ಬಾಲಕನ ಪತ್ರಕ್ಕೆ ಕರಗಿದ ಸುಪ್ರೀಂಕೋರ್ಟ್

By Suvarna Web DeskFirst Published Mar 12, 2018, 10:04 AM IST
Highlights

‘ದೇವರು ನಿಮಗಾ ಗಿ ಏನನ್ನಾದರೂ ಕಾದಿರಿಸುತ್ತಾನೆ’. - ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಮೋಹನ್ ಶಾಂತನಗೌಡರ್ ಅವರ ಪೀಠಕ್ಕೆ 10 ವರ್ಷದ ಬಾಲಕ ನೋರ್ವ ಬರೆದ ಪತ್ರದ ಮೊದಲ ಸಾಲುಗಳಿವು.

ನವದೆಹಲಿ: ‘ದೇವರು ನಿಮಗಾ ಗಿ ಏನನ್ನಾದರೂ ಕಾದಿರಿಸುತ್ತಾನೆ’. - ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳಾದ ಕುರಿಯನ್ ಜೋಸೆಫ್ ಮತ್ತು ಮೋಹನ್ ಶಾಂತನಗೌಡರ್ ಅವರ ಪೀಠಕ್ಕೆ 10 ವರ್ಷದ ಬಾಲಕ ನೋರ್ವ ಬರೆದ ಪತ್ರದ ಮೊದಲ ಸಾಲುಗಳಿವು.

ಶನಿವಾರದ ಸುಪ್ರೀಂ ನ್ಯಾಯಾಲಯದ ಕಲಾಪದ ವೇಳೆ ಪುಟ್ಟ ಬಾಲಕನ ಕೃತಜ್ಞತಾ ಪತ್ರವನ್ನು ಓದಿದ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರ ಕಣ್ಣಿಂದ ಆನಂದಬಾಷ್ಪ ಹೊರಹೊಮ್ಮಿತ್ತು. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ 2011ರಲ್ಲಿ ಪ್ರತ್ಯೇಕಗೊಂಡಿದ್ದ ವಿಭುಲ್ ಎಂಬ ಬಾಲಕನ ಪೋಷಕರು ಪರಸ್ಪರರ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು.

ಕೊನೆಗೆ ಎಲ್ಲ 23 ಪ್ರಕರಣಗಳನ್ನು ಪಾಪಸು ಪಡೆದು ಕೊಂಡು, ಪರಸ್ಪರ ಸಮ್ಮತಿಯ ಮೇರೆಗೆ ವಿಚ್ಛೇದನ ಪಡೆಯಲು ದಂಪತಿ ಸಮ್ಮತಿಸಿದರು. ಈ ಹಿನ್ನೆಲೆಯಲ್ಲಿ ಕೊನೆಗೂ ವಿವಾದ ಬಗೆಹರಿದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಕೃತಜ್ಞತಾ ಪತ್ರ ಬರೆದಿದ್ದ.

click me!