
ಮಂಡ್ಯ: 'ಬೇಟಿ ಬಚಾವೋ ಬೇಟಿ ಪಡಾವೋ' ಎಂಬ ಘೋಷವಾಕ್ಯಕ್ಕೆ ಅರ್ಥ ಬರುವಂತೆ ಮಾಡಿದ ವಿದ್ಯಾರ್ಥಿನಿಯೊಬ್ಬಳು, ಮದುವೆ, ಶಿಕ್ಷಣ ಎರಡಕ್ಕೂ ಸಮಾನ ಅವಕಾಶ ನೀಡಿದ್ದಾಳೆ. ಹಸೆಮಣೆ ಏರುವ ಮುನ್ನ ಬಿ.ಕಾಂ.ಪರೀಕ್ಷೆ ಬರೆದಿದ್ದಾಳೆ.
ಕೆ.ಆರ್ ಪೇಟೆಯ ಕಲ್ಪತರು ಕಾಲೇಜಿನ ವಿಧ್ಯಾರ್ಥಿನಿ ಕಾವ್ಯಾ ಮೇ 9ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ದಿನವೇ ಇವರು ಪರೀಕ್ಷೆ ಬರೆದಿದ್ದು ವಿಶೇಷ. 11 ಗಂಟೆಗೆ ಮದುವೆ ಮುಹೂರ್ತವಿತ್ತು. ಕಾವ್ಯ ಎರಡನೇ ವರ್ಷದ ಬಿ.ಕಾಂ ಓದುತ್ತಿದ್ದು, ಬ್ಯುಸಿನೆಸ್ ಟ್ಯಾಕ್ಸ್ ಪರೀಕ್ಷೆ ಇತ್ತು. ಮದುವೆಯ ಕೆಲವು ಶಾಸ್ತ್ರಗಳನ್ನು ಮುಗಿಸಿಕೊಂಡು, ಪರೀಕ್ಷೆ ಬರೆದಿದ್ದಾರೆ. ನಂತರ ಮತ್ತೆ ಉಳಿದ ಕೆಲವು ಶಾಸ್ತ್ರಗಳನ್ನುಪೂರೈಸಿದ್ದಾರೆ.
ಮದುವೆ ಉಡುಗೆಯಲ್ಲಿಯೇ ಪರೀಕ್ಷೆ ಕೊಠಡಿಗೆ ಬಂದಿದ್ದರು ಕಾವ್ಯಾ. ಸಂಸಾರಿಕ ಜೀವನದೊಂದಿಗೆ, ಶಿಕ್ಷಣಕ್ಕೂ ಸಮಾನ ಪ್ರಾಶಸ್ತ್ಯ ನೀಡಿದ್ದಾರೆ. ಮಗಳು ಪರೀಕ್ಷೆ ಬರೆದು ಮುಗಿಸುವವರೆಗೂ, ಪರೀಕ್ಷಾ ಕೊಠಡಿಯ ಹೊರಗೆ ನಿಂತು, ಮಗಳನ್ನು ಪೋಷಕರು ಕರೆದೊಯ್ದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.