ಆಯುಧ ಪೂಜೆ: ಪ್ರತಿ ಬಸ್‌ಗೆ 10 ರು.!

By Web DeskFirst Published Oct 18, 2018, 10:03 AM IST
Highlights

ರಾಜ್ಯದಲ್ಲಿ ಎಲ್ಲೆಡೆ ನವರಾತ್ರಿಯ ಸಮಭ್ರಮ ಮನೆ ಮಾಡಿದೆ. ನವರಾತ್ರಿಯ ಈ ಸಂದರ್ಭದಲ್ಲಿ  ಇವರು ಮಾತ್ರ ಗೊಂದಲದಲ್ಲಿದ್ದಾರೆ. ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ದಸರಾ ಆಯುಧ ಪೂಜೆಯ ಸಂದರ್ಭದಲ್ಲಿ ಬಸ್‌ಗೆ ಪೂಜೆ ಮಾಡಲು ಒಂದು ಬಸ್‌ಗೆ ನೀಡುತ್ತಿರುವ ಮೊತ್ತ 10 ರುಪಾಯಿ!

ಕೊಪ್ಪಳ :  ಈಶಾನ್ಯ ಸಾರಿಗೆ ಸಂಸ್ಥೆಯಲ್ಲಿ ದಸರಾ ಆಯುಧ ಪೂಜೆಯ ಸಂದರ್ಭದಲ್ಲಿ ಬಸ್‌ಗೆ ಪೂಜೆ ಮಾಡಲು ಒಂದು ಬಸ್‌ಗೆ ನೀಡುತ್ತಿರುವ ಮೊತ್ತ 10 ರುಪಾಯಿ! ಇದರಲ್ಲಿ ಹೂವು ತರಬೇಕೋ, ನಿಂಬೆ ಬಣ್ಣು ತರಬೇಕೋ, ಕಡ್ಡಿ ಕರ್ಪೂರ ತರಬೇಕೋ, ಹಣ್ಣು ಕಾಯಿ ತರಬೇಕೋ, ಸಿಹಿ ಹಂಚಬೇಕೋ ಎಂಬ ಗೊಂದಲದಲ್ಲಿದ್ದಾರೆ. ಸಾರಿಗೆ ಸಂಸ್ಥೆಯ ಸಿಬ್ಬಂದಿ. 

"

ಕಳೆದ ವರ್ಷ ಕೇವಲ . 7 ರು. ನೀಡಲಾಗಿತ್ತು. ಈ ಬಾರಿ ಅದನ್ನು . 10ಕ್ಕೆ ಹೆಚ್ಚಿಸಿ ಉದಾರತೆ ಮೆರೆದಿದೆ ಸಂಸ್ಥೆ! ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ ಪ್ರತಿ ಬಸ್‌ಗೆ .15 ನೀಡುತ್ತಿದ್ದರೆ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳಲ್ಲಿ .100 ನೀಡಲಾಗುತ್ತಿದೆ.

"

ಕಳೆದ ವರ್ಷ ಸಂಸ್ಥೆ ನೀಡಿದ್ದ .7ನ್ನು ಈಶಾನ್ಯ ಸಾರಿಗೆ ಸಂಸ್ಥೆಯ ಸ್ವಾಭಿಮಾನಿ ನೌಕರರು ತಿರಸ್ಕರಿಸಿದ್ದರು. ನಿಮ್ಮ ಈ ಹಣ ಬೇಡ. ವರ್ಷವಿಡಿ ಓಡಿಸುವ, ಉಪಯೋಗಿಸುವ, ಮಕ್ಕಳಂತೆ ಪ್ರೀತಿಸುವ ಈ ವಾಹನಗಳು ನಮ್ಮ ಜೀವನಾಡಿ. ನಾವೇ ಹಣ ಹಾಕಿ ಅಗತ್ಯ ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡುತ್ತೇವೆ ಎಂದು ತಮ್ಮ ಕೈಯ್ಯಿಂದಲೇ ಹಣ ಹಾಕಿ ಅದ್ಧೂರಿಯಾಗಿ ಪೂಜೆ ನೆರವೇರಿಸಿದ್ದರು. ಈ ಬಾರಿಯೂ ಸಂಸ್ಥೆ ನೀಡುತ್ತಿರುವ .10ನ್ನು ಪಡೆಯದಿರಲು ಸಂಸ್ಥೆಯ ನೌಕರರು ನಿರ್ಧರಿಸಿದ್ದಾರೆ.

click me!