#BIGexclusive ಸುವರ್ಣನ್ಯೂಸ್ ಎದೆಗಾರಿಕೆ: ಬಯಲಾಯಿತು ಚಿನ್ನದಂಗಡಿಗಳ ಕರಾಳ ದಂಧೆ

Published : Nov 11, 2016, 03:39 AM ISTUpdated : Apr 11, 2018, 01:00 PM IST
#BIGexclusive ಸುವರ್ಣನ್ಯೂಸ್ ಎದೆಗಾರಿಕೆ: ಬಯಲಾಯಿತು ಚಿನ್ನದಂಗಡಿಗಳ ಕರಾಳ ದಂಧೆ

ಸಾರಾಂಶ

ಹೇಗಿದೆ ನೋಡಿ ಒಡವೆ ಅಂಗಡಿಯವರ ಚಾಲಾಕಿತನ. 500, 1000 ರೂ ನೋಟುಗಳನ್ನು ತರುವ ಗ್ರಾಹಕರಿಗೆ ಈ ಚಿನ್ನದಂಗಡಿಯವ್ರು ಬಾಯಿಗೆ ಬಂದಂತೆ ರೇಟ್​ ಹೇಳ್ತಾರೆ. ಇಲ್ಲಿ ಕೇಳಿ ಈ ಅಂಗಡಿಯಲ್ಲಿ 500 ಹಾಗೂ 1000 ಮುಖ ಬೆಲೆಯ ನೋಟುಗಳಿಗೆ ಒಮದು ಗ್ರಾಂ ಚಿನ್ನಕ್ಕೆ ಅನಾಮತ್ತು 5 ಸಾವಿರ ರೂಪಾಯಿ ಅಂತೆ..

ಬೆಂಗಳೂರು(ನ.11): ಪ್ರಧಾನಿ ಮೋದಿಯವರು 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನ ಚಲಾವಣೆಯನ್ನು ರದ್ದು ಮಾಡಿದ್ದಾರೆ. ಈ ಬೆನ್ನಲ್ಲೇ ಕಂತೆಗಟ್ಟಲೆ ಹಣ ಇಟ್ಟವರು ಸರ್ಕಾರಕ್ಕೆ ಲೆಕ್ಕ ತೋರಿಸದೇ ತಮ್ಮಲ್ಲಿರೋ ಕಪ್ಪು ಹಣವನ್ನ ವೈಟ್ ಮಾಡಲು ಮುಂದಾಗಿದ್ದಾರೆ. ವಿಪರ್ಯಾಸವೆಂದರೆ ಬೆಂಗಳೂರಿನ ಬಹುತೇಕ ಜ್ಯೂವೆಲರಿ ಶಾಪ್​ಗಳು ಈ ಕಾಳಧನಿಕರ ನೆರವಿಗೆ ಬಂದಿದ್ದಾರೆ. ಜುವೆಲ್ಲರಿ ಷಾಪ್​ಗಳಲ್ಲಿ ಕಪ್ಪು ಹಣವನ್ನ ಚಿನ್ನದ ಮೇಲೆ ಹೂಡುವಂತೆ ಮಾಡುತ್ತಿರುವ ಈ ಕರಾಳ ದಂಧೆಯನ್ನ ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದಿದೆ..

ಇದು ಬ್ಲಾಕ್ ಮನಿ ವೈಟ್ ಮನಿ ಮಾಡುವ ದಂಧೆ:ಕಾಳಧನಿಕರು ಕಂಡ್ಕೊಂಡಿದ್ದಾರೆ ಹೊಸ ದಾರಿ:
ಕೇಂದ್ರ ಸರ್ಕಾರ ಮೊನ್ನೆಯಿಂದ 500, 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದೆ. ಬ್ಯಾಂಕು, ಪೋಸ್ಟ್​ ಆಫೀಸ್​ಗಳಲ್ಲಿ ಈ ಹಳೆಯ ನೋಟುಗಳ ವಿನಿಮಯ ಶುರುವಾಗಿದೆ. ಪ್ರಾಮಾಣಿಕವಾಗಿ ಸಂಪಾದಿಸಿದವರು ರಾಜಾರೋಷವಾಗಿ ತಮ್ಮಲ್ಲಿರುವ ಹಳೇ ನೊಟುಗಳ ವಿನಿಮಯಕ್ಕೆ ತೊಡಗಿದ್ದಾರೆ. ಆದ್ರೆ ಕಾಳಧನಿಕರು ಮಾತ್ರ ಕಳ್ಳ ಮಾರ್ಗ ಹುಡುಕ್ತಿದ್ದಾರೆ. 

ಇಂಥ ಕಾಳಧನಿಕರು ತಮ್ಮ ಕಪ್ಪುಹಣವನ್ನು ಚಿನ್ನದ ಮೇಲೆ ಹೂಡಲು ಮುಂದಾಗಿದ್ದಾರೆ. ಬೆಂಗಳೂರಿನ ಹಲವು ಒಡವೆ ಅಂಗಡಿಗಳು ಕಪ್ಪುಹಣದ ಮಾಲೀಕರಿಂದ ಹಳೆಯ 500, 1000ದ ಲಕ್ಷ ಲಕ್ಷ ನೋಟುಗಳನ್ನು ಪಡೆದು ಹೆಚ್ಚು ದರಕ್ಕೆ ಚಿನ್ನ ಮಾರಾಟ ಮಾಡ್ತಿವೆ. ಪ್ರತೀ ಒಂದು ಗ್ರಾಂ ಚಿನ್ನದ ಸಾಮಾನ್ಯ ದರದ ಮೇಲೆ ಒಂದೂಕಾಲು ಸಾವಿರದಿಂದ ಒಂದೂವರೆ ಸಾವಿರ ರೂ. ಹೆಚ್ಚುವರಿ ಹಣವನ್ನು ಒಡವೆ ಅಂಗಡಿ ಮಾಲೀಕರು ಕಾಳಧನಿಕರಿಂದ ಡಿಮ್ಯಾಂಡ್​ ಮಾಡ್ತಿದ್ದಾರೆ.

ಒಡವೆ ಅಂಗಡಿಗಳ ಮಾಲೀಕರು ಹಾಗೂ ಕಾಳಧನಿಕರ ಈ ಕರಾಳ ದಂಧೆಯನ್ನು ಬಿಚ್ಚಿಟ್ಟಿದೆ ಸುವರ್ಣನ್ಯೂಸ್. ಒಬ್ಬ ಗ್ರಾಹಕಕನ ಜೊತೆ ನಮ್ಮ ತಂಡ ರಾಜಾಜಿನಗರದಲ್ಲಿರುವ ರಾಜಾಜಿನಗರದ ಗಣೇಶ ಒಡವೆ ಅಂಗಡಿಗೆ ಚಿನ್ನ ಕೊಳ್ಳಲು ತೆರಳ್ತು. ಅಲ್ಲಿ ಬಯಲಾಯ್ತು ಈ ಕಳ್ಳ ದಂಧೆ. 

ನಾವು ಈ ಚಿನ್ನದ ಮಳಿಗೆಗೆ ಕಾಲಿಟ್ಟ ಕೂಡಲೇ ನಮ್ಮನ್ನು ಮೊದಲು ಸ್ವಾಗತ ಮಾಡಿ ವ್ಯವಹಾರ ಶುರು ಮಾಡಿದ್ದು ಇಬ್ಬರು ಸೇಲ್ಸ್​ ಗರ್ಲ್ಸ್. ಬೆಂಗಳೂರಿನ ಜ್ಯೂವೆಲರಿ ಶಾಪ್​ಗಳಿಗೆ ಎಂಟ್ರಿಯಾದ್ರೆ ಸಾಕು ಕ್ಯಾಶಾ , ಕಾರ್ಡ್​, ಚೆಕ್ಕಾ ಅಂತ ಆಯ್ಕೆ ಕೊಡ್ತಾರೆ.. ನಿಮ್ಮಗೇನಾದ್ರೂ ಅನಿವಾರ್ಯವಿದ್ದು ಮದ್ವೆ ಅಂತ ಹೇಳಿದ್ರೆ ಮುಗಿತು.. ಚಿನ್ನದ ದರ ಆನ್​ಲೈನ್ ​ಬೆಲೆಗಿಂತ ದುಪ್ಪಟ್ಟಾಗಿ ಕೇಳ್ತಾರೆ..

ನಮ್ಮ ಸರ್ ಹತ್ರ ಮಾತಾಡಿ ಅಂದ ಮೇಲೆ ನಾವು ಆ ಸೇಲ್ಸ್​ಗರ್ಲ್ ಹೇಳಿದ ಸರ್ ಹತ್ರಾನೇ ಮಾತಾಡಿದ್ವಿ. ಆದ್ರೆ ಅವರ ಮಾತುಗಳು ನಮ್ಮನ್ನ ಇನ್ನೂ ಭಯ ಬೀಳಿಸಿತು. ಆ ಸರ್ ಈ ಅಂಗಡಿ ಮಾಲೀಕರಂತೆ. ಈಗ 500, 1000 ನೋಟುಗಳು ಬೆಲೆ ಕಳ್ಕೊಂಡಿವೆಯಲ್ಲ., ಇದನ್ನೇ ಬಂಡವಾಳ ಮಾಡ್ಕೊಂಡಿರೋ ಚಿನ್ನದಂಗಡಿಗಳು 1000 ರೂಪಾಯಿಯ ಮೌಲ್ಯವನ್ನು 500 ರೂಗೆ ಇಳಿಸಿಬಿಟ್ಟಿದ್ದಾರೆ. ಅಂದ್ರೆ ಒಂದು ಸಾವಿರದ ಒಂದು ನೋಟು 500 ರೂಗೆ ಸಮ. ಇದೇ ಬೆಲೆಯಲ್ಲಿ ಇಲ್ಲಿ ಕಾಳಧನಿಕರಿಗೆ ಚಿನ್ನ ಮಾರಾಟ ಮಾಡಲು ಮುಂದಾಗಿದ್ದಾರೆ ಚಿನ್ನದಂಗಡಿ ಮಾಲೀಕರು.

ಅಬ್ಬಾ...,ಕೇಳಿದ್ರಲ್ಲ ಇವರ ಮಾತನ್ನು. ಕಾಳಧನ ತಡೆಗೆ ಕೇಂದ್ರ ಸರ್ಕಾರ ಹೊಸ ನೀತಿ ಜಾರಿ ಮಾಡಿದ್ರೆ ಈ ಚಿನ್ನದಂಗಡಿ ಮಾಲೀಕರು ಮತ್ತೊಂದು ರೀತಿಯಲ್ಲಿ ಸುಲಿಗೆ ಮಾಡಿ ಅದೇ ಕಪ್ಪುಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಗ್ರಾಹಕರ ಹತ್ರ ಈಗ ಹಣ ಇಲ್ಲಾಂದ್ರೂ ಪರವಾಗಿಲ್ಲ ಮುಂದಿನ ಡೇಟಿಗೆ ಚೆಕ್ ಬರೆದುಕೊಡಿ, ಅಲ್ಲೀವರೆಗೂ ಒಡವೆ ಇಲ್ಲೇ ಇರುತ್ತೆ ಅಂತಾರೆ ಚಿನ್ನದಂಗಡಿ ಮಾಲೀಕರು. ಆದ್ರೆ ಬೆಲೆ ಮಾತ್ರ ಅದೇ ಗ್ರಾಂಗೆ 4,250 ರೂಪಾಯಿ..

ಹೇಗಿದೆ ನೋಡಿ ಒಡವೆ ಅಂಗಡಿಯವರ ಚಾಲಾಕಿತನ. 500, 1000 ರೂ ನೋಟುಗಳನ್ನು ತರುವ ಗ್ರಾಹಕರಿಗೆ ಈ ಚಿನ್ನದಂಗಡಿಯವ್ರು ಬಾಯಿಗೆ ಬಂದಂತೆ ರೇಟ್​ ಹೇಳ್ತಾರೆ. ಇಲ್ಲಿ ಕೇಳಿ ಈ ಅಂಗಡಿಯಲ್ಲಿ 500 ಹಾಗೂ 1000 ಮುಖ ಬೆಲೆಯ ನೋಟುಗಳಿಗೆ ಒಮದು ಗ್ರಾಂ ಚಿನ್ನಕ್ಕೆ ಅನಾಮತ್ತು 5 ಸಾವಿರ ರೂಪಾಯಿ ಅಂತೆ..

ಗ್ರಾಹಕರನ್ನು ಎಷ್ಟೆಲ್ಲ ನಂಬಿಸಬೇಕೋ ಅಷ್ಟೂ ನಂಬಿಸೋಕ್ಕೆ ಪ್ರಯತ್ನಿಸ್ತಾರೆ ಈ ಚಿನ್ನದಂಗಡಿಯವ್ರು. ಈಗಿರೋ ಪರಿಸ್ಥಿತಿಗೆ ಮಾರ್ಕೆಟ್​ನಲ್ಲಿ ಪ್ರತೀ ಗ್ರಾಂ ಚಿನ್ನಕ್ಕೆ ಇವ್ರು ಹೇಳ್ತಿರುವ 4,250 ರೂ ದರ ಬದಲು 4,500 ರೂ ದರ ಇದೆಯಂತೆ. ಈಗ ನಿಮ್ ಹತ್ರ ಇರೋ 500, 1000 ನೊಟುಗಳಿಗೆ ಬೆಲೆ ಇಲ್ಲ ಸ್ವಾಮಿ ಅಂದು ಗ್ರಾಹಕರ ತಲೆಗೆ ಹುಳ ಬಿಡ್ತಾರೆ ಈ ಮಂದಿ..

500 ಹಾಗೂ 1000 ರೂ ನ ಕಮೀಷನ್​ ದಂಧೆ ಹೇಗೆ ನಡೆಯುತ್ತೆ ಅಂತ. ಒಡವೆ ಅಂಗಡಿಯವರ ಈ ಅಕ್ರಮವನ್ನ ಸುವರ್ಣನ್ಯೂಸ್ ಬಯಲಿಗೆ ಎಳೆದಿದೆ. ನಗರದ ಬಹುತೇಕ ಜ್ಯೂವೆಲರಿ ಮಳಿಗೆಗಳು ವಸೂಲಿ ದಂಧೆಗೆ ಧುಮುಕಿವೆ ಎನ್ನಲಾಗ್ತಿದೆ. ಆದ್ರೆ ಇದರ ಬಗ್ಗೆ ಚಿನ್ನ ಕೊಂಡ್ಕೊಳ್ಳೋರೂ ಹೇಳಲ್ಲ,,,ಚಿನ್ನ ಂಆರೊರೂ ಬಾಯಿ ಬಿಡಲ್ಲ. ..ಎಲ್ಲವೂ ಗಪ್​ಚುಪ್ ವ್ಯವಹಾರ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು
ನಾಯಕತ್ವ ಬದಲಾವಣೆ ಹೇಳಿಕೆ ಒಂದು ತಿಂಗಳ ಮೌನವ್ರತ : ಪಿ.ರವಿಕುಮಾರ್