
ಬೆಂಗಳೂರು (ಏ.01): ಡೀಸೆಲ್ ದರ ಕಡಿಮೆಯಾದರೂ ಬಿಎಂಟಿಸಿ ದರ ಇಳಿಕೆ ಮಾಡದ ರಾಜ್ಯ ಸರ್ಕಾರ , ಈಗ ಬಿಎಂಟಿಸಿ ದರ ಇಳಿಕೆ ಮಾಡುವುದರ ಮೂಲಕ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಕಡಿಮೆ ಅಂತರದ ಪ್ರಯಾಣ ಮಾಡುವವರಿಗೆ ಅನುಕೂಲ ಮಾಡಿಕೊಡಲು ಹಾಗೂ ಚಿಲ್ಲರೆ ಸಮಸ್ಯೆ ನಿವಾರಿಸಲು ಎರಡನೇ ಹಂತದ 12 ರೂ. ಟಿಕೆಟ್ ದರವನ್ನು 10 ರೂ. ಗೆ ಇಳಿಸಲಾಗಿದೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಈ ಹೊಸ ದರ ಜಾರಿಗೆ ಮಾಡಲು ಬಿಎಂಟಿಸಿ ಸಿದ್ಧತೆ ನಡೆಸಿದೆ. ಕಳೆದ ತಿಂಗಳು ಬಿಎಂಟಿಸಿಯಿಂದ ರಾಜ್ಯ ಸರಕಾರಕ್ಕೆ ದರ ಇಳಿಕೆ ಬಗ್ಗೆ ಪ್ರಸ್ತಾವನೆಯೊಂದು ಸಲ್ಲಿಕೆ ಮಾಡಲಾಗಿತ್ತು, ಈಗ ಸರಕಾರದ ಮಟ್ಟದಲ್ಲಿ ಚರ್ಚೆಯಾದ ಬಳಿಕ ದರ ಇಳಿಕೆಗೆ ಬಿಎಂಟಿಸಿ ಸಂಸ್ಥೆ ನಿರ್ಧರಿಸಿದೆ.
ಕಳೆದ ಮೂರ್ನಾಲ್ಕೂ ತಿಂಗಳುಗಳಿಂದ ಬಿಎಂಟಿಸಿ ಅಧಿಕಾರಿಗಳು ಟಿಕೆಟ್ ದರದ ಕುರಿತು ಸಮೀಕ್ಷೆ ನಡೆಸಿದ್ದಾಗ, ಒಂದನೇ ಹಂತಕ್ಕೆ 5 ರೂ. ದರವಿರುವಾಗ ಎರಡನೇ ಹಂತಕ್ಕೆ 12 ರೂ. ಏಕೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಅನೇಕರು ಪ್ರಶ್ನೆ ಮಾಡಿದ್ರು. ಹೀಗಾಗಿ ಈಗ ಬಿಎಂಟಿಸಿ ತನ್ನ ಎರಡನೇ ಸ್ಟೇಜ್ ದರವನ್ನು ಕಡಿಮೆ ಮಾಡಿದ್ದು ಮುಂದಿನ ವಾರದ ಅಂತ್ಯದಲ್ಲಿ ಈ ದರವನ್ನು ಜಾರಿಗೆ ತರಲಿದೆ. ಅಷ್ಟೇ ಅಲ್ಲದೆ ನಗರದಲ್ಲಿ ಬಿಎಂಟಿಸಿ ಅನುಭವಿಸುತ್ತಿರುವ ನಷ್ಟದ ಮಾರ್ಗಗಳಲ್ಲಿ ವಿಶೇಷ ಆಫರ್ಗಳನ್ನ ನೀಡಲಿದ್ದು, ಸ್ಟೇಜ್ ದರವನ್ನು ಕಡಿಮೆ ಮಾಡಲಿದೆ. ಇನ್ನೂ ಬಿಎಂಟಿಸಿಯ ಈ ನಿರ್ಧಾರಕ್ಕೆ ಪ್ರಯಾಣಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.