ಪಕ್ಷ ಕಡೆಗಣಿಸಿದ್ದಕ್ಕೆ ಟವರ್ ಏರಿದ!

First Published May 1, 2018, 10:32 AM IST
Highlights

ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿದ್ದರೂ ಪಕ್ಷ ನನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿದ  ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ  ನಡೆದಿದೆ.

ಕೋಲಾರ (ಮೇ. 01): ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿದ್ದರೂ ಪಕ್ಷ ನನ್ನನ್ನು ಕಡೆಗಣಿಸಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿದ ಘಟನೆ  ಬಂಗಾರಪೇಟೆಯಲ್ಲಿ  ನಡೆದಿದೆ.
ಚಿನ್ನಕೋಟೆ ಗ್ರಾಪಂ ಸದಸ್ಯ ಮಂಜುನಾಥರೆಡ್ಡಿ ಎಂಬುವರೇ ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿದವರು. ಬೆಳಗ್ಗೆ ಬಂಗಾರಪೇಟೆಗೆ ಆಗಮಿಸಿರುವ ಅವರು ಏಕಾಏಕಿ ಟವರ್ ಏರಿ ಪಕ್ಷದ ಧ್ವಜ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮಂಜುನಾಥ್ ರೆಡ್ಡಿ ಅವರ ಮನವೊಲಿಸಿ ಟವರ್‌ನಿಂದ  ಕೆಳಗಿಳಿಸಿದ್ದಾರೆ. ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಪಟ್ಟಣ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

2008 ರಿಂದಲೂ ನಾನು ಪಕ್ಷದಲ್ಲಿ ದುಡಿಯುತ್ತಿದ್ದು, ಈ ಕಾರಣಕ್ಕಾಗಿಯೇ ನನ್ನನ್ನು ಬೆಮಲ್ ಕಾರ್ಖಾನೆಯಿಂದ ವಜಾ ಮಾಡಿದರು. ಅಲ್ಲದೆ, ಚಿನ್ನಕೋಟೆ ಗ್ರಾಪಂ ಚುನಾವಣೆಯಲ್ಲೂ ಪಕ್ಷ ಬೆಂಬಲಿಸದಿದ್ದರೂ ಸ್ವಂತ ಬಲದೊಂದಿಗೆ ಗೆದ್ದಿದ್ದೆ. ಈಗ ಚುನಾವಣಾ ಕಾರ್ಯಕ್ರಮಗಳಿಗೂ ಜಿಲ್ಲಾಧ್ಯಕ್ಷ ಹಾಗೂ ಬಿಜೆಪಿ ಅಭ್ಯರ್ಥಿ ವೆಂಕಟಮುನಿಯಪ್ಪ ಅವರು ನನ್ನನ್ನು ಆಹ್ವಾನಿಸದೆ ಕಡೆಗಣಿಸಿದ್ದಾರೆ. ಇದನ್ನೆಲ್ಲ ರಾಜ್ಯ ನಾಯಕರ ಗಮನಕ್ಕೆ ತರುವ ಉದ್ದೇಶದಿಂದ ಮೊಬೈಲ್ ಟವರ್ ಹತ್ತಿ ಪ್ರತಿಭಟನೆ ನಡೆಸಿದ್ದೇನೆ ಎಂದು ಮಂಜುನಾಥರೆಡ್ಡಿ ತಿಳಿಸಿದ್ದಾರೆ. 

click me!