ವಿಶ್ವವಾಣಿಜ್ಯ ಕಟ್ಟಡ ಅನಾಹುತದ ಬಗ್ಗೆ ಎಚ್ಚರಿಸಿದ್ದ ವಾಂಗ, 2018ರ ಭವಿಷ್ಯವಾಣಿ ಏನಿದೆ..?

Published : Dec 26, 2017, 03:33 PM ISTUpdated : Apr 11, 2018, 01:00 PM IST
ವಿಶ್ವವಾಣಿಜ್ಯ ಕಟ್ಟಡ ಅನಾಹುತದ ಬಗ್ಗೆ ಎಚ್ಚರಿಸಿದ್ದ ವಾಂಗ, 2018ರ ಭವಿಷ್ಯವಾಣಿ ಏನಿದೆ..?

ಸಾರಾಂಶ

ಬಲ್ಗೇರಿಯಾದ ಬಾಬಾ ವಾಂಗ ಎಂಬ ಅಂಧ ಮಹಿಳೆ ಈ ಹಿಂದೆ ಹೇಳಿದ ಅನೇಕ ಭವಿಷ್ಯಗಳು ಸತ್ಯವಾಗಿದ್ದು, 2018ರಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆಯೂ ಆಕೆ ಭವಿಷ್ಯವನ್ನು ಹೇಳಿದ್ದಾರೆ.

ಬೆಂಗಳೂರು (ಡಿ.26): ಬಲ್ಗೇರಿಯಾದ ಬಾಬಾ ವಾಂಗ ಎಂಬ ಅಂಧ ಮಹಿಳೆ ಈ ಹಿಂದೆ ಹೇಳಿದ ಅನೇಕ ಭವಿಷ್ಯಗಳು ಸತ್ಯವಾಗಿದ್ದು, 2018ರಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆಯೂ ಆಕೆ ಭವಿಷ್ಯವನ್ನು ಹೇಳಿದ್ದಾರೆ.

1996ರಲ್ಲಿ ತಮ್ಮ 85ನೇ ವರ್ಷಕ್ಕೆ ನಿಧನರಾದ ಈಕೆ ಜಗತ್ತಿನಲ್ಲಿ ಯಾವ ಕಾಲದಲ್ಲಿ ಏನಾಗುತ್ತದೆ ಎನ್ನುವ ಎಲ್ಲಾ ಭವಿಷ್ಯವನ್ನೂ ಕೂಡ ಹೇಳಿದ್ದಾರೆ. 2018ರಲ್ಲಿ 2 ಪ್ರಮುಖ ಘಟನೆಗಳು ಸಂಭವಿಸಲಿದೆ ಆಕೆ ಹೇಳಿದ್ದಾರೆ.

2018ಕ್ಕೆ ಚೀನಾ ವಿಶ್ವದ ಸೂಪರ್ ಪವರ್ ದೇಶವಾಗಲಿದೆ ಎಂದು ಹೇಳಿದ್ದಾರೆ. ಇನ್ನು ಶುಕ್ರದಲ್ಲಿ ಹೊಸದಾದ ಶಕ್ತಿಯ ಮೂಲವೊಂದರ ಸಂಶೋಧನೆ ನಡೆಯಲಿದೆ ಎಂದು ಹೇಳಿದ್ದಾರೆ.

ಚೀನಾದಲ್ಲಿ ಈ ಭವಿಷ್ಯ ಹೆಚ್ಚಿನ ಪ್ರಮಾಣದಲ್ಲಿ ನಿಜವಾಗುತ್ತಿದೆ. ಅದರ ಆರ್ಥಿಕ ಮಟ್ಟ ನಾಗಾಲೋಟದಲ್ಲಿ ಸಾಗುತ್ತಿದೆ.

ಇನ್ನು ಮುಂದಿನ ದಿನಗಳ ಬಗ್ಗೆಯೂ ಕೂಡ ಆಕೆ ಭವಿಷ್ಯವನ್ನು ನುಡಿದಿದ್ದು, 2025ರ ವೇಳೆಗೆ  ಹಸಿವು ಸಂಪೂರ್ಣ ನಿರ್ಮೂಲನೆಯಾಗಲಿದೆ ಎಂದೂ ಹೇಳಿದ್ದಾರೆ.  51ನೇ ಶತಮಾನದ ವೇಳೆ ವಿಶ್ವವು ಸಂಪೂರ್ಣ ನಿರ್ಮೂಲನೆಯಾಗಲಿದೆ.

ವಿಶ್ವ ವಾಣಿಜ್ಯ ಕಟ್ಟಡದ ಮೇಲಿನ ದಾಳಿಯ ಬಗ್ಗೆ ಈಕೆ ಎಚ್ಚರಿಕೆ ನೀಡಿದ್ದರು. ಅದು ನಿಜವಾಗಿತ್ತು. ಇದೀಗ ಯುರೂಪ್’ನಲ್ಲಿ ಐಸಿಸ್ ತನ್ನ ಪ್ರಾಭಲ್ಯವನ್ನು ಹರಡಲಿದ್ದು, ರೋಂ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಳ್ಳಲಿದೆ. 2066ರ ವೇಳೆಗೆ ಅಮೆರಿಕವನ್ನೂ ಕೂಡ ತನ್ನ ವಶಕ್ಕೆ ಪಡೆಯಲಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!