ಜಾಗತಿಕ ಉಗ್ರ ಪಟ್ಟಿಗೆ ಅಜರ್‌: ನಾಳೆ ವಿಶ್ವಸಂಸ್ಥೆ ನಿರ್ಣಯ?

By Web DeskFirst Published Mar 12, 2019, 8:11 AM IST
Highlights

ಜಾಗತಿಕ ಉಗ್ರ ಪಟ್ಟಿಗೆ ಅಜರ್‌: ನಾಳೆ ವಿಶ್ವಸಂಸ್ಥೆ ನಿರ್ಣಯ? ಅಮೆರಿಕ, ಬ್ರಿಟನ್‌, ಫ್ರಾನ್ಸ್‌ನ ಪ್ರಸ್ತಾವ ಅಂಗೀಕಾರ ಸಾಧ್ಯತೆ |  ಚೀನಾ ನಿಲುವು ಇನ್ನೂ ಗುಪ್ತ

ನವದೆಹಲಿ/ಬೀಜಿಂಗ್‌ (ಮಾ. 12): ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಬೇಕೆಂಬ ಪ್ರಸ್ತಾಪ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಂದೆ ಬುಧವಾರ ಚರ್ಚೆಗೆ ಬರಲಿದೆ.

ಸಿಆರ್‌ಪಿಎಫ್‌ನ 40 ಯೋಧರನ್ನು ಬಲಿ ಪಡೆದ ಜಮ್ಮು-ಕಾಶ್ಮೀರದ ಪುಲ್ವಾಮಾ ದಾಳಿಯ ಬಳಿಕ ಅಜರ್‌ ವಿರುದ್ಧ ಅಮೆರಿಕ, ಬ್ರಿಟನ್‌ ಹಾಗೂ ಫ್ರಾನ್ಸ್‌ ದೇಶಗಳು ಭದ್ರತಾ ಮಂಡಳಿಯಲ್ಲಿ ನಿರ್ಣಯ ಮಂಡನೆ ಮಾಡಿವೆ. ಈಗಾಗಲೇ 3 ಬಾರಿ ಭಾರತ ಹಾಗೂ ಇತರೆ ದೇಶಗಳು ಮಂಡನೆ ಮಾಡಿದ್ದ ನಿರ್ಣಯಕ್ಕೆ ಅಡ್ಡಿಪಡಿಸಿದ್ದ ಚೀನಾ, ಈ ಬಾರಿ ಯಾವ ನಿಲುವು ತೆಗೆದುಕೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಪಷ್ಟಉತ್ತರ ಕೊಡಲು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌ ಅವರು ನಿರಾಕರಿಸಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಠಿಣ ನಿಯಮ ಹಾಗೂ ಮಾನದಂಡಗಳನ್ನು ಹೊಂದಿದೆ. ಕೇವಲ ಮಾತುಕತೆ ಮೂಲಕವಷ್ಟೇ ಒಂದು ಜವಾಬ್ದಾರಿಯುತ ಪರಿಹಾರ ಹುಡುಕಬಹುದಾಗಿದೆ ಎಂದು ಸೋಮವಾರ ತಿಳಿಸಿದ್ದಾರೆ.

click me!