ಗುಜರಾತ್‌ ಪಾಲಿಕೆ ಚುನಾವಣೆ: ಬಿಜೆಪಿ ಮುನ್ನಡೆ, ಕೈ ಯಥಾಸ್ಥಿತಿ

By Suvarna Web DeskFirst Published Feb 20, 2018, 7:30 AM IST
Highlights

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ಕಳೆದ ಇದೀಗ ತನ್ನ ಗೆಲುವಿನ ಓಟವನ್ನು ಪಾಲಿಕೆ ಚುನಾವಣೆಯಲ್ಲೂ ಮುಂದುವರೆಸಿದೆ.

ಅಹಮದಾಬಾದ್‌: ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ಕಳೆದ ಇದೀಗ ತನ್ನ ಗೆಲುವಿನ ಓಟವನ್ನು ಪಾಲಿಕೆ ಚುನಾವಣೆಯಲ್ಲೂ ಮುಂದುವರೆಸಿದೆ.

ಕಳೆದ ಶನಿವಾರ ರಾಜ್ಯದ 75 ಮುನ್ಸಿಪಲ್‌ಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, 45 ನಗರಪಾಲಿಕೆಗಳನ್ನು ಬಿಜೆಪಿ ತೆಕ್ಕೆಗೆ ಹಾಕಿಕೊಂಡಿದೆ. ಕಳೆದ ಬಾರಿ ಬಿಜೆಪಿ 59 ಪಾಲಿಕೆ ಗೆದ್ದಿತ್ತು. ಇದೆ ವೇಳೆ ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ 16 ಸ್ಥಾನ ಗೆದ್ದಿದೆ.

ಉಳಿದಂತೆ ಎನ್‌ಸಿಪಿ ಮತ್ತು ಬಿಎಸ್‌ಪಿ ತಲಾ ಒಂದರಲ್ಲಿ ಗೆಲುವು ಸಾಧಿಸಿವೆ. ನಾಲ್ಕರಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದು, ಆರು ನಗರಪಾಲಿಕೆಗಳು ಅಂತಂತ್ರಗೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಮೆಹಸಾನಾ ಜಿಲ್ಲೆಯ ವಾಡ್‌ನಗರ ಪಟ್ಟಣದಲ್ಲಿ 28 ಸ್ಥಾನಗಳ ಪೈಕಿ 27 ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 99 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಹಿಡಿದಿತ್ತು. ಕಾಂಗ್ರೆಸ್‌ 77 ಸ್ಥಾನಗಳನ್ನು ಗೆಲ್ಲುವ ಮೂಲಕ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿತ್ತು.

click me!