
ಲಂಡನ್ [ಆ.01]: ಭಾರತದ ಐಟಿ ಸಿಟಿ, ಸ್ಟಾರ್ಟಪ್ ರಾಜಧಾನಿ ಎಂಬೆಲ್ಲಾ ಹಿರಿಮೆಗಳನ್ನು ಹೊಂದಿರುವ ಕರುನಾಡಿನ ರಾಜಧಾನಿ ಬೆಂಗಳೂರಿನ ಮುಕುಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬಯಸುವ ಭಾರತದ ಅಚ್ಚುಮೆಚ್ಚಿನ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂ.1 ಸ್ಥಾನ ಪಡೆದಿದೆ.
ಜಾಗತಿಕ ಶೈಕ್ಷಣಿಕ ಸಲಹಾ ಸಂಸ್ಥೆ ಕ್ಯೂಎಸ್ ಕ್ವಾಕ್ಯುರೆಲಿ ಸೈಮಂಡ್ಸ್ ಸಂಸ್ಥೆ ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಇಷ್ಟಪಡುವ ವಿಶ್ವದ ಅತ್ಯುತ್ತಮ 120 ನಗರಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ಸತತ ಎರಡನೇ ವರ್ಷವೂ ಲಂಡನ್ ಪ್ರಥಮ ಸ್ಥಾನದಲ್ಲಿದ್ದರೆ, ಬೆಂಗಳೂರು 81ನೇ ಸ್ಥಾನ ಗಳಿಸಿದೆ. ಇನ್ಯಾವ ಭಾರತದ ನಗರವೂ ಬೆಂಗಳೂರಿಗಿಂತ ಮೇಲಿಲ್ಲ ಎಂಬುದು ಗಮನಾರ್ಹ.
ಭಾರತದಲ್ಲಿ ವಿದ್ಯಾರ್ಥಿಗಳ ನಂ.1 ಅಚ್ಚುಮೆಚ್ಚಿನ ನಗರ ಬೆಂಗಳೂರು ಆಗಿದ್ದರೆ, ಮುಂಬೈ 2ನೇ (ವಿಶ್ವಮಟ್ಟದಲ್ಲಿ 85) ಸ್ಥಾನದಲ್ಲಿದೆ. ದೆಹಲಿ (113) ಹಾಗೂ ಚೆನ್ನೈ (115) ಕ್ರಮವಾಗಿ 3 ಮತ್ತು ನಾಲ್ಕನೇ ಸ್ಥಾನದಲ್ಲಿವೆ.
ಜಾಗತಿಕ ಮಟ್ಟದಲ್ಲಿ ಲಂಡನ್ ನಂತರ 2ನೇ ಸ್ಥಾನದಲ್ಲಿ ಟೋಕಿಯೋ, 3ನೇ ಸ್ಥಾನದಲ್ಲಿ ಮೆಲ್ಬರ್ನ್ ಸ್ಥಾನ ಪಡೆದುಕೊಂಡಿವೆ. ತದನಂತರ ಸ್ಥಾನದಲ್ಲಿ ಮ್ಯೂನಿಕ್, ಬರ್ಲಿನ್, ಮಾಂಟ್ರಿಯಲ್, ಪ್ಯಾರಿಸ್, ಸಿಡ್ನಿ, ಸೋಲ್ ಸ್ಥಾನ ಪಡೆದುಕೊಂಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.