸಾಯಿಸುತ್ತದೆ. ಜೊತೆಗೆ ಇದು ಸಾಮಾನ್ಯ ಜನರು ಓಡಾಡುವುದಕ್ಕಲ್ಲ. ಹಣವಿದ್ದವರು ಮಾತ್ರ ಓಡಾಡಬಹುದಾಗಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.

click me!