
ಬೆಂಗಳೂರು, (ಆ.05): ಸಿಎಂ ಯಡಿಯೂರಪ್ಪ ಅವರ ಸಚಿವ ಸಂಪುಟ ವಿಸ್ತರಣೆಯಾಗಿಲ್ಲ ಏಕೆ? ಎನ್ನುವುದಕ್ಕೆ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರು ಕಾರಣ ತಿಳಿಸಿದ್ದಾರೆ.
ಇಂದು (ಸೋಮವಾರ) ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಅವರು ಜಮ್ಮುಮತ್ತು ಕಾಶ್ಮೀರಕ್ಕಿರುವ ಆರ್ಟಿಕಲ್ 370 ರದ್ದು ಮಾಡುವ ವಿಚಾರದಲ್ಲಿ ಬ್ಯುಸಿ ಆಗಿದ್ದರು. ಹೀಗಾಗಿ ಇಲ್ಲಿ ಸಂಪುಟ ವಿಸ್ತರಣೆ ತಡವಾಗಿದೆ ಎಂದು ಸ್ಪಷ್ಟಪಡಿಸಿದರು.
'ಬಿಎಸ್‌ವೈಗೆ ಸಿಎಂ ಆಗೋ ಅರ್ಜೆಂಟ್ ಇತ್ತು, ಸಂಪುಟ ವಿಸ್ತರಣೆಗೆ ಇಂಟ್ರೆಸ್ಟ್ ಇಲ್ಲ'
ಸಂಪುಟ ವಿಸ್ತರಣೆ ಆಗಲಿಲ್ಲ ಎಂದು ವಿರೋಧಿಗಳು ಕೂಗಾಡ್ತಾ ಇದ್ದಾರೆ. ಆದ್ರೆ ನಮಗೆ ಒಬ್ಬರನ್ನು ಮಂತ್ರಿ ಮಾಡಿ ಕೂರಿಸೋದಷ್ಟೆ ಮುಖ್ಯ ಅಲ್ಲ. ನಮಗೆ ದೇಶದ ಜವಬ್ದಾರಿ ಮುಖ್ಯ ಎಂದು ಹೇಳಿದರು.
ಯಡಿಯೂರಪ್ಪ ಅವರು ಮೊದಲೇ ಬೆಳಗ್ಗೆ 4 ಗಂಟೆ ಬಳಿಕ ನಿದ್ದೆ ಮಾಡ್ತಾ ಇರಲಿಲ್ಲ. ಈಗಂತೂ ಸಿಎಂ ಆಗಿದಾಗಿನಿಂದ ಅತೀ ಉತ್ಸಾಹದಿಂದ ಕೆಲಸ ಮಾಡ್ತಿದ್ದಾರೆ. ಭ್ರಷ್ಟಾಚಾರರಹಿತ, ಸ್ವಜನಪಕ್ಷಪಾತ ಇಲ್ಲದ ಸರ್ಕಾರ ನಾವ್ ಕೊಡುತ್ತೇವೆ. ಆ ವಿಶ್ವಾಸ ನಿಮಗೆ ಇರಲಿ ಎಂದರು.
ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇರುತ್ತೆ. ಈ ಹಿನ್ನೆಲೆಯಲ್ಲಿ ಆಯಾ ರಾಜ್ಯದಲ್ಲಿ ಏನೇ ಕೆಲಸ ಮಾಡಬೇಕೆಂದರೆ ಹೈಕಮಾಂಡ್ ಒಪ್ಪಿಗೆ ಅನಿವಾರ್ಯ ಆಗಿರುತ್ತದೆ. ಅದರಂತೆ ಈಗ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲು ತಮ್ಮ ಹೈಕಮಾಂಡ್ ಒಪ್ಪಿಗೆಗೆ ಕಾಯುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.