ತೆಲಂಗಾಣ ರಾಜಕೀಯಕ್ಕೆ ಬಿಜೆಪಿ ಶಾಸಕ ಲಿಂಬಾವಳಿ ಎಂಟ್ರಿ

By Web DeskFirst Published Dec 27, 2018, 8:24 AM IST
Highlights

ದೇಶದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳಾಗುತ್ತಿವೆ. ಇದೇ ವೇಳೆ ಬಿಜೆಪಿ 17 ರಾಜ್ಯಗಳಲ್ಲಿ ಉಸ್ತುವಾರಿಗಳನ್ನು ನೇಮಿಸಿದ್ದು, ಅರವಿಂದ ಲಿಂಬಾವಳಿ ಅವರನ್ನು ತೆಲಂಗಾಣ ಉಸ್ತುವಾರಿಯಾಗಿ ನೇಮಿಸಿದೆ. 

ನವದೆಹಲಿ :  2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಈಗಿನಿಂದಲೇ ತಯಾರಿ ಆರಂಭಿಸಿದ್ದು, 17 ರಾಜ್ಯಗಳಿಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಆದರೆ ಕರ್ನಾಟಕದ ಪ್ರಭಾರಿಯನ್ನಾಗಿ ಈ ಪಟ್ಟಿಯಲ್ಲಿ ಯಾರನ್ನೂ ನೇಮಿಸಿಲ್ಲ. 

ವಿಶೇಷವೆಂದರೆ ತೆಲಂಗಾಣದ ಉಸ್ತುವಾರಿಯನ್ನಾಗಿ ಕರ್ನಾಟಕದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರನ್ನು ನೇಮಿಸಲಾಗಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕನ್ನಡಿಗರಾಗಿದ್ದಾರೆ. 

ಇನ್ನು ಕೇಂದ್ರ ಸಚಿವರಾದ ಪ್ರಕಾಶ ಜಾವಡೇಕರ್‌ ಅವರನ್ನು ರಾಜಸ್ಥಾನಕ್ಕೆ ಹಾಗೂ ಥಾವರ್‌ಚಂದ ಗೆಹ್ಲೋಟ್‌ ಅವರನ್ನು ಉತ್ತರಾಖಂಡಕ್ಕೆ ನೇಮಿಸಲಾಗಿದೆ. 

ಮಹತ್ವದ ಉತ್ತರಪ್ರದೇಶಕ್ಕೆ 3 ಉಸ್ತುವಾರಿಗಳ ನೇಮಕವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಜತೆ ಎಣ್ಣೆ-ಸೀಗೆಕಾಯಿ ಸಂಬಂಧ ಹೊಂದಿದ್ದ ಗೋವರ್ಧನ್‌ ಝಡಾಪಿಯಾ ಅವರೂ ಇದರಲ್ಲಿ ಇರುವುದು ಮತ್ತೊಂದು ವಿಶೇಷ.

click me!