ಮುಂದುವರೆದ ಬ್ರಿಗೇಡ್ ಸಮರ; ಬಿಎಸ್ ವೈಗೆ ಈಶ್ವರಪ್ಪ ಸಡ್ಡು

Published : Mar 04, 2017, 02:56 PM ISTUpdated : Apr 11, 2018, 12:46 PM IST
ಮುಂದುವರೆದ ಬ್ರಿಗೇಡ್ ಸಮರ; ಬಿಎಸ್ ವೈಗೆ ಈಶ್ವರಪ್ಪ ಸಡ್ಡು

ಸಾರಾಂಶ

ರಾಯಣ್ಣ ಬ್ರಿಗೇಡ್ ವಿಚಾರಕ್ಕೆ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರ ಮುಂದುವರೆದಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ ಭಾಗವಹಿಸಿ ಬಿಎಸ್​ವೈಗೆ ಮತ್ತೆ ಸಡ್ಡು ಹೊಡೆದಿದ್ದಾರೆ.

ಬೆಂಗಳೂರು (ಮಾ.04): ರಾಯಣ್ಣ ಬ್ರಿಗೇಡ್ ವಿಚಾರಕ್ಕೆ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಸಮರ ಮುಂದುವರೆದಿದೆ. ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಈಶ್ವರಪ್ಪ ಭಾಗವಹಿಸಿ ಬಿಎಸ್​ವೈಗೆ ಮತ್ತೆ ಸಡ್ಡು ಹೊಡೆದಿದ್ದಾರೆ.

ಆನಂದ ರಾವ್ ವೃತ್ತದಲ್ಲಿನ ಕೆಇಬಿ ಎಂಜಿನಿಯರಿಂಗ್ ಅಸೋಶಿಯೇಶನ್ ಸಭಾಂಗಣದಲ್ಲಿ ಬ್ರಿಗೇಡ್ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ. ಮುಕುಡಪ್ಪ, ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್ ಮೂರ್ತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಈಶ್ವರಪ್ಪ ಕೂಡಾ ಭಾಗಿಯಾದರು.  ವೆಂಕಟೇಶಮೂರ್ತಿ ಅಮಾನತು ವಾಪಸ್ ಪಡೆಯದಿರುವುದು. ಸೊಗಡು ಶಿವಣ್ಣ, ನಂದೀಶ್‌ಗೆ ನೀಡಿರುವ ನೋಟಿಸ್ ಹಿಂಪಡೆಯದಿರುವುದಿಂದ ಈಶ್ವರಪ್ಪ ಅಸಮಾಧಾನಗೊಂಡಿದ್ದು, ಮತ್ತೊಮ್ಮೆ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಲಹೆಯಂತೆ ಪಕ್ಷದ ಹಿಂದುಳಿದ ಮೋರ್ಚಾಗಳ ಸಂಚಾಲಕ ಸ್ಥಾನ ಒಪ್ಪಿಕೊಂಡು ಪಕ್ಷದ ಚಟುವಟಿಕೆಯಲ್ಲಿ ತೊಡಗಿದ್ದೇನೆ. ಆದರೆ ಶಾ ಸೂಚನೆಯಂತೆ ಯಡಿಯೂರಪ್ಪ ನಡೆದುಕೊಳ್ಳುತ್ತಿಲ್ಲ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲ್ವೆ ಟಿಕೆಟ್‌ ದರ ಅಲ್ಪ ಹೆಚ್ಚಳ
ಫಾಸ್ಟ್ಯಾಗ್‌ ದಂಡದಲ್ಲಿ ಕರ್ನಾಟಕ ನಂ.1