
ಚಾರ್ಜಿಂಗ್ ವೇಳೆ ಮೊಬೈಲ್ ಬಳಸಿದ ಪರಿಣಾಮ ಶಾಕ್ ತಗುಲಿ ಸಾವನ್ನಪ್ಪಿರುವ ವಿಚಾರ ಹೊಸದೇನಲ್ಲ ಆದರೀಗ ಚಾರ್ಜಿಂಗ್ ವೇಳೆ ಹೆಡ್ ಫೋನ್ ಹಾಕಿಕೊಂಡೇ 16 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ.
'ನ್ಯೂ ಸ್ಟ್ರೈಟ್ಸ್ ಟೈಮ್ಸ್' ಪ್ರಕಟಿಸಿರುವ ವರದಿಯನ್ವಯ ಈ ಘಟನೆ ಮಲೇಷ್ಯಾದ ರೆಂಬಾವು ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ. ಅಲ್ಲದೇ ಬಾಲಕ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವುದಾಗಿ ಪೊಲೀಸ್ ಇಲಾಖೆ ಖಚಿತಪಡಿಸಿದೆ. ಘಟನೆಯ ವಿಚಾರವಾಗಿ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲವಾದರೂ ಬಾಲಕ ವೈರ್ಲೆಸ್ ಹೆಡ್ ಪೋನ್ ಧರಿಸಿದ್ದ ಎನ್ನಲಾಗಿದೆ.
ಬಾಲಕನ ತಾಯಿ ಮುಂಜಾನೆ ಕೆಲಸಕ್ಕೆಂದು ತೆರಳಿದ್ದು, ಈ ವೇಳೆ ಮಗನ ಕೋಣೆಗೆ ಹೋದಾಗ ಆತ ಮಲಗಿರುವುದನ್ನು ಗಮನಿಸಿದ್ದರೆ. ಆತನಿಗೆ ಯಾವುದೇ ತೊಂದರೆ ಕೊಡುವುದು ಬೇಡ ಎಂದು ತಾಯಿ ತನ್ನ ಕೆಲಸಕ್ಕೆ ತೆರಳಿದ್ದಾರೆ. ಮಧ್ಯಾಹ್ನ ಸುಮಾರು 12.45ರ ವೇಳೆಗೆ ಮರಳಿದ ತಾಯಿ ಮಗನ ಕೋಣೆಗೆ ತೆರಳಿದ್ದಾರೆ. ಮಧ್ಯಾಹ್ನವಾದರೂ ಏಳದ ಮಗನನ್ನು ಕಂಡ ತಾಯಿ ಎಬ್ಬಿಸಲು ಯತ್ನಿಸಿದಾಗ ಬಾಲಕ ಸಾವನ್ನಪ್ಪಿರುವುದು ತಿಳಿದಿದೆ. ಬಾಲಕನ ದೇಹಕ್ಕೆ ಒಂದು ಚಿಕ್ಕವೂ ಗಾಯವಾಗಿರಲಿಲ್ಲ ಆದರೆ ಆತನ ಎಡ ಬದಿಯ ಕಿವಿಯಿಂದ ಮತ್ರ ರಕ್ತ ಬರುತ್ತಿತ್ತೆಂದು ತಾಯಿ ಹೇಳಿದ್ದಾರೆ.
2018ರಲ್ಲಷ್ಟೇ ಮಲೇಷ್ಯಾದ ಕ್ರೇಡಲ್ ಸಂಸ್ಥೆಯ ಸಿಇಒ ನಜ್ರೀನ್ ಹಸನ್ ಎಂಬವರು ಚಾರ್ಜ್ ಆಗಲು ಇಟ್ಟ ಮೊಬೈಲ್ ಸ್ಟೋಟಗೊಂಡ ಪರಿಣಾಮ ಸಾವನ್ನಪ್ಪಿದ್ದರು. ಭಾರತದಲ್ಲೂ ಮೊಬೈಲ್ ಫೋನ್ ಸ್ಟೋಟಗೊಂಡು ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿವೆ. 2018ರ ಮಾರ್ಚ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಒಡಿಶಾದಲ್ಲಿ ವರದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ