
ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಅಪರಾಧಿಯೆಂದು ಘೋಷಿಸಲ್ಪಟ್ಟ ಸ್ವಘೋಷಿತ ದೇವಮಾನವ ಬಾಬಾ ರಹೀಂ ಬೆಂಬಲಕ್ಕೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ನಿಂತಿದ್ದಾರೆ.
ನಾನು ನ್ಯಾಯಾಂಗವನ್ನು ಗೌರವಿಸುತ್ತೇನೆ. ಲಕ್ಷಂತಾರ ಮಂದಿ ಬಾಬಾರನ್ನು ಬೆಂಬಲಿಸುತ್ತಿದ್ದಾರೆ, ಕೇವಲ ಒಬ್ಬರು ಮಾತ್ರ ದೂರು ನೀಡಿದ್ದಾರೆ. ಲಕ್ಷಾಂತರ ಮಂದಿಯ ನಿಲುವು ಸರಿಯೇ ಅಥವಾ ಒಬ್ಬ ದೂರುದಾರ ಸರಿಯೇ? ಎಂದು ಕೇಳುವ ಮೂಲಕ ಸಾಕ್ಷಿ ಮಹಾರಾಜ್ ವಿವಾದ ಸೃಷ್ಟಿಸಿದ್ದಾರೆ.
ಸಾಕ್ಷಿ ಮಹಾರಾಜ್ ಹೇಳಿಕೆಯು ಬಿಜೆಪಿಗೆ ಮುಜುಗುರ ಉಂಟುಮಾಡಿದ್ದು, ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎನ್ನಲಾಗಿದೆ. ಸಾಕ್ಷಿ ಮಹಾರಾಜ್ ಅವರಿಂದ ಸ್ಪಷ್ಟನೆ ಕೇಳಲಾಗಿದೆಯೆಂದು ವರದಿಯಾಗಿದೆ.
ಕಾನೂನು ಪರಿಸ್ಥಿತಿ ಹದಗೆಟ್ಟಿದೆ, ಇಷ್ಟೊಂದು ಹಿಂಸಾಚಾರ ನಡೆಯುತ್ತಿದೆ, ಜನರು ಸಾವನಪ್ಪುತ್ತಿದ್ದಾರೆ. ಇದನನ್ನೆಲ್ಲಾ ಪರಿಗಣಿಸಬಾರದೇ? ಎಂದು ಉತ್ತರ ಪ್ರದೇಶದ ಉನ್ನಾವೋನಿಂದ ಸಂಸದರಾಗಿರುವ ಸಾಕ್ಷಿ ಮಹಾರಾಜ್ ಪ್ರಶ್ನಿಸಿದ್ದಾರೆ.
ಸುಪ್ರೀಂ ಕೋರ್ಟ್ ಆಗಲಿ, ಹೈಕೋರ್ಟ್ ಆಗಲಿ ಜಾಮಾ ಮಸೀದಿಯ ಶಾಹಿ ಇಮಾಮರನ್ನು ಈ ರೀತಿ ಕರೆಯಲು ಸಾಧ್ಯವೇ? ಅವರು ಕೂಡಾ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ...ಅವರೇನು ಸಂಬಂಧಿಕರೆ? ರಾಮ ರಹೀಮರು ಒಬ್ಬ ಸರಳ ಜೀವಿಯಾಗಿರುವುದರಿಂದ ಅವರನ್ನು ಸತಾಯಿಸಲಾಗುತ್ತಿದೆ, ಎಂದು ಅವರು ಹೇಳಿದ್ದಾರೆ.
ಹಿಂದೂ ಸಂಸ್ಕೃತಿಗೆ ಕೆಟ್ಟ ಹೆಸರು ತರುವ ಷಡ್ಯಂತ್ರ ಇದಾಗಿದೆ ಎಂದಿರುವ ಸಾಕ್ಷಿ ಮಹಾರಾಜ್, ಏನಾದರೂ ದೊಡ್ಡ ದುರ್ಘಟನೆ ನಡೆದರೆ ಅದಕ್ಕೆ ಡೇರಾ ಅನುಯಾಯಿಗಳನ್ನು ಹೊಣೆಗಾರನ್ನಾಗಿಸಬಾರದು, ಅದಕ್ಕೆ ನ್ಯಾಯಾಲಯಗಳೇ ಹೊಣೆ, ಎಂದು ಸಂಸದ ಸಾಕ್ಷಿ ಮಹಾರಾಜ್ ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.