ಲಂಡನ್ ನಲ್ಲಿ ಕೊನೆಯಾಯ್ತು ಬೆಂಗಳೂರು ಲವ್

By Web DeskFirst Published Jul 30, 2018, 8:38 AM IST
Highlights

ವಿದ್ಯಾರ್ಥಿಗಳಾಗಿದ್ದಾಗಿ ಪರಸ್ಪರ ಪ್ರೀತಿಸಿ ಲಂಡನ್ ಗೆ ತೆರಳಿ ಒಟ್ಟಿಗೆ ವಾಸವಿದ್ದ ವಿದ್ಯಾರ್ಥಿಗಳಿಬ್ಬರ ಪ್ರೀತಿ ಲಂಡನ್ ನಲ್ಲಿ ಕೊನೆಗೊಂಡಿದೆ. ಇದೀಗ ವಿದ್ಯಾರ್ಥಿನಿ ನ್ಯಾಯಕ್ಕಾಗಿ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾಳೆ. 

ಬೆಂಗಳೂರು :  ಮದುವೆಯಾಗುವುದಾಗಿ ನಂಬಿಸಿ ಲಂಡನ್ ಗೆ ಕರೆದೊಯ್ದು ವಂಚಿಸಿದ್ದ ಯುವಕನ ವಿರುದ್ಧ ಯುವತಿಯೊಬ್ಬರು ನ್ಯಾಯಕ್ಕಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮೆಟ್ಟಿಲೇರಿದ್ದಾರೆ. 

ರಾಮಮೂರ್ತಿನಗರದ ಕಲ್ಕೆರೆಯ ನಿವಾಸಿ 21 ವರ್ಷದ ಬಿಕಾಂ ವಿದ್ಯಾರ್ಥಿನಿ ವಂಚನೆಗೆ ಒಳಗಾದ ಯುವತಿ. ಸಂಜಯ್ (22) ಯುವತಿಗೆ ವಂಚಿಸಿದ ಆರೋಪಿಯಾಗಿ ದ್ದಾನೆ. ಇವರಿಬ್ಬರು ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದು, 1 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಕುಟುಂಬಸ್ಥರಿಗೆ ತಿಳಿ ದು ಸಂಜಯ್ ಪಾಲಕರು ಯುವತಿಯನ್ನು ಈ ಬಗ್ಗೆ ಪ್ರಶ್ನಿಸಿದ್ದರು ಎನ್ನಲಾಗಿದೆ. 

ಬಳಿಕ ಕೆಲ ದಿನಗಳ ನಂತರ ವ್ಯಾಸಂಗಕ್ಕಾಗಿ ಯುವತಿಗೆ ತಿಳಿಸದೆ ಸಂಜಯ್ ಲಂಡನ್‌ಗೆ ತೆರಳಿದ್ದ. ನಂತರ ಆತ ಯುವತಿಗೆ ಕರೆ ಮಾಡಿ ನೀನು ಲಂಡನ್‌ಗೆ ಬಾ. ನಾವಿಬ್ಬರು ಇಲ್ಲೇ ವಿವಾಹವಾಗಿ ಇರೋಣ ಎಂದಿದ್ದನಂತೆ. ಸಂಜಯ್ ನನ್ನನ್ನು ವಿವಾಹವಾಗುತ್ತಾನೆ ಎಂದು ನಂಬಿದ ಸಂತ್ರಸ್ತೆ ಲಂಡನ್‌ಗೆ ಹೋಗಿದ್ದರು.

ನಂತರ ಇಬ್ಬರು ಒಂದೇ ರೂಮ್‌ನಲ್ಲಿ ಲಿವಿಂ ಗ್ ಟುಗೆದರ್ ರಿಲೇಷನ್‌ಷಿಪ್‌ನಲ್ಲಿದ್ದರು. ಆದರೆ, ಕೆಲ ದಿನಗಳ ಬಳಿಕ ಕ್ಷುಲ್ಲಕ ಕಾರಣಕ್ಕೆಇಬ್ಬರ ನಡುವೆ ವೈಮನಸ್ಸುಂಟಾಗಿದೆ. ಇಬ್ಬರು ಲಂಡನ್‌ನಲ್ಲಿ ಒಟ್ಟಿಗೆ ಇರುವುದ ನ್ನು ಕಂಡುಕೊಂಡ ಸಂಜಯ್ ಪೋಷಕರು ಅನಾರೋಗ್ಯ ನೆಪದಲ್ಲಿ ಮಗನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದಾರೆ. ಇನ್ನೊಂದೆಡೆ ಸಂಜಯ್ ಪೋಷಕರಿಂದ ಜೀವ ಬೆದರಿಕೆ ಇರುವ ಕುರಿತಂತೆ ಯುವತಿಗೆ ಆಕೆಯ ಪೋಷಕರುತಿಳಿಸಿದ್ದಾರೆ. ನಗರಕ್ಕೆ ಬಂದು ಸಂಜಯ್‌ನ ನ್ನು ಭೇಟಿಯಾಗಿ ಮದುವೆಯಾಗುವಂತೆ ಕೇಳಿದ್ದಾರೆ. 

ಇದಕ್ಕೆ ಸಂಜಯ್ ನಿರಾಕರಿಸಿದ್ದು, ಈ ಹಿನ್ನೆಲೆ ರಾಮಮೂರ್ತಿ ನಗರ ಪೊಲೀಸ ರಿಗೆ ಯುವತಿ ದೂರು ನೀಡಿದ್ದಾರೆ. ಕೆಲ ದಿನಗಳ ನಂತರ ಪರೀಕ್ಷೆ ಬರೆಯಲು ಪುನಃ ಲಂಡನ್‌ಗೆ ತೆರಳಿದ್ದ ಯುವತಿ ಅಲ್ಲಿ ಉಳಿದುಕೊಂಡಿದ್ದ ಕೊಠಡಿಗೆ ಬಂದು ಸಂಜಯ್ ಹಲ್ಲೆ ನಡೆಸಿರುವುದಾಗಿ ಆರೋಪಿ ಸಿದ್ದಾರೆ. ತನಗೆ ಮೋಸ ಮಾಡಿರುವ ಸಂಜಯ್ ವಿರುದ್ಧ ಲಂಡನ್ ಪೊಲೀಸರಿಗೂ ಯುವಕನ ವಿರುದ್ಧ ದೂರು ನೀಡಿದ್ದಾರೆ.

click me!