ಬೆಂಗಳೂರಿನ ಟೆಕ್ಕಿ ಮದುವೆಯಲ್ಲಿ ಬಿಟ್ ಕಾಯಿನ್ ಗಿಫ್ಟ್

Published : Dec 25, 2017, 01:45 PM ISTUpdated : Apr 11, 2018, 12:38 PM IST
ಬೆಂಗಳೂರಿನ ಟೆಕ್ಕಿ ಮದುವೆಯಲ್ಲಿ ಬಿಟ್ ಕಾಯಿನ್ ಗಿಫ್ಟ್

ಸಾರಾಂಶ

ಬಿಟ್‌ಕಾಯಿನ್‌ನಂತಹ ಡಿಜಿಟಲ್ ಕರೆನ್ಸಿ ಬಗ್ಗೆ ವಿಶ್ವಾದ್ಯಂತ ಕೇಂದ್ರೀಯ ಬ್ಯಾಂಕುಗಳು ಆತಂಕ ವ್ಯಕ್ತಪಡಿಸುತ್ತಿರುವಾಗಲೇ, ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಬೆಂಗಳೂರಿನಲ್ಲಿ ನವಜೋಡಿಯೊಂದು ಬಿಟ್ ಕಾಯಿನ್ ಮೂಲಕವೇ ವಿವಾಹದ ಉಡುಗೊರೆ ಸ್ವೀಕರಿಸುವ ಮೂಲಕ ಸುದ್ದಿ ಮಾಡಿದೆ.

ಬೆಂಗಳೂರು (ಡಿ.25): ಬಿಟ್‌ಕಾಯಿನ್‌ನಂತಹ ಡಿಜಿಟಲ್ ಕರೆನ್ಸಿ ಬಗ್ಗೆ ವಿಶ್ವಾದ್ಯಂತ ಕೇಂದ್ರೀಯ ಬ್ಯಾಂಕುಗಳು ಆತಂಕ ವ್ಯಕ್ತಪಡಿಸುತ್ತಿರುವಾಗಲೇ, ದೇಶದ ಐಟಿ ರಾಜಧಾನಿ ಎಂದೇ ಬಿರುದಾಂಕಿತವಾಗಿರುವ ಬೆಂಗಳೂರಿನಲ್ಲಿ ನವಜೋಡಿಯೊಂದು ಬಿಟ್ ಕಾಯಿನ್ ಮೂಲಕವೇ ವಿವಾಹದ ಉಡುಗೊರೆ ಸ್ವೀಕರಿಸುವ ಮೂಲಕ ಸುದ್ದಿ ಮಾಡಿದೆ.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯಮಿಗಳಾಗಿರುವ ಪ್ರಶಾಂತ್ ಹಾಗೂ ನೀತಿ ಅವರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ 200 ಅತಿಥಿಗಳ ಪೈಕಿ ಶೇ.95ರಷ್ಟು ಮಂದಿ ಬಿಟ್‌ಕಾಯಿನ್ ಮೂಲಕವೇ ‘ಮುಯ್ಯಿ’ ಹಾಕಿದ್ದಾರೆ. ಉಳಿದ ಶೇ.5ರಷ್ಟು ಅಂದರೆ ೧೦ ಮಂದಿ ಮಾತ್ರವೇ ಸಾಂಪ್ರದಾಯಿಕ ರೀತಿ ಯಲ್ಲಿ ಉಡುಗೊರೆ ಕೊಟ್ಟಿದ್ದಾರೆ. ತನ್ಮೂಲಕ ಬಿಟ್ ಕಾಯಿನ್ ಗಿಫ್ಟ್ ಪಡೆದು ಮದುವೆ ಮಾಡಿಕೊಂಡ ದೇಶದ ಮೊದಲ ಜೋಡಿ ಇದಾಗಿದೆ. ನೀತಿ ಹಾಗೂ ಪ್ರಶಾಂತ್ ಅವರು

ಈಗಾಗಲೇ ಬಿಟ್‌ಕಾಯಿನ್‌ನಲ್ಲಿ ಹಣ ಹೂಡಿದ್ದಾರೆ. ತಮ್ಮ ವಿವಾಹ ಸಮಾರಂಭಕ್ಕೆ ಬರುವವರಿಗೆ ಈ ಕರೆನ್ಸಿಯ ಪರಿಚಯ ಮಾಡಿಸಿ, ಅದನ್ನೂ ಒಂದು ಉಡುಗೊರೆ ಆಯ್ಕೆಯಾಗಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಿದ್ದಾರೆ. ‘ಮದುವೆಯಲ್ಲಿ ಭಾಗವಹಿಸುತ್ತಿದ್ದ ಬಹುತೇಕ ಸ್ನೇಹಿತರು ತಂತ್ರಜ್ಞಾನ ವಲಯ, ಸ್ಟಾರ್ಟಪ್, ಹೂಡಿಕೆದಾರರಾಗಿದ್ದರು.

ಹೀಗಾಗಿ ಬಿಟ್‌ಕಾಯಿನ್ ಬಗ್ಗೆ ಜಾಗೃತಿ ಮೂಡಿಸಲು ನಿರ್ಧರಿಸಿದೆವು. ಇದಕ್ಕಾಗಿ ಝೆಬ್‌ಪೇ ಎಂಬ ಡಿಜಿಟಲ್ ಕರೆನ್ಸಿ ವಿನಿಮಯ ವೇದಿಕೆ ಜತೆ ಪಾಲುದಾರಿಕೆ ಮಾಡಿಕೊಂಡೆವು’ ಎಂದು ಪ್ರಶಾಂತ್ ತಿಳಿಸಿದ್ದಾರೆ. ಮದುವೆಗೆ ಮಾಡಿಸಲಾಗಿದ್ದ ಆಹ್ವಾನ ಪತ್ರಿಕೆಯೂ ವಿಭಿನ್ನವಾಗಿತ್ತು. ಅದರಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿತ್ತು. ಡಿಜಿಟಲ್ ಕರೆನ್ಸಿ ಬಗ್ಗೆ ಗೊತ್ತಿಲ್ಲದವರಿಗೆ ಅದನ್ನು ಖರೀದಿಸುವುದು ಹೇಗೆಂಬುದರ ವಿವರ ನೀಡಲಾಗಿತ್ತು. ಇದಲ್ಲದೆ ವಿವಾಹದಲ್ಲಿ ಅತಿಥಿಗಳಿಗೆಂದು ಇರಿಸಲಾಗಿದ್ದ ಪ್ರತಿ ಯೊಂದು ಪಾನೀಯಕ್ಕೂ ಜಗತ್ತಿನ ವಿವಿಧ ಡಿಜಿಟಲ್ ಕರೆನ್ಸಿಗಳ ಹೆಸರು ಇಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಡ್ನಿ ಶೂಟಿಂಗ್ ದಾಳಿಗೆ ಪಾಕಿಸ್ತಾನ ಸಂಪರ್ಕ: ಆರೋಪಿ ಲಾಹೋರ್ ಮೂಲದ ನವೀದ್ ಅಕ್ರಮ್; ಫೋಟೋ ವೈರಲ್!
ತುರುವೇಕೆರೆ: ದೇವರ ಮೇಲೆ ಹಾಕಿದ್ದ 500 ಗ್ರಾಂ ಸರ, 10 ಸಾವಿರ ರೂ. ನಗದು ಕದ್ದ ಕಳ್ಳರು!