ರಾಜ್ಯದ ಬ್ಯಾಂಕುಗಳ ಬಗ್ಗೆ RBI ಹೇಳಿದ ಆತಂಕದ ಸಂಗತಿ

By Web DeskFirst Published Dec 18, 2018, 8:07 AM IST
Highlights

ದೇಶದ ಬ್ಯಾಂಕುಗಳ ಬಗ್ಗೆ RBI  ಆತಂಕದ ಸಂಗತಿಯೊಂದನ್ನು ಬಿಚ್ಚಿಟ್ಟಿದೆ. ದೇಶದಲ್ಲೇ ಬಿಹಾರದಲ್ಲಿ ಅತೀ ಹೆಚ್ಚು ಬ್ಯಾಂಕ್ ದರೋಡೆ ಪ್ರಕರಣಗಳು ನಡೆಯುತ್ತಿದ್ದರೆ, ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಹೆಚ್ಚು ನಡೆಯುತ್ತಿವೆ. 

ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಬ್ಯಾಂಕ್ ದರೋಡೆ ಪ್ರಕರಣಗಳು ಬಿಹಾರದಲ್ಲಿ ದಾಖಲಾಗಿದ್ದರೆ, ದಕ್ಷಿಣದ ರಾಜ್ಯಗಳ ಪೈಕಿ ಕರ್ನಾಟಕ ನಂ.1 ಆಗಿದೆ. 2013- 14 ರಿಂದೀಚೆಗೆ ಬಿಹಾರದಲ್ಲಿ 434, ಕರ್ನಾಟಕದಲ್ಲಿ 179 ಬ್ಯಾಂಕ್ ದರೋಡೆ ಪ್ರಕರಣಗಳು ನಡೆದಿವೆ.

ಬ್ಯಾಂಕ್‌ಗಳಲ್ಲಿ ನಡೆದ ದರೋಡೆ ಯಿಂದ ಕಳೆದ 5 ವರ್ಷಗಳಲ್ಲಿ ಬ್ಯಾಂಕ್ ಗಳಿಗೆ 236 ಕೋಟಿ ರು.ನಷ್ಟವಾಗಿದೆ. ಆರ್‌ಬಿಐ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಲೋಕಸಭೆಗೆ ನೀಡಿದ ಲಿಖಿತ ಮಾಹಿತಿಯನ್ನು ಈ ಅಂಶಗಳಿವೆ. ದೇಶದಲ್ಲಿ ನಡೆದ ಎಟಿಎಂ ದರೋಡೆ ಪ್ರಕರಣ ಗಳ ಬಗ್ಗೆ ಸರ್ಕಾರದಿಂದ ಮಾಹಿತಿಯನ್ನು ಕೋರಲಾಗಿತ್ತು. ಇದಕ್ಕೆ ಲೋಕಸಭೆ ಯಲ್ಲಿ ಲಿಖಿತ ಉತ್ತರ ನೀಡಿರುವ ಹಣಕಾಸು
ಖಾತೆ ರಾಜ್ಯ ಸಚಿವ ಶಿವಪ್ರತಾಪ್ ಶುಕ್ಲಾ, ಎಟಿಎಂ ದರೋಡೆಗಳ ಬಗ್ಗೆ ಆರ್‌ಬಿಐನಲ್ಲಿ ಪ್ರತ್ಯೇಕ ಮಾಹಿತಿ ಇಲ್ಲ. 

ಆದರೆ 2013 - 14 ರಿಂದೀಚೆಗಿನ ಬ್ಯಾಂಕ್ ದರೋಡೆಗಳ ಬಗ್ಗೆ ಮಾಹಿತಿ ಮಾತ್ರ ಇದೆ.  ಅದರನ್ವಯ 434 ಪ್ರಕರಣಗಳೊಂದಿಗೆ ಬಿಹಾರ ನಂ.1 ಸ್ಥಾನದಲ್ಲಿದ್ದರೆ, 371 ಪ್ರಕರಣಗಳೊಂದಿಗೆ ಪಶ್ಚಿಮ ಬಂಗಾಳ 2 ನೇ ಸ್ಥಾನದಲ್ಲಿದೆ ಎಂದು ಹೇಳಿದೆ. ಇನ್ನು ದಕ್ಷಿಣದ ರಾಜ್ಯಗಳ ಪೈಕಿ 179 ಪ್ರಕರಣಗಳೊಂದಿಗೆ ಕರ್ನಾಟಕ ನಂ.1, 154  ಪ್ರಕರಣಗಳೊಂದಿಗೆ ಆಂಧ್ರಪ್ರ ದೇಶ ನಂ.2 ಮತ್ತು 130 ಪ್ರಕರಣಗಳೊಂದಿಗೆ ತಮಿಳು ನಾಡು 3 ನೇ ಸ್ಥಾನದಲ್ಲಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

click me!