ಹಕ್ಕು ಮಂಡನೆಗೆ ರೆಡಿಯಾದ ಬಿಜೆಪಿ: ಪ್ರಮಾಣವಚನ, ವಿಶ್ವಾಸಮತ ಯಾವಾಗ?

By Web DeskFirst Published Jul 23, 2019, 9:21 PM IST
Highlights

ಕೊನೆಗೂ ರಾಜ್ಯ ಸಮ್ಮಿಶ್ರ ಸರ್ಕಾರ  ಪತನ| ಸರ್ಕಾರ ರಚನೆಯ ಕಸರತ್ತು ಶುರು ಮಾಡಿದ ಬಿಜೆಪಿ| ರಾಜ್ಯಪಾಲರ ಮುಂದೆ ಸರ್ಕಾರ ರಚನೆಯ ಹಕ್ಕು ಮಂಡನೆ ಸಾಧ್ಯತೆ| ಗುರುವಾರ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣವಚನ ಸಾಧ್ಯತೆ?| ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ? 

ಬೆಂಗಳೂರು(ಜು.23): ರಾಜ್ಯ ಮೈತ್ರಿ ಸರ್ಕಾರ ಪತನವಾದ ಹಿನ್ನೆಲೆಯಲ್ಲಿ, ಬಿಜೆಪಿ ಸರ್ಕಾರ ರಚನೆಯ ಕಸರತ್ತು ಶುರು ಮಾಡಿದೆ. ಮೂಲಗಳ ಪ್ರಕಾರ ನಾಳೆ(ಜು.24) ರಾಜ್ಯಪಾಲರ ಮುಂದೆ ಯಡಿಯೂರಪ್ಪ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದಾರೆ.

ಗುರುವಾರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಮಾಡಲಿದ್ದಾರೆ ಎನ್ನಲಾಗಿದೆ.

Democracy restored in Karnataka as the power greedy unholy alliance of Congress & JDS bits dust

People had blessed us as single largest party
We will soon form a government that will upload the dignity & sanctity of our land

We will script the era of development pic.twitter.com/AVQ0ooLzgh

— BJP Karnataka (@BJP4Karnataka)

ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಎಸ್ ಯಡಿಯೂರಪ್ಪ, ಸರ್ಕಾಶರ ರಚನೆಯ ಕುರಿತು ವರಿಷ್ಠರೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

click me!