ಬೌರಿಂಗ್ ಲಾಕರ್ ನಂ. 69, 71, 78 ಪ್ರಕರಣದ ಇನ್ನೊಂದು ಗುಟ್ಟು ರಟ್ಟು!

Published : Jul 23, 2018, 09:06 PM IST
ಬೌರಿಂಗ್ ಲಾಕರ್ ನಂ. 69, 71, 78 ಪ್ರಕರಣದ ಇನ್ನೊಂದು ಗುಟ್ಟು ರಟ್ಟು!

ಸಾರಾಂಶ

ಬೌರಿಂಗ್ ಇನ್ ಸ್ಟಿಟ್ಯೂಟ್ ನಲ್ಲಿ ಕೋಟಿ ಕೋಟಿ ಹಣ ಪತ್ತೆ  ಪ್ರಕರಣಕ್ಕೆ ಬಿಗ್ ಟಿಸ್ಟ್  ಅವಿನಾಶ್ ಲಾಕರ್ ನಲ್ಲಿ  9.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆ ಅವಿನಾಶ್ ನನ್ನು ಸದಸ್ಯತ್ವದಿಂದ ಉಚ್ಛಾಟನೆಗೊಳಿಸಲು ಬೌರಿಂಗ್ ಇನ್ ಸ್ಟಿಟ್ಯೂಟ್ ನ ಅಧ್ಯಕ್ಷರಿಂದಲೇ ವಿರೋಧ!

ಬೆಂಗಳೂರು: ಬೌರಿಂಗ್ ಇನ್ಸ್ಟಿಟ್ಯೂಟ್ ಲಾಕರ್ವೊಂದರಲ್ಲಿ ಕೋಟಿ ಕೋಟಿ ಹಣ, ಚಿನ್ನ ಪತ್ತೆಯಾಗಿರುವ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ.

ಲಾಕರ್ ಮಾಲಕ ಅವಿನಾಶ್ ಅಮರ್ ಲಾಲ್ ಬೌರಿಂಗ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ರೂಪ್ ಗೂಕಲಾಣಿಯ ಸಂಬಂಧಿಯೆಂಬ ವಿಚಾರ ಇದೀಗ ಬಯಲಾಗಿದೆ.

ಅವಿನಾಶ್ ಅಮರಲಾಲ್, ರೂಪ್ ಗೂಕಲಾಣಿ ಪತ್ನಿಯ ಸಂಬಂಧಿಯಾಗಿದ್ದಾನೆ. ಈ ವಿಚಾರವನ್ನು ರೂಪ್ ಗೂಕಲಾಣಿ,  ಅವಿನಾಶ್‌ನನ್ನು ಸಂಸ್ಥೆಯ ಸದಸ್ಯತ್ವದಿಂದ ಉಚ್ಚಾಟನೆ ಮಾಡಲು ಸೋಮವಾರ ಮಧ್ಯಾಹ್ನ ಕರೆಯಲಾಗಿದ್ದ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ.

ಅಲ್ಲದೇ, ಆತನನ್ನು ಉಚ್ಚಾಟನೆ ಮಾಡದಂತೆ ಅಧ್ಯಕ್ಷರು ಮತ್ತು ಅವರ ಕಡೆಯಿಂದ ಒತ್ತಡ ಕೂಡಾ ಹೇರಲಾಯಿತು.  ಈ ಕಾರಣದಿಂದ ಸಭೆಯು ಕೆಲ ಕಾಲ ಗೊಂದಲಗೂಡಾಗಿತ್ತು. ಆದರೆ ಬೌರಿಂಗ್ ಇನ್ಸ್ಟಿಟ್ಯೂಟ್ ಕಾರ್ಯದರ್ಶಿ ಶ್ರೀಕಾಂತ್ ಉಚ್ಛಾಟನೆಯ ನಿರ್ಧಾರ ಕೈಗೊಂಡಿದ್ದಾರೆ. ಆ ನಿಟ್ಟಿನಲ್ಲಿ ಶೋಕಸ್ ನೋಟಿಸ್ ಜಾರಿ ಮಾಡಿ, ಉತ್ತರ ಬಂದ ಬಳಿಕ ಉಚ್ಚಾಟನೆ ಮಾಡುವುದಾಗಿ ನಿರ್ಧರಿಸಲಾಗಿದೆ. 

ಈ ಪ್ರಕರಣದಿಂದ ಬೌರಿಂಗ್ ಇನ್ಸ್ಟಿಟ್ಯೂಟ್ ಗೆ ಈಗಾಗಲೇ ಕೆಟ್ಟ ಹೆಸರು ಬಂದಿದೆ. ಈ ಹಿನ್ನಲೆ ಉಚ್ಚಾಟನೆ ಶತ ಸಿದ್ದ ಎಂದು ಶ್ರೀಕಾಂತ್ ಹೇಳಿದ್ದಾರೆ.

ಕಳೆದ ಶನಿವಾರ,  ಬೌರಿಂಗ್ ಇನ್ಸ್‌ಸ್ಟಿಟ್ಯೂಟ್ ಆಡಳಿತ ಮಂಡಳಿಯು, ಅವಿನಾಶ್ ಅಮರ್ ಲಾಲ್ ಎಂಬ ಉದ್ಯಮಿಗೆ ಸೇರಿದ  ಲಾಕರನ್ನು ತೆರೆದಾಗ ಲಾಕರ್ ಒಳಗೆ 2 ಬ್ಯಾಗ್ ಪತ್ತೆಯಾಗಿದ್ದು, ಈ ಬ್ಯಾಗ್ ಗಳಲ್ಲಿ  9.90 ಕೋಟಿ ನಗದು, 5 ಕೋಟಿ ಮೌಲ್ಯದ ವಜ್ರಾಭರಣ ಮತ್ತು 100 ಕೋಟಿ ಮೌಲ್ಯದ ಆಸ್ತಿ ಪತ್ರಗಳು ಪತ್ತೆಯಾಗಿತ್ತು.

ಲಾಕರ್ ಓಪನ್ ಮಾಡುತ್ತಿದ್ದಂತೆ ಗಾಬರಿಯಾಗಿ ಬೌರಿಂಗ್ ಆಡಳಿತ ಮಂಡಳಿಯು ಪೊಲೀಸರಿಗೆ ಮಾಹಿತಿ ನೀಡಿದೆ. ಆದರೆ ಈ ಹಣವನ್ನು ನೋಡಿದ ಬಳಿಕ ಪೊಲೀಸರೂ ಕೂಡ ಈ ಪ್ರಮಾಣದ ಭಾರೀ ಹಣ, ಆಭರಣ  ಪರಿಶೀಲನೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು  ಐಟಿ ಇಲಾಖೆಗೆ ಮಾಹಿತಿ ನೀಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಮೊದಲ ಹೈಡ್ರೋಜನ್‌ ಚಾಲಿತ ವಾಟರ್‌ ಟ್ಯಾಕ್ಸಿ ವಾರಾಣಸಿಯಲ್ಲಿ ಶುರು
ಎಐ ನಿರ್ಮಾತೃಗಳಿಗೆ 2025ರ ಟೈಮ್ ವರ್ಷದ ವ್ಯಕ್ತಿ ಗೌರವ!