ದೇವೇಗೌಡ - ಕುಮಾರಸ್ವಾಮಿ ನಡುವೆಯೇ ದ್ವಂದ್ವ

By Web DeskFirst Published Aug 4, 2018, 7:35 AM IST
Highlights

ಜೆಡಿಎಸ್ ಮುಖಂಡ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ನಡುವೆಯೇ ದ್ವಂದ್ವ ಇದೆ ಎಂದು ಬಿಜೆಪಿ ಮುಖಂಡರು  ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು :  ಅಕ್ರಮ ಬಾಂಗ್ಲಾ ವಲಸಿಗರ ವಿಷಯಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ  ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ದ್ವಂದ್ವ ನಿಲುವು ತೋರುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ. 

‘ಒಂದು ವೇಳೆ ಬೂಟಾಟಿಕೆ ಎನ್ನುವುದು ವಾಸ್ತವ ರೂಪದಲ್ಲಿ ಅಸ್ತಿತ್ವದಲ್ಲಿದ್ದರೆ ಅದು ದೇವೇಗೌಡ ಮತ್ತು ಕುಮಾರಸ್ವಾಮಿ ಅದರ ಅವತಾರ’ ಎಂದೂ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ.

‘ಹಿಂದೆ 2015 ರಲ್ಲಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾ ವಾಸಿಗಳ ಬಗ್ಗೆ ಪ್ರಸ್ತಾಪಿಸಿದರು. ಅಲ್ಲದೆ, ಅವರನ್ನು  ಹೊರಹಾಕಬೇಕು ಎಂಬ ಆಗ್ರಹವನ್ನೂ ಅವರು ಮಾಡಿದ್ದರು. 

ಆದರೆ, ಈಗ ಅವರ ತಂದೆ ದೇವೇಗೌಡರು ಈಗ ಬಾಂಗ್ಲಾ ಅಕ್ರಮ ವಾಸಿಗಳನ್ನು ಉಳಿಸಿಕೊಳ್ಳುವ ಸಂಬಂಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ನೀಡುತ್ತಿದ್ದಾರೆ’ ಎಂದು ಟ್ವೀಟರ್‌ನಲ್ಲಿ ಕರ್ನಾಟಕ ಬಿಜೆಪಿ ಲೇವಡಿ ಮಾಡಿದೆ.

click me!