ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ ನೀಡಿದ ನಂತರ ವಿವಿಧ ಪಕ್ಷಗಳ ನಾಯಕರು ತಮ್ಮ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಕೊಡಗು[ಜೂ. 04] ಅಪ್ಪ ಮಕ್ಕಳ ಜೊತೆ ಯಾರು ಇರೋಕೆ ಆಗಲ್ಲ. ಜೆಡಿಎಸ್ ನಲ್ಲಿ ಉಸಿರುಕಟ್ಟುವ ವಾತವಾರಣವಿದೆ ಎಂದು ಬಿಜೆಪಿ ನಾಯಕ ಎ. ಮಂಜು ಹೇಳಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಪ್ರತಿಕ್ರಿಯೆ ನೀಡಿದ ಮಂಜು, ಅಧಿಕಾರ ಇರಬಹುದು ಅಥವಾ ಇನ್ನೊಂದು ಇರಬಹುದು ಕೇವಲ ಅವರ ಕುಟುಂಬಕ್ಕೆ ಸೀಮಿತ ಮಾಡಿಕೊಳ್ತಾರೆ. ಅರ್ಹತೆ ಇರುವವರಿಗೆ ಅಧಿಕಾರ ಕೊಡುವುದಿಲ್ಲ. ಅಧಿಕಾರವಿಲ್ಲದೇ ಅಧ್ಯಕ್ಷನಾಗಿಯೂ ಜವಾಬ್ದಾರಿ ನಿರ್ವಹಿಸಲು ಆಗದ ಹಿನ್ನೆಲೆಯಲ್ಲಿ ನೊಂದು ವಿಶ್ವನಾಥ್ ರಾಜೀನಾಮೆ ಕೊಟ್ಟಿದ್ದಾರೆ ಎಂದರು.
ರಾಜೀನಾಮೆ ಕೊಟ್ಟ ವಿಶ್ವನಾಥ್ ಹೇಳಿದ್ದೇನು?
ಕಾಂಗ್ರೆಸ್ ಪಕ್ಷದಲ್ಲಿ ‘ಜೀ ಹೂಜೂರ್’ ಗಳಿಗೆ ಮಾತ್ರ ಅವಕಾಶ ಸಿಗ್ತಿದೆ. ಕೆಲಸ ಮಾಡೋರಿಗೆ, ಹಿರಿಯರಿಗೆ ಗೌರವ ಸಿಗುತ್ತಿಲ್ಲ. ನಿಜವಾಗಿ ಪಕ್ಷ ಕಟ್ಟೋರಿಗೆ ಪಕ್ಷ ಬೆಳೆಸುವಂತವರಿಗೆ ಸ್ಥಾನಮಾನ ಕೊಡಲ್ಲ. ಮೈತ್ರಿ ಸರ್ಕಾರವನ್ನ ನಾವು ಕೆಡವಲು ಹೋಗುವುದಿಲ್ಲ ಎಂದು ಹೇಳಿದರು.
ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆದುಕೊಂಡಿದೆ.. ಕುಮಾರಸ್ವಾಮಿಯವರೇ ನೈತಿಕವಾಗಿ ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು ಎಂದು ಸಲಹೆ ನೀಡಿದರು.