ಬಿಕನೇರ್ ಭೂ ಹಗರಣ: ವಾದ್ರಾ ಆಪ್ತ ಸೆರೆ, ಕಾಂಗ್ರೆಸ್‌ಗೆ ಕಂಟಕ

Published : Dec 22, 2017, 02:52 PM ISTUpdated : Apr 11, 2018, 12:47 PM IST
ಬಿಕನೇರ್ ಭೂ ಹಗರಣ: ವಾದ್ರಾ ಆಪ್ತ ಸೆರೆ, ಕಾಂಗ್ರೆಸ್‌ಗೆ ಕಂಟಕ

ಸಾರಾಂಶ

ರಾಜಸ್ಥಾನದ ಬಿಕನೇರ್‌ನ ಗಡಿಯ ಕೊಲ್ಯಾಟ್ ಪ್ರದೇಶದಲ್ಲಿ ಸ್ಕೈಲೈಟ್‌ 275 ಎಕರೆ ಜಾಗವನ್ನು ಖರೀದಿಸಿದ್ದು, ಇದರಲ್ಲಿ ಅವ್ಯವಹಾರ ನಡೆದಿರುವ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು. 2015ರಲ್ಲಿ ಕಾಳಧನ ತಡೆ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು.

ಹೊಸದಿಲ್ಲಿ: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರಕ್ಕೆ ಕಪ್ಪು ಚುಕ್ತೆಯಾಗಿದ್ದ 2ಜಿ ಹಗರಣದ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿದರೆ, ಇತ್ತ ಮುಂಬಯಿನ ಆದರ್ಶ ಹೌಸಿಂಗ್ ಹಗರಣದ ಆರೋಪಿಯಾಗಿದ್ದ ಕಾಂಗ್ರೆಸ್ ಮುಖಂಡ ಅಶೋಕ್ ಚೌಹಾಣ್‌ಗೆ ಮುಂಬಯಿ ಹೈ ಕೋರ್ಟ್ ಕ್ಲೀನ್ ಚಿಟ್ ನೀಡಿದೆ. ಈ ಬೆಳವಣಿಗೆಗಳಿಂದ ನಿರಾಳವಾಗಿದ್ದ ಕಾಂಗ್ರೆಸ್‌ಗೆ ಆಘಾತ ಕಾದಿದ್ದು, ಬಿಕನೇರ್ ಕಾಳ ಧನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಾದ್ರಾ ಆಪ್ತರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು,, ಪಕ್ಷವನ್ನು ಗೊಂದಲಕ್ಕೆ ಸಿಕ್ಕಿಸಲಿದೆ.

ಸ್ಕೈಲೈಟ್ ಹಾಸ್ಟಿಟಾಲಿಟಿ ಪ್ರೈವೇಟ್ ಲಿಮಿಟ್‌ನೊಂದಿಗೆ ನಂಟು ಹೊಂದಿರುವ ಅಶೋಕ್ ಕುಮಾರ್ ಎಂಬ ಅಧಿಕಾರಿಯನ್ನು ಜಾರಿ ನಿರ್ದೇಶನಾಲಯ ಬಂಧಿಸಿದ್ದು, ಸ್ಕೈ ಲೈಟ್‌ನೊಂದಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾವ ರಾಬರ್ಟ್ ವಾದ್ರಾ ಅವರಿಗೆ ನಂಟಿದೆ.

ರಾಜಸ್ಥಾನದ ಬಿಕನೇರ್‌ನ ಗಡಿಯ ಕೊಲ್ಯಾಟ್ ಪ್ರದೇಶದಲ್ಲಿ ಸ್ಕೈಲೈಟ್‌ 275 ಎಕರೆ ಜಾಗವನ್ನು ಖರೀದಿಸಿದ್ದು, ಇದರಲ್ಲಿ ಅವ್ಯವಹಾರ ನಡೆದಿರುವ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು. 2015ರಲ್ಲಿ ಕಾಳಧನ ತಡೆ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು.

ಬಿಕನೇರ್‌ನ ಈ ಪ್ರದೇಶದಲ್ಲಿ ಸೈನ್ಯ ಫೈರಿಂಗ್ ರೇಂಜ್ ಸ್ಥಾಪಿಸಲು ಬಳಸಬೇಕಾಗಿದ್ದ 34 ಹಳ್ಳಿಗಳ ಜಾಗವನ್ನು ಕಂಪನಿ ದುರ್ಬಳಕೆ ಮಾಡಿಕೊಂಡಿದೆ,  ಎಂದು ಆರೋಪಿಸಿ ತಹಸೀಲ್ದಾರ್ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ನಡೆಸಿತ್ತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!