ಕೇರಳಕ್ಕೆ ಬಿಜೆಪಿ ಶಾಸಕರು, ಸಂಸದರಿಂದ 25 ಕೋಟಿ ದೇಣಿಗೆ !

By Web DeskFirst Published Aug 28, 2018, 10:59 AM IST
Highlights

ಕೇರಳ ಪ್ರವಾಹಕ್ಕೆ ದೇಶದ ಮೂಲೆ ಮೂಲೆಯಿಂದ ನೆರವಿನ ಮಹಾಪೂರವೇ ಹರಿದು ಬಂದಿದೆ. ಪಕ್ಷ, ಜಾತಿ, ಭೇದ ಎಲ್ಲವನ್ನು ಮರೆತು ನೆರವಿನ ಹಸ್ತ ಚಾಚಿದ್ದಾರೆ. ಬಿಜೆಪಿ ಸಂಸದರು, ಶಾಸಕರು 25 ಕೋಟಿ ದೇಣಿಗೆ ನೀಡಿದ್ದಾರೆ. 

ತಿರುವನಂತಪುರಂ (ಆ. 28): ಬಿಜೆಪಿ ಸಚಿವರು ಮತ್ತು ಸಂಸದರು ಕೇರಳ ನೆರೆ ಪರಿಹಾರಕ್ಕಾಗಿ 25 ಕೋಟಿ ರು. ದೇಣಿಗೆ ನೀಡಿದ್ದಾರೆ ಎಂಬ ಒಕ್ಕಣೆಯೊಂದಿನ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಬಿಜೆಪಿ ಸಂಸದರನ್ನೂ ಒಳಗೊಂಡಂತೆ ನಾಲ್ವರು 25 ಕೋಟಿ ರು. ಚೆಕ್ ನೀಡುತ್ತಿರುವ ಫೋಟೋದೊಂದಿಗೆ ‘ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ 25 ಕೋಟಿ ರು. ದೇಣಿಗೆ ನೀಡಿದ್ದಾರೆ. ಹಾಗಾಗಿ ಪಕ್ಷದಿಂದ ಏನನ್ನೂ ಪಡೆದಿಲ್ಲ ಎಂದು ಹೇಳಬೇಡಿ’ ಎಂಬ ಒಕ್ಕಣೆಯನ್ನು ಬರೆಯಲಾಗಿದೆ.

Latest Videos

ಮೊದಲಿಗೆ ಶ್ರೀಕುಮಾರ್ ಶ್ರೀಧರ್ ನಾಯರ್ ಎಂಬ ಹೆಸರಿನ ಫೇಸ್‌ಬುಕ್ ಪೇಜ್ ಇದನ್ನು ಪೋಸ್ಟ್ ಮಾಡಿದ್ದು, 10 ಸಾವಿರ ಬಾರಿ ಶೇರ್ ಆಗಿದೆ. ಆದರೆ ನಿಜಕ್ಕೂ ಬಿಜೆಪಿ ಸಚಿವರು ಮತ್ತು ಸಂಸದರು ಕೇರಳ ನೆರೆ ಪರಿಹಾರವಾಗಿ 25 ಕೋಟಿ ರು. ನೀಡಿದ್ದು ನಿಜವೇ ಎಂದು ಪರಿಶೀಲಸಿದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಪತ್ತೆಯಾಗಿದೆ.

ವಾಸ್ತವವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಫೋಟೋ ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕೆ ನೀಡುತ್ತಿರುವ ದೇಣಿಗೆಯಲ್ಲ, ಬದಲಾಗಿ ಕೇಂದ್ರ ಸಾರ್ವಜನಿಕ ವಲಯದ ಪೆಟ್ರೋಲಿಯಂ ಕಂಪನಿಗಳು ನೆರೆಪ್ರವಾಹ ಪೀಡಿತ ಕೇರಳಕ್ಕಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ 25 ಕೋಟಿ ರು. ನೀಡುತ್ತಿರುವ ಫೋಟೋ. ಪೆಟ್ರೋಲಿಯಂ ಕಂಪನಿಗಳ ಪರವಾಗಿ ಆ ಚೆಕ್ ಅನ್ನು ಬಿಜೆಪಿ ಸಂಸದರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ನೀಡಿದ್ದರು.

ಇದೇ ಫೋಟೋವನ್ನು ಬಳಸಿಕೊಂಡು ಬಿಜೆಪಿ ಸಚಿವರು ಮತ್ತು ಸಂಸದರು ಕೇರಳಕ್ಕಾಗಿ ೨೫ ಕೋಟಿ ರು. ದೇಣಿಗೆ ನೀಡಿದ್ದಾರೆ ಎಂದು ಬಿಂಬಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಲಾಗಿದೆ. 

-ವೈರಲ್ ಚೆಕ್ 

click me!