
ಮಂಗಳೂರು(ಜು.09): ಕೋಮು ಗಲಭೆಯಿಂದ ಕಳೆದ ಎರಡು ತಿಂಗಳಿನಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕರಾವಳಿ ಪ್ರದೇಶ ಶಾಂತ ಪರಿಸ್ಥಿತಿಗೆ ಮರಳುತ್ತಿದೆ. ಇನ್ನು ಈ ಪ್ರದೇಶದಲ್ಲಿ ನಡೆದ ಕೊಲೆ ಹಾಗೂ ಸದ್ಯದ ಪರಿಸ್ಥಿತಿ ಕುರಿತಾಗಿ ಮಾತನಾಡಿರುವ IGP ಹರಿಶೇಖರನ್ "RSS ಕಾರ್ಯಕರ್ತ ಶರತ್ ಸಾವಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಬಂಟ್ವಾಳ ತಾಲೂಕಿನಲ್ಲಿ ಪರಿಸ್ಥಿತಿ ಶಾಂತವಾಗಿದೆ. ಶರತ್ ಹತ್ಯೆ ಪ್ರಕರಣದಲ್ಲಿ ಹಲವು ಮಾಹಿತಿ, ದಾಖಲೆಗಳು, ಫೂಟೇಜ್'ಗಳನ್ನು ಕಲೆ ಹಾಕಲಾಗಿದೆ. ಗ್ಯಾಂಗ್'ನ್ನು ಬೇಗ ಸೆರೆ ಹಿಡಿಯಲು ಕ್ರಮ ತೆಗೆದುಕೊಂಡಿದ್ದೇವೆ' ಎಂದಿದ್ದಾರೆ.
ಬಳಿಕ ಮಾತನಾಡಿದ ಅವರು 'ನಿನ್ನೆ ಕಲ್ಲು ತೂರಾಟ ಪ್ರಕರಣದ ಪೂರ್ಣ ವೀಡಿಯೋ ಇದ್ದು ಶವಯಾತ್ರೆಯ ಪೂರ್ಣ ವೀಡಿಯೋ ಚಿತ್ರೀಕರಣ ಮಾಡಿದ್ದೇವೆ. ಅಲ್ಲದೇ 4 ಕೇಸ್ ದಾಖಲಿಸಿಕೊಂಡಿದ್ದು 15 ಜನರನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುವವರ ಬಗ್ಗೆಯೂ ಗಮನ ಇರಿಸಲಾಗಿದೆ. ಗ್ರೂಪ್ ಅಡ್ಮಿನ್'ಗಳು ಹೊಣೆ ಹೊರ ಬೇಕಾಗುತ್ತದೆ. ವದಂತಿ ಹಬ್ಬಿಸುವವರ ವಿರುದ್ದ ಕೂಡಾ ಕ್ರಮ ವಹಿಸಿ ಅಂತಹವರನ್ನು ಬಂಧಿಸುತ್ತೇವೆ' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.