ಇಂಡೋನೇಶಿಯಾ ವಿಮಾನ ದುರಂತ: ಭಾರತೀಯ ಪೈಲೆಟ್ ಶವ ಗುರುತು ಪತ್ತೆ!

By Web DeskFirst Published Nov 25, 2018, 12:06 PM IST
Highlights

ಇಂಡೋನೇಶಿಯಾ ವಿಮಾನ ದುರಂತ! ಭಾರತೀಯ ಪೈಲೆಟ್ ಶವ ಗುರುತು ಪತ್ತೆ! ಪೈಲೆಟ್ ಭಾವೆ ನುನೆಜಾ ಶವ ಗುರುತು ಪತ್ತೆ! ನವದೆಹಲಿ ಮೂಲದ ಪೈಲೆಟ್ ಭಾವೆ ಸುನೆಜಾ! ಇಂಡೋನೇಶಿಯಾ ಅಧಿಕಾರಿಗಳಿಂದ ಮಾಹಿತಿ

ನವದೆಹಲಿ(ನ.25): ಕಳೆದ ಅಕ್ಟೋಬರ್ 29ರಂದು ಅಪಘಾತಕ್ಕೀಡಾಗಿದ್ದ ಇಂಡೋನೇಶಿಯಾದ ವಿಮಾನವನ್ನು ನಡೆಸುತ್ತಿದ್ದ ಭಾರತೀಯ ಪೈಲೆಟ್ ಮೃದೇಹ ಪತ್ತೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಇಂಡೋನೇಶಿಯಾ ಅಧಿಕಾರಿಗಳು, ಲಯನ್ ಏರ್‌ ಫ್ಲೈಟ್ ಮುನ್ನಡೆಸುತ್ತಿದ್ದ ಭಾರತೀಯ ಕ್ಯಾಪ್ಟನ್ ಭಾವೆ ಸುನೆಜಾ ಅವರ ಮೃತದೇಹದ ಗುರುತು ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ.

ನವದೆಹಲಿ ಮೂಲದ ಭಾವೆ ಸುನೆಜಾ, 2009ರಲ್ಲಿ ಪೈಲೆಟ್ ಲೈನ್ಸೆನ್ಸ್ ಪಡೆದಿದ್ದ ಭಾವೆ ಸುನೆಜಾ, ನಂತರ ಇಂಡೋನೇಶಿಯಾದಲ್ಲಿ ಕರ್ತವ್ಯನಿರತರಾಗಿದ್ದರು. ಕಳೆದ ಅಕ್ಟೋಬರ್ 29ರಂದು 188 ಪ್ರಯಾಣಿಕರನ್ನು ಹೊತ್ತ ಲಯನ್ ಏರ್‌ ಫ್ಲೈಟ್ ಜಾವಾ ಸಮೀಪದ ದ್ವೀಪದಲ್ಲಿ ಅಪಘಾತಕ್ಕೀಡಾಗಿ ಸಮುದ್ರದಲ್ಲಿ ಮುಳುಗಿತ್ತು.

Indonesian authorities have confirmed identification of the body of Capt.Bhavya Suneja. The remains will be handed over to the family in the presence of today. My heartfelt condolences to the bereaved family.

— Sushma Swaraj (@SushmaSwaraj)

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಇಂಡೋನೇಶಿಯಾದ ವಿಮಾನ ದುರಂತದಲ್ಲಿ ಮೃತಪಟ್ಟಿರುವ ಭಾರತೀಯ ಪೈಲೆಟ್ ಭಾವೆ ಸುನೆಜಾ ಅವರ ಮೃದೇಹದ ಗುರುತು ಪತ್ತೆಯಾಗಿದ್ದು, ಶೀಘ್ರವೇ ಭಾರತೀಯ ರಾಯಭಾರಿ ಕಚೇರಿ ನೇತೃತ್ವದಲ್ಲಿ ಶವವನ್ನು ಭಾರತಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.

click me!