
ಬೆಂಗಳೂರು (ಮಾ. 27): ರಾಜ್ಯಸಭಾ ಚುನಾವಣೆಯಲ್ಲಿ ಉತ್ತರಾಖಂಡದಿಂದ ಅನಿಲ್ ಬಲೂನಿ ಎಂಬ ಬಿಜೆಪಿ ಮೀಡಿಯಾ ಪ್ರಭಾರಿ ಬಿಜೆಪಿ ಟಿಕೆಟ್ ಪಡೆದದ್ದು ಭಾರೀ ಚರ್ಚೆಯ ವಿಷಯ. ರಾಮ್ ಮಾಧವ್, ಮುರಳೀಧರರಾವ್ ತರಹದವರಿಗೇ ಟಿಕೆಟ್ ಕೊಡದ ಮೋದಿ, ಅನಿಲ್ ಬಲೂನಿ ಹೆಸರಿಗೆ ಓಕೆ ಅಂದಿದ್ದಾರೆ.
2000 ದಲ್ಲಿ ದಿಲ್ಲಿಯಲ್ಲಿ ಸಣ್ಣಪುಟ್ಟ ಪತ್ರಿಕೆಗಳಿಗೆ ಬರೆಯುತ್ತಿದ್ದ ಅನಿಲ್ ಬಲೂನಿ ಆಗಿನಿಂದ ಮೋದಿ ಅವರಿಗೆ ಪರಿಚಿತರು. ಬಲೂನಿಗೆ ಕೆಲಸ ಇಲ್ಲದಿದ್ದಾಗ ಮೋದಿ ಅವರೇ ಸುಂದರ್ ಸಿಂಗ್ ಭಂಡಾರಿ ಬಳಿ ಕಾರ್ಯದರ್ಶಿಯಾಗಿ ಜೋಡಿಸಿದರು. ನಂತರ ಕಾಕತಾಳೀಯ ಎಂಬಂತೆ ಮೋದಿ ಮುಖ್ಯಮಂತ್ರಿ ಆದರೆ ಭಂಡಾರಿ ಗುಜರಾತ್ ರಾಜ್ಯಪಾಲರಾದರು. ಅನಿಲ್ ಬಲೂನಿ ರಾಜ್ಯಪಾಲರ ವಿಶೇಷ ಅಧಿಕಾರಿಯಾದರು. ಆಗಿನಿಂದ ಬಲೂನಿ ಮುಖ್ಯಮಂತ್ರಿ ಮೋದಿಗೆ ಇನ್ನೂ ಹತ್ತಿರದವರಾಗಿ ನಂತರ ದಿಲ್ಲಿಯಲ್ಲಿ ಕೂಡ ಮೋದಿ ಜೊತೆಗೆ ಬಂದು ರಾಜ್ಯಸಭೆ ತಲುಪಿದ್ದಾರೆ.
ಬಲೂನಿ ಹೆಸರೇ ಎಲ್ಲೂ ಇರಲಿಲ್ಲವಂತೆ, ಆದರೆ ಮೋದಿ ಅವರೇ ಬಲೂನಿಗೆ ಟಿಕೆಟ್ ಕೊಡಬೇಕು ಎಂದು ಅಮಿತ್ ಶಾಗೆ ಹೇಳಿ ಹಾಕಿಸಿದರಂತೆ. ಈಗ ಆರ್‌ಎಸ್‌ಎಸ್‌ನಿಂದ ಬಂದು ನಾಯಕರಾಗಿರುವವರು ಬಲೂನಿ
ಆಯ್ಕೆ ಕಂಡು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.
ರಾಜಕಾರಣದ ಹೆಚ್ಚಿನ ಸುದ್ದಿಗಳಿಗೆ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.