
ಲಕ್ನೋ(ಜೂ.2): ಇತ್ತಿಚೀಗಷ್ಟೇ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭೆ ಮತ್ತು ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ವಿರೋಧಿ ಬಣ ಭರ್ಜರಿ ಜಯ ಸಾಧಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೋದಿ ವಿರುದ್ದ ತೊಡೆ ತಟ್ಟಿದ್ದ ವಿರೋಧ ಪಕ್ಷಗಳ ಮೈತ್ರಿಕೂಟ, ಅದರಲ್ಲಿ ಜಯ ಸಾಧಿಸಿದೆ.
೨೦೧೯ ರ ಲೋಕಸಭೆ ಚುನಾವಣೆಯಲ್ಲೂ ಈ ಬಣ ಒಟ್ಟಿಗೆ ಚುನಾವಣೆ ಎದುರಿಸುವ ಕುರಿತು ಚರ್ಚೆ ಆರಂಭವಾಗಿದೆ. ಅದರಂತೆ ಉತ್ತರಪ್ರದೇಶದಲ್ಲಿ ಎಸ್ ಪಿ ಮತ್ತು ಬಿಎಸ್ ಪಿ ಪಕ್ಷಗಳು ಒಟ್ಟಾಗಿ ಮೋದಿ ಅವರನ್ನು ಎದುರಿಸಲಿವೆ. ಕೈರಾನಾ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಿದ ಬಳಿಕ ಈ ಪಕ್ಷಗಳ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿದೆ.
ಆದರೆ ೨೦೧೯ ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಷಯ ಈ ಪಕ್ಷಗಳಿಗೆ ಕಗ್ಗಂಟಾಗುವ ಸಂಭವವಿದೆ. ಕೈರಾನಾ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದ ಬಿಎಸ್ ಪಿ ಇದೀಗ ಹುಮ್ಮಸ್ಸಿನಲ್ಲಿದ್ದು, 80 ಲೋಕಸಭಾ ಕ್ಷೇತ್ರಗಳ ಪೈಕಿ 40 ರಲ್ಲಿ ಸ್ಪರ್ಧಿಸಲು ಮುಂದಾಗಿದೆ.
ಒಂದು ವೇಳೆ ಮೈತ್ರಿ ಸಾಧ್ಯವಾದರೆ ಕನಿಷ್ಠ ೪೦ ಸೀಟುಗಳನ್ನು ತನಗೆ ಬಿಟ್ಟು ಕೊಡಬೇಕೆಂದು ಬಿಎಸ್ ಪಿ ಅಧಿನಾಯಕಿ ಮಾಯಾವತಿ ಈಗಾಗಲೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಬಿಎಸ್ ಪಿ ಬಲವಗುತ್ತಿದ್ದು, ಮೈತ್ರಿ ಬೇಕೆಂದರೆ 40 ಸೀಟುಗಳನ್ನು ಬಿಟ್ಟು ಕೊಡಬೇಕೆಂದು ಮಾಯಾವತಿ ಆಗ್ರಹಿಸಿದ್ದಾರೆ. ಮಾಯಾವತಿ ಅವರ ಈ ಬೇಡಿಕೆ ಈಗಾಗಲೇ ಎಸ್ ಪಿ ಮತ್ತು ಕಾಂಗ್ರೆಸ್ ಗೆ ತಲೆ ನೋವು ತಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಣಿಸುವ ಏಕೈಕ ಅಜೆಂಡಾದೊಂದಿಗೆ ಮೈತ್ರಿಗೆ ಮುಂದಾಗಿರುವ ಈ ಪಕ್ಷಗಳು, ಸೀಟು ಹಂಚಿಕೆ ವಿಚಾರದಲ್ಲಿ ಕಚ್ಚಾಡಿಕೊಂಡರೆ ಆಶ್ಚಯರ್ಯವಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.