ಉದ್ಯೋಗ ಹುಡುಕುತ್ತಿರುವವರೇ ಎಚ್ಚರ!

Published : Dec 04, 2018, 01:17 PM ISTUpdated : Dec 04, 2018, 01:18 PM IST
ಉದ್ಯೋಗ ಹುಡುಕುತ್ತಿರುವವರೇ ಎಚ್ಚರ!

ಸಾರಾಂಶ

ಸಿಲಿಕಾನ್ ಸಿಟಿಯಲ್ಲಿ ವಾಸ ಮಾಡುತ್ತಿರುವ ಯುವಕ ಯುವತಿಯರೇ ಈ ಬಗ್ಗೆ ನೀವು ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯ. ಬೆಂಗಳೂರಿನಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಜಾಬ್ ಕನ್ಸಲ್ಟೆನ್ಸಿಗಳು ಮೋಸದ ಜಾಲಗಳಾಗುತ್ತಿದ್ದು, ನಂಬುವ ಮೊದಲು ಒಮ್ಮೆ ಯೋಚಿಸಿ ಮುಂದುವರಿಯುವುದು ಒಳಿತು. 

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಾಯಿಕೊಡೆಗಳಂತೆ ಜಾಬ್ ಕನ್ಸಲ್ಟೆನ್ಸಿ ಕಚೇರಿಗಳು ತಲೆ ಎತ್ತಿದ್ದು, ನಿರೋದ್ಯೋಗಿಗಳಿಗೆ ವಂಚಿಸುವ ಜಾಲಗಳಾಗುತ್ತಿವೆ. 

ಸಾವಿರಾರು ರು.ನಷ್ಟು ಹಣವನ್ನು ಕಟ್ಟಿಸಿಕೊಂಡು ಯುವಕ ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ಮೋಸ ಮಾಡುತ್ತಿವೆ. 

ಇದೀಗ ಮಲ್ಲೇಶ್ವರಂನಲ್ಲಿರುವ  ಜಾಬ್ ಕನ್ಸಲ್ಟೆನ್ಸಿ ಕೆರಿಯರ್ ಗ್ರೋಥ್ ಟೆಕ್ನಾಲಜಿ ಏಜೆನ್ಸಿಯಿಂದ ಭಾರೀ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ.  ಯುವಕ ಯುವತಿಯರಿಗೆ ಕೆಲಸ ಕೊಡಿಸುವ ಆಮಿಷ ಒಡ್ಡಿ  ಸಾವಿರಾರು ರು. ಕಟ್ಟಿಸಿಕೊಂಡು ವಂಚಿಸಿದ ಘಟನೆ ನಡೆದಿದೆ.

ಕನ್ಸಲ್ಟೆನ್ಸಿಯಲ್ಲಿ ಹಣ ಕಟ್ಟಿದ್ದರೂ ಕೂಡ ಕೆಲಸ ಸಿಗದೇ ಯುವಕ ಯುವತಿಯರು ಪರದಾಡುತ್ತಿದ್ದು,  ಈ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ದೂರು ನೀಡಿದರೂ ಕೂಡ ಪೊಲೀಸರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. 

ಇದೀಗ ಅತ್ತ ಕೆಲಸವೂ ಇಲ್ಲ ಇತ್ತ ಹಣವೂ ಇಲ್ಲದಂತಾಗಿ, ಇವರೆಲ್ಲ ಸಂಕಷ್ಟಕ್ಕೆ ಸಿಲುಕಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಣವೀರ್ ನಟನೆಯ ಧುರಂಧರ್ ಸಿನಿಮಾದ ಕತೆ ಭಾರತೀಯ ಸೇನೆಯ ಹೀರೋ ಮೇಜರ್ ಮೋಹಿತ್ ಶರ್ಮಾ ಅವರದ್ದಾ?
ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?