
ಲಕ್ನೋ(ಆ.28): 2013 ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಗಲಭೆಗೆ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್ ಅವರೇ ಹೊಣೆ ಎಂದು ರಾಜ್ಯಸಭೆ ಸಂಸದ ಅಮರ್ ಸಿಂಗ್ ಆರೋಪಿಸಿದ್ದಾರೆ.
2019ರಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ತಾವು ಬಿಜೆಪಿಗೆ ಬೆಂಬಲ ನೀಡುವುದಾಗಿ ಅಮರ್ ಸಿಂಗ್ ಘೋಷಿಸಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರಂತ ರಾಜಕಾರಣಿಗಳು ಅಜಂ ಖಾನ್ ಅವರಂತ ನಾಯಕರನ್ನು ರೂಪಿಸುತ್ತಾರೆ. ಈ ಕಾರಣದಿಂದ 2013 ರಲ್ಲಿ ನಡೆದಂತ ಘಟನೆಗಳು ನಡೆಯುತ್ತವೆ ಎಂದು ಅಮರ್ ಸಿಂಗ್ ಟೀಕಿಸಿದ್ದಾರೆ.
ಮುಜಾಫರ್ ನಗರ ಗಲಭೆ ಉತ್ತುಂಗದಲ್ಲಿದ್ದಾಗ, ಸಮಾಜವಾದಿ ಪಕ್ಷದ ನಾಯಕರು ಸಾಯ್ ಪೈ ಮಹೋತ್ಸವ ಎಂಜಾಯ್ ಮಾಡುತ್ತಿದ್ದರು ಎಂದು ಮರ್ ಸಿಂಗ್ ಆರೋಪಿಸಿದ್ದಾರೆ.
ಅಮರ್ ಸಿಂಗ್ ಅವರನ್ನು ಸಾರ್ವಜನಿಕವಾಗಿ ಹತ್ಯೆ ಮಾಡಬೇಕು ಹಾಗೂ ಅವರ ಹೆಂಡತಿ ಮತ್ತು ಮಗಳಿಗೆ ಆ್ಯಿಸಿಡ್ ಹಾಕಬೇಕು ಎಂದು ಸಂದರ್ಶನವೊಂದರಲ್ಲಿ ಅಜಂಖಾನ್ ಬೆದರಿಕೆ ಹಾಕಿದ್ದರು. ಹೀಗಾಗಿ ನನ್ನ ಮಗಳು ಶಾಲೆಗೆ ಹೋಗಲು ಹೆದರುತ್ತಿದ್ದಾಳೆ ಎಂದು ಸುದ್ದಿಗೋಷ್ಠಿಯಲ್ಲಿ ಅಮರ್ ಸಿಂಗ್ ಹೇಳಿದ್ದಾರೆ.
ಸಮಾಜವಾದಿ ಪಕ್ಷ ನಮಾಜ್ ವಾದಿಯಾಗುತ್ತಿದೆ ಎಂದು ಅಮರ್ ಸಿಂಗ್ ಲೇವಡಿ ಮಾಡಿದ್ದಾರೆ. ಗುಜರಾತ್ ನಲ್ಲ ನಡೆದರೇ ಅದು ಗಲಭೆಯಾಗುತ್ತದೆ ಎಂದಾದರೇ ಉತ್ತರ ಪ್ರದೇಶದಲ್ಲಿ ನಡೆದದ್ದು ಗಲಭೆಯಲ್ಲವೇ ಎಂದು ಪ್ರಶ್ನಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.