ಬಸವನಿಗೆ ಡಿಕ್ಕಿ ಹೊಡೆದ ರೈಲು: ಪ್ರಪಾತದಿಂದ ಮೇಲೆತ್ತಿ ಮಾನವೀಯತೆ ಮೆರೆದ ಸ್ಥಳೀಯರು!

Published : Nov 28, 2016, 10:49 PM ISTUpdated : Apr 11, 2018, 12:59 PM IST
ಬಸವನಿಗೆ  ಡಿಕ್ಕಿ ಹೊಡೆದ ರೈಲು: ಪ್ರಪಾತದಿಂದ ಮೇಲೆತ್ತಿ ಮಾನವೀಯತೆ ಮೆರೆದ ಸ್ಥಳೀಯರು!

ಸಾರಾಂಶ

ಆಯಸ್ಸು ಗಟ್ಟಿ ಇದ್ದರೆ  ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಉಡುಪಿಯಲ್ಲಿ ನಡೆದ ಕಾರ್ಯಾಚರಣೆಯೇ ಸಾಕ್ಷಿ. ಸ್ಥಳೀಯರು ಸಮಯ ಪ್ರಜ್ಞೆಯಿಂದಾಗಿ ನಾಲ್ಕು ದಿನಗಳ ಹಿಂದೆ ರೈಲಿಗೆ ಸಿಕ್ಕಿ 50 ಅಡಿ ಆಳಕ್ಕೆ ಬಿದ್ದಿದ್ದ ಬಸವನನ್ನು ರಕ್ಷಿಸಿದ್ದಾರೆ. ಐವತ್ತು ಅಡಿ ಆಳಕ್ಕೆ ಬಿದ್ದು ಒದ್ದಾಡುತ್ತಿದ್ದ ಬಸವನನ್ನು ರಕ್ಷಿಸಲು ಗ್ರಾಮಸ್ಥರು ಹೇಗೆ ನಾ ಮುಂದು ತಾಮುಂದು ಅಂತ ಮುಂದೆ ಒದ್ದಾಡುತ್ತಿದ್ದರು. ಒಬ್ಬರು ಮಣ್ಣು ತೆಗೆದು ದಾರಿ ಮಾಡಿದರೆ, ಮತ್ತೊಬ್ಬರು ಹಗ್ಗ ಹಾಕಲು ಪ್ರಪಾತಕ್ಕೆ ಇಳಿಯುತ್ತಿದ್ದರು . ಇಷ್ಟೆಲ್ಲಾ ನಡೆದಿದ್ದು ಉಡುಪಿ ನಗರದ ಹೊರ ವಲಯದಲ್ಲಿರುವ ಕುಕ್ಕಿಕಟ್ಟೆಯಲ್ಲಿ.

ಉಡುಪಿ(ನ.29): ಆಯಸ್ಸು ಗಟ್ಟಿ ಇದ್ದರೆ  ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಉಡುಪಿಯಲ್ಲಿ ನಡೆದ ಕಾರ್ಯಾಚರಣೆಯೇ ಸಾಕ್ಷಿ. ಸ್ಥಳೀಯರು ಸಮಯ ಪ್ರಜ್ಞೆಯಿಂದಾಗಿ ನಾಲ್ಕು ದಿನಗಳ ಹಿಂದೆ ರೈಲಿಗೆ ಸಿಕ್ಕಿ 50 ಅಡಿ ಆಳಕ್ಕೆ ಬಿದ್ದಿದ್ದ ಬಸವನನ್ನು ರಕ್ಷಿಸಿದ್ದಾರೆ.

ಐವತ್ತು ಅಡಿ ಆಳಕ್ಕೆ ಬಿದ್ದು ಒದ್ದಾಡುತ್ತಿದ್ದ ಬಸವನನ್ನು ರಕ್ಷಿಸಲು ಗ್ರಾಮಸ್ಥರು ಹೇಗೆ ನಾ ಮುಂದು ತಾಮುಂದು ಅಂತ ಮುಂದೆ ಒದ್ದಾಡುತ್ತಿದ್ದರು. ಒಬ್ಬರು ಮಣ್ಣು ತೆಗೆದು ದಾರಿ ಮಾಡಿದರೆ, ಮತ್ತೊಬ್ಬರು ಹಗ್ಗ ಹಾಕಲು ಪ್ರಪಾತಕ್ಕೆ ಇಳಿಯುತ್ತಿದ್ದರು . ಇಷ್ಟೆಲ್ಲಾ ನಡೆದಿದ್ದು ಉಡುಪಿ ನಗರದ ಹೊರ ವಲಯದಲ್ಲಿರುವ ಕುಕ್ಕಿಕಟ್ಟೆಯಲ್ಲಿ.

ನಾಲ್ಕು ದಿನಗಳ ಹಿಂದೆ ರೈಲ್ವೇ ಹಳಿಯ ಬದಿಯಲ್ಲಿ  ಬಸವನಿಗೆ ಬಲವಾದ ಏಟು ಬಿದ್ದು, ರೈಲು ಹೊಡೆದ ರಭಸಕ್ಕೆ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿದೆ. ನಾಲ್ಕು ದಿನ ಈ ಬಸವನ ನರಳಾಟ ಕಂಡವರು ಹಪಹಪಿಸಿದರೇ ಹೊರತು, ಯಾರೂ ಸಹಾಯಕ್ಕೆ ಬರಲಿಲ್ಲ. ಕೊನೆಗೂ ಸಮಾಜ ಸೇವಕ ವಿಶು ಶೆಟ್ಟಿ ಕಾರ್ಯಾಚರಣೆಗಿಳಿದರು, ಕ್ರೈನ್ ತಂದು ಐವತ್ತು ಅಡಿ ಆಳಕ್ಕೆ ಬಿದ್ದ ಬಸವನನ್ನು ಎತ್ತಿಯೇ ಬಿಟ್ರು.   

ಪ್ರಪಾತದಿಂದ ಬಸವನನ್ನು ಮೇಲೆತ್ತುವುದು ಸುಲಭದ ಮಾತಾಗಿರಲಿಲ್ಲ. ಮರ ಗಿಡ ಕಡಿದು ದಾರಿ ಮಾಡಲು ಅರ್ಧ ದಿನ ಬೇಕಾಯಿತು. ಬಳಿಕ ಹಗ್ಗ ಜೋಡಿಸಿ ಇಳಿಯಲು ವ್ಯವಸ್ಥೆ ಮಾಡಲಾಯಿತು. ಪಶುವೈದ್ಯರು ಕೂಡಾ ಹಗ್ಗ ಹಿಡಿದೇ ಕೆಳಗಿಳಿದು ಅರವಳಿಕೆ ಕೊಟ್ಟರು. ಇದರಿಂದ ಕಾರ್ಯಾಚರಣೆಗೆ ಅನುಕೂಲವಾಯ್ತು. ಒಂದಿಡೀ ದಿನ ಸಾಹಸಪಟ್ಟು ಕೊನೆಗೂ ಬಸವ

ನೀಲಾವರದ ಗೋಶಾಲೆಗೆ ಬಸವನನ್ನು ಸಾಗಿಸಲಾಗಿದೆ. ಸಮಾಜ ಸೇವಕ ವಿಶು ಶೆಟ್ಟಿ ಮತ್ತು ಇತರರ ಈ ಮನಮಿಡಿಯುವ ಸಾಹಸಕ್ಕೆ ಅಭಿನಂದನೆ ಹೇಳಲೇಬೇಕು ಅಲ್ವಾ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇರಳ ವರ್ಸಸ್‌ ಕರ್ನಾಟಕ : ಬುಲ್ಡೋಜರ್‌ ನ್ಯಾಯ ಎಂದ ಪಿಣರಾಯಿಗೆ ತರಾಟೆ
ಚೀನಾದಲ್ಲಿ 700 ಕಿ.ಮೀ ವೇಗದ ರೈಲಿನ ಪ್ರಾಯೋಗಿಕ ಪರೀಕ್ಷೆ ಯಶಸ್ವಿ