ನಾಳೆಯಿಂದ ಬಿಜೆಪಿ ಪರಿವರ್ತನಾ ಯಾತ್ರೆ; ರಾಜ್ಯಕ್ಕೆ ಧಾವಿಸಲಿದ್ದಾರೆ ಬಿಜೆಪಿ ಫೈರ್ ಬ್ರಾಂಡ್ ನಾಯಕರು

By Suvarna Web DeskFirst Published Nov 1, 2017, 4:36 PM IST
Highlights

ನಾಳೆಯಿಂದ ಆರಂಭವಾಗಲಿರುವ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಕೇರಳದಲ್ಲಿ ನಡೆದ ಜನರಕ್ಷಾ ಯಾತ್ರೆಯ ಮಾದರಿಯಲ್ಲೇ ನಡೆಯಲಿದೆ.

ಬೆಂಗಳೂರು (ನ.01): ನಾಳೆಯಿಂದ ಆರಂಭವಾಗಲಿರುವ ಬಿಜೆಪಿಯ  ನವ ಕರ್ನಾಟಕ ಪರಿವರ್ತನಾ ಯಾತ್ರೆ ಕೇರಳದಲ್ಲಿ ನಡೆದ ಜನರಕ್ಷಾ ಯಾತ್ರೆಯ ಮಾದರಿಯಲ್ಲೇ ನಡೆಯಲಿದೆ.

ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ದಿನಕ್ಕೊಬ್ಬ ಬಿಜೆಪಿಯ ಪ್ರಮುಖ ನಾಯಕರನ್ನು ಕರೆಸಿ ವಿವಿಧ ಜಿಲ್ಲೆಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಬಿಜೆಪಿ ಫೈರ್​ ಬ್ರಾಂಡ್​ ನಾಯಕರಾದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ರಾಜಸ್ಥಾನ ಸಿಎಂ ವಸುಂಧರಾ ರಾಜೇ, ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್​, ಗೋವಾ ಸಿಎಂ ಮನೋಹರ್​ ಪರಿಕ್ಕರ್​, ಕೇಂದ್ರ ಸಚಿವರಾದ ಉಮಾಭಾರತಿ, ಸುಷ್ಮಾ ಸ್ವರಾಜ್,  ನಿರ್ಮಲಾ ಸೀತಾರಾಮನ್​,  ರಾಜವರ್ಧನ್​ ಸಿಂಗ್​  ಥೋಡ್​ ಮತ್ತು ವಿವಿಧ ರಾಜ್ಯಗಳ ಪ್ರಭಾವಿ ಬಿಜೆಪಿ ಅಧ್ಯಕ್ಷರು ಯಾತ್ರೆ ಮಧ್ಯೆ ಒಂದೊಂದು ದಿನ ಪಾಲ್ಗೊಳ್ಳಲಿದ್ದಾರೆ. ಇದರಿಂದ ಆರಂಭದಿಂದ ಅಂತ್ಯದವರೆಗೂ ಯಾತ್ರೆಯ ಗಂಭೀರತೆ ಉಳಿಯಲಿದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಕೇರಳದಲ್ಲಿ ಜನರಕ್ಷಾ ಯಾತ್ರೆ ವೇಳೆ ಇದೇ ತಂತ್ರವನ್ನು ಅನುಸರಿಸಿ ಬಿಜೆಪಿ ಯಶಸ್ವಿಯಾಗಿತ್ತು. ಇನ್ನು ಹುಬ್ಬಳ್ಳಿ ಸಮಾವೇಶ ಮತ್ತು ಬೆಂಗಳೂರಿನಲ್ಲಿ ನಡೆಯುವ ಯಾತ್ರೆಯ ಸಮಾರೋಪ ಸಮಾವೇಶಕ್ಕೆ ಪ್ರಧಾನಿ ಮೋದಿ ಅವರನ್ನು ಕರೆಸುವ ಪ್ರಯತ್ನವನ್ನು ರಾಜ್ಯ ಬಿಜೆಪಿ ನಡೆಸಿದ್ದು, ಸಮಾರೋಪ ಸಮಾರಂಭದಲ್ಲಿ ಮೋದಿ ಭಾಗವಹಿಸುವುದು ಖಚಿತವಾಗಿದೆ.

click me!