ಪ್ರತೀ ಲೀಟರ್ ಹಾಲಿಗೆ 1 ರು. ಹೆಚ್ಚಳ

By Web DeskFirst Published Oct 28, 2018, 8:25 AM IST
Highlights

ಹಾಲು ಉತ್ಪಾದಕರಿಂದ ಕೊಳ್ಳುವ ಪ್ರತಿ ಲೀಟರ್ ಹಾಲಿಗೆ 1 ಹೆಚ್ಚು ನೀಡಲು ನಿರ್ಧರಿಸಿದ್ದು, ಕೆಲವೇ ತಿಂಗಳಲ್ಲಿ ಮತ್ತೆ 1 ರು. ಹೆಚ್ಚಿಸಲು ಯೋಜಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಬಿ.ಜಿ.ಆಂಜಿನಪ್ಪ ತಿಳಿಸಿದ್ದಾರೆ. 
 

ಆನೇಕಲ್: ಹಾಲು ಉತ್ಪಾದಕರಿಂದ ಕೊಳ್ಳುವ ಪ್ರತಿ ಲೀಟರ್ ಹಾಲಿಗೆ 1 ಹೆಚ್ಚು ನೀಡಲು ನಿರ್ಧರಿಸಿದ್ದು, ಕೆಲವೇ ತಿಂಗಳಲ್ಲಿ ಮತ್ತೆ 1 ರು. ಹೆಚ್ಚಿಸಲು ಯೋಜಿಸಲಾಗಿದೆ ಎಂದು ಬಮೂಲ್ ಅಧ್ಯಕ್ಷ ಬಿ.ಜಿ.ಆಂಜಿನಪ್ಪ ತಿಳಿಸಿದರು. 

ಆನೇಕಲ್ ಶೀತಲಕೇಂದ್ರ ಕಚೇರಿಯಲ್ಲಿ ಮಾತನಾಡಿ, ಹಾಲು ಉತ್ಪಾದಕ ಸೊಸೈಟಿಯ ಸಿಬ್ಬಂದಿಗೆ ಶೇ.30 ರಷ್ಟು ಹೆಚ್ಚು ಸಂಬಳ ನೀಡಲಾಗುತ್ತದೆ. ಬಮೂಲ್ ವ್ಯಾಪ್ತಿಯಲ್ಲಿ ದಿನಂಪ್ರತಿ 15 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗು ತ್ತಿದ್ದು, ಹತ್ತರಿಂದ ಹನ್ನೆರಡು ಲಕ್ಷ ಲೀಟರ್ ನಂದಿನಿ ಹಾಲು, ಮೊಸರು ಹಾಗೂ ಇತರ ಉತ್ಪನ್ನಗಳ ತಯಾರಿಕೆಗೆ ಬಳಕೆಯಾಗುತ್ತಿದೆ. ಉಳಿಕೆ ಹಾಲನ್ನು ಪೌಡರ್ ಮಾಡುತ್ತಿದ್ದು, ಮಾರಾಟದ ಜೊತೆಗೆ ಶಾಲಾ ಮಕ್ಕಳಿಗೆ ಕೆನೆ ಭರಿತ ಆರೋಗ್ಯಪೂರ್ಣ ಹಾಲನ್ನು ಪೂರೈಸಲಾಗುತ್ತಿದೆ. 

ಆರೋಗ್ಯ ವಿಮೆ ಯೋಜನೆಯಡಿ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರಿಗೆ ವಾರ್ಷಿಕ 50 ಸಾವಿರದ ವರೆಗೆ ಆಸ್ಪತ್ರೆ ವೆಚ್ಚ ಸಿಗಲಿದೆ ಎಂದರು.

click me!